ETV Bharat / sports

ಪಂದ್ಯದ ನಡುವೆಯೇ ವಾಗ್ವಾದಕ್ಕಿಳಿದ ವಿರಾಟ್​ - ರಾಹುಲ್​: ಅಸಲಿ ಕಾರಣ ಇದೇ! - VIRAT KOHLI AND KL RAHUL ARGUE

Virat Kohli and KL Rahul Argue: ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್ ಬೆಂಗಳೂರು​ ನಡುವಿನ ಪಂದ್ಯದ ವೇಳೆ ವಿರಾಟ್​ ಕೊಹ್ಲಿ ಮತ್ತು ಕೆಎಲ್​ ರಾಹುಲ್​ ಮಧ್ಯೆ ವಾಗ್ವಾದ ನಡೆಯಿತು.

Virat Kohli and KL Rahul Argue  Virat Kohli KL Rahul Fight  DC vs RCB Kohli Rahul Fight  Virat Kohli Kantara Celebration
Virat Kohli and KL Rahu Argue (AFP)
author img

By ETV Bharat Sports Team

Published : April 28, 2025 at 10:33 AM IST

2 Min Read

Virat Kohli and KL Rahul Argue: ಭಾನುವಾರ ಅರುಣ್​ ಜೇಟ್ಲಿ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆರ್​ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್​​ ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ್ದ 162 ರನ್​ಗಳ ಗುರಿಯನ್ನು ಬೆನ್ನುಹತ್ತಿದ ಬೆಂಗಳೂರು ತಂಡ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿಕೊಂಡಿತು.

ಆರ್​ಸಿಬಿ ಪರ ಕೃನಾಲ್​ ಪಾಂಡ್ಯ ಮತ್ತು ವಿರಾಟ್​ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದರು. ಈ ಇಬ್ಬರು 84 ಎಸೆತಗಳಲ್ಲಿ 119 ರನ್​ ಬಾರಿಸಿದರು. ಆರಂಭಿಕ ಹಂತದಲ್ಲಿ ಆರ್​ಸಿಬಿ ಪವರ್​ಪ್ಲೇ ನಲ್ಲಿ 26 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿತ್ತು. ವಿರಾಟ್​ 47 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 51 ರನ್​ ಚಚ್ಚಿದರೇ, ಕೃನಾಲ್​ 47 ಎಸೆತಗಳಲ್ಲಿ 5 ಬೌಂಡರಿ 4 ಸಿಕ್ಸರ್​ ಸಹಾಯದಿಂದ ಅಜೇಯವಾಗಿ 73 ರನ್ ಬಾರಿಸಿ ಪಂದ್ಯವನ್ನು ಗೆಲ್ಲಿಸಿದರು.

ಆದರೆ ಈ ಪಂದ್ಯದ ನಡುವೆ ವಿರಾಟ್​ ಕೊಹ್ಲಿ ಮತ್ತು ಕೆಎಲ್​ ರಾಹುಲ್​ ವಾಗ್ವಾದಕ್ಕಿಳಿದಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಇಬ್ಬರ ಮಧ್ಯೆ ನಡೆದ ಚರ್ಚೆ ಏನು ಎಂಬುದರ ಬಗ್ಗೆ ಫ್ಯಾನ್ಸ್​ಗಳು ಹುಡುಕಾಟ ನಡೆಸಿದ್ದಾರೆ. ಏತಕ್ಕೆ ಕೊಹ್ಲಿ ಡೆಲ್ಲಿ ವಿಕೆಟ್​ ಕೀಪರ್​ ರಾಹುಲ್​ ಜೊತೆ ವಾಗ್ವಾದಕ್ಕಿಳಿದರು ಇಬ್ಬರ ಮಧ್ಯೆ ಅಂತಹದ್ದೇನಾಯಿತು ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಈ ಇಬ್ಬರ ಮಧ್ಯೆ ನಡೆದ ಸಂಭಾಷಣೆ ಏನು ಎಂಬುದರ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ. ಆದರೆ, ಕೊಹ್ಲಿ ಅಂಪೈರ್ ಕೊಟ್ಟ ನಿರ್ಧಾರದಿಂದ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕೆಎಲ್ ರಾಹುಲ್ ಬಳಿ ಹೋಗಿ ಅಂಪೈರ್ ನಿರ್ಧಾರದ ಬಗ್ಗೆ ವಾದಿಸುತ್ತಿರುವಂತೆ ತೋರುತ್ತಿದೆ. ಸ್ವಲ್ಪ ಸಮಯದ ನಂತರ ಕೊಹ್ಲಿ ಮತ್ತೆ ಬ್ಯಾಟಿಂಗ್ ಮುಂದುವರಿಸಿದರು.

ಕಾಂತಾರ ರೀಕ್ರಿಯೇಟ್​: ಪಂದ್ಯದ ಬಳಿಕ ವಿರಾಟ್​ ಕೊಹ್ಲಿ ರಾಹುಲ್​ ಬಳಿಗೆ ತೆರಳಿ ಕಾಂತಾರ ಶೈಲಿಯಲ್ಲಿ ಸಂಭ್ರಮಿಸಿದರು. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೆಎಲ್​ ರಾಹುಲ್​ ಅಂದು ಕಾಂತಾರ ಶೈಲಿಯಂತೆ ಚಿನ್ನಸ್ವಾಮಿ ಮೈದಾನದಲ್ಲಿ ವೃತ್ತ ಎಳೆದು ಇದು ನನ್ನ ಮೈದಾನ ಎಂದು ಹೇಳಿಕೊಂಡು ಸಂಭ್ರಮಿಸಿದ್ದರು.

ಇದೀಗ ಕೊಹ್ಲಿ ಇದಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಬಳಿಕ ರಾಹುಲ್​ ಬಳಿ ತೆರಳಿ ಆತ್ಮಿಯವಾಗಿ ಮಾತನಾಡಿದರು.

ಇದನ್ನೂ ಓದಿ: ಹೇಗಿತ್ತು ಗೊತ್ತಾ ವಿರಾಟ್​ ಪ್ರತ್ಯುತ್ತರ?: ರಾಹುಲ್ ಬಳಿ ತೆರಳಿ ವೃತ್ತ ಎಳೆದ ಕೊಹ್ಲಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.