ETV Bharat / sports

IPL​ನಲ್ಲಿ RCB ಸೇರಿ 9 ತಂಡಗಳಿಗೆ ಆಡಿರುವ ಏಕೈಕ ಪ್ಲೇಯರ್​ ಇವರೇ! - WHICH PLAYER PLAYED MOST IPL TEAMS

ಐಪಿಎಲ್​ನಲ್ಲಿ ಆರ್​ಸಿಬಿ ಸೇರಿ ಹೆಚ್ಚಿನ ತಂಡಗಳಿಗೆ ಆಡಿರುವ ಆಟಗಾರರ ಪಟ್ಟಿ ಹೀಗಿದೆ.

AARON FINCH  PLAYER WITH MOST IPL TEAMS  PLAYER WITH MOST IPL FRANCHISE  ಐಪಿಎಲ್​ 2025  IPL 2025
Which Player played most ipl teams (ETV Bharat)
author img

By ETV Bharat Sports Team

Published : April 15, 2025 at 11:32 AM IST

2 Min Read

Which Player played most IPL teams: ಇಂಡಿಯನ್ ಪ್ರೀಮಿಯರ್ ಲೀಗ್ (IPL) 18ನೇ ಸೀಸನ್ ಭರ್ಜರಿಯಾಗಿ ಸಾಗುತ್ತಿದೆ. ಈಗಾಗಲೇ 30 ಪಂದ್ಯಗಳು ಮುಕ್ತಾಯಗೊಂಡಿವೆ. ಈ ಬಾರಿಯ ಐಪಿಎಲ್​ ಹೊಸ ತನದಿಂದ ಕೂಡಿದೆ. ಕಾರಣ ಎಲ್ಲ 10 ತಂಡಗಳಲ್ಲಿ ಆಟಗಾರರು ಬದಲಾಗಿದ್ದಾರೆ. ಹೆಚ್ಚು ಕಾಲ ಒಂದೇ ತಂಡಕ್ಕೆ ಆಡಿದ್ದ ಕೆಲವು ಆಟಗಾರರು ಈ ಆವೃತ್ತಿಯಲ್ಲಿ ಬೇರೆ ಬೇರೆ ತಂಡಗಳಿಗೆ ಸೇರಿದ್ದಾರೆ.

ಐಪಿಎಲ್​ನಲ್ಲಿ ಆಟಗಾರರ ಫ್ರಾಂಚೈಸಿ ಬದಲಾಗುವುದು ಸಾಮಾನ್ಯ ವಿಷಯ. ಆದರೆ, ಈ ಒಬ್ಬ ಆಟಗಾರ ಐಪಿಎಲ್​ನಲ್ಲಿ ಎಲ್ಲ ತಂಡಗಳಿಗೂ ಆಡಿದ್ದು ಹೆಚ್ಚು ಫ್ರಾಂಚೈಸಿಗಳಿಗೆ ಆಡಿರುವ ಏಕೈಕ ಆಟಗಾರನಾಗಿಯೂ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಎಂದು ತಿಳಿಯಿರಿ.

  • ಐಪಿಎಲ್‌ನಲ್ಲಿ ಅತಿ ಹೆಚ್ಚು ತಂಡಗಳನ್ನು ಪ್ರತಿನಿಧಿಸಿದ ದಾಖಲೆ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್ ಅವರ ಹೆಸರಿನಲ್ಲಿದೆ. ಫಿಂಚ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು ಒಂಬತ್ತು ಫ್ರಾಂಚೈಸಿಗಳ ಪರ ಆಡಿದ್ದಾರೆ. ಅವರು 2010 ರಲ್ಲಿ ರಾಜಸ್ಥಾನ್ ರಾಯಲ್ಸ್ ಜೊತೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ದೆಹಲಿ, ಪುಣೆ ವಾರಿಯರ್ಸ್ ಇಂಡಿಯಾ, ಸನ್‌ರೈಸರ್ಸ್, ಮುಂಬೈ, ಗುಜರಾತ್ ಲಯನ್ಸ್, ಪಂಜಾಬ್, ಬೆಂಗಳೂರು ಮತ್ತು ಕೋಲ್ಕತ್ತಾ ಪರ ಆಡಿದ್ದರು. ಫಿಂಚ್​ 2022ರಲ್ಲಿ ಅಲೆಕ್ಸ್ ಹೇಲ್ಸ್ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕೋಲ್ಕತ್ತಾ ಸೇರಿದರು. ಇದರೊಂದಿಗೆ, ಅವರು ಅತಿ ಹೆಚ್ಚು ಫ್ರಾಂಚೈಸಿಗಳ ಭಾಗವಾಗಿರುವ ಆಟಗಾರ ಎಂಬ ದಾಖಲೆಯನ್ನು ಸ್ಥಾಪಿಸಿದರು. ಫಿಂಚ್ ಐಪಿಎಲ್‌ನ ಹತ್ತು ಋತುಗಳಲ್ಲಿ ಆಡಿ 2005 ರನ್‌ಗಳನ್ನು ಗಳಿಸಿದ್ದಾರೆ.
  • ಜಯದೇವ್ ಉನದ್ಕತ್: ಭಾರತದ ವೇಗಿ ಜಯದೇವ್ ಉನದ್ಕತ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಐಪಿಎಲ್​ನಲ್ಲಿ ಎಂಟು ತಂಡಗಳಿಗಾಗಿ ಆಡಿದ್ದಾರೆ. ಈ ಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ದೆಹಲಿ, ಬೆಂಗಳೂರು, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ರಾಜಸ್ಥಾನ ರಾಯಲ್ಸ್​, ಮುಂಬೈ, ಲಕ್ನೋ ಮತ್ತು ಸನ್‌ರೈಸರ್ಸ್ ತಂಡಗಳು ಸೇರಿವೆ. ಏತನ್ಮಧ್ಯೆ, ಉನಾದ್ಕತ್​ ಅತಿ ಹೆಚ್ಚು ತಂಡಗಳಿಗಾಗಿ ಆಡಿದ ಭಾರತೀಯ ಕ್ರಿಕೆಟಿಗ ಕೂಡ ಹೌದು.
  • ಮನೀಶ್ ಪಾಂಡೆ: ಮನೀಶ್ ಪಾಂಡೆ ಏಳು ಐಪಿಎಲ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರ ವೃತ್ತಿಜೀವನ ಮುಂಬೈ ಇಂಡಿಯನ್ಸ್‌ನಿಂದ ಪ್ರಾರಂಭವಾಯಿತು. ನಂತರ ಬೆಂಗಳೂರು, ಪುಣೆ, ಕೋಲ್ಕತ್ತಾ, ಸನ್‌ರೈಸರ್ಸ್ ಹೈದರಾಬಾದ್, ಲಕ್ನೋ ಮತ್ತು ದೆಹಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
  • ದಿನೇಶ್ ಕಾರ್ತಿಕ್: ಐಪಿಎಲ್‌ನಲ್ಲಿ ದಿನೇಶ್ ಕಾರ್ತಿಕ್ 6 ತಂಡಗಳನ್ನು ಬದಲಾಯಿಸಿದ್ದಾರೆ. ದೆಹಲಿ, ಪಂಜಾಬ್, ಮುಂಬೈ, ಗುಜರಾತ್, ಕೋಲ್ಕತ್ತಾ ಮತ್ತು ಬೆಂಗಳೂರು ತಂಡಗಳಿಗಾಗಿ ಆಡಿದ್ದಾರೆ.
  • ವರುಣ್ ಆರನ್: ವೇಗದ ಬೌಲರ್ ವರುಣ್ ಆರನ್ ಕೂಡ ಆರು ತಂಡಗಳಿಗೆ ಆಡಿದ್ದರು. ಅವರು ಕೋಲ್ಕತ್ತಾ, ದೆಹಲಿ, ಪಂಜಾಬ್, ಬೆಂಗಳೂರು, ರಾಜಸ್ಥಾನ ಮತ್ತು ಗುಜರಾತ್‌ಗಳನ್ನು ಪ್ರತಿನಿಧಿಸಿದ್ದರು .
  • ಮುರುಗನ್ ಅಶ್ವಿನ್: ಲೆಗ್ ಸ್ಪಿನ್ನರ್ ಮುರುಗನ್ ಅಶ್ವಿನ್ ಆರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಪುಣೆ, ದೆಹಲಿ, ಪಂಜಾಬ್, ಮುಂಬೈ, ರಾಜಸ್ಥಾನ, ಬೆಂಗಳೂರು.
  • ಇಶಾಂತ್ ಶರ್ಮಾ: ವೇಗದ ಬೌಲರ್ ಇಶಾಂತ್ ಶರ್ಮಾ ಕೂಡ 6 ಫ್ರಾಂಚೈಸಿಗಳಿಗೆ ಆಡಿದ್ದಾರೆ. ಕೋಲ್ಕತ್ತಾ, ದೆಹಲಿ, ಪಂಜಾಬ್, ಹೈದರಾಬಾದ್, ಡೆಕ್ಕನ್ ಚಾರ್ಜರ್ಸ್, ಪುಣೆ ಪರ ಆಡಿದ್ದಾರೆ.
  • ಯುವರಾಜ್ ಸಿಂಗ್: ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಆರು ತಂಡಗಳನ್ನು ಬದಲಾಯಿಸಿದ್ದಾರೆ. ಅವರು ಪಂಜಾಬ್, ಪುಣೆ, ಬೆಂಗಳೂರು, ದೆಹಲಿ, ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಪರ ಆಡಿದ್ದರು.

ಇದನ್ನೂ ಓದಿ: ಐಪಿಎಲ್​ ಇತಿಹಾಸದಲ್ಲೇ ಮೊದಲ ಆಟಗಾರನಾಗಿ ಅಪರೂಪದ ದಾಖಲೆ ಬರೆದ ಧೋನಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.