World cup 2025 qualifier match: ಅದೃಷ್ಟ ಒಲಿದರೆ ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಒಂದು ವೇಳೆ ಅದೃಷ್ಟ ಕೈಕೊಟ್ಟರೆ ಎಷ್ಟೇ ಪ್ರಯತ್ನ ಪಟ್ಟರು ಬಯಸಿದ್ದು ಸಿಗಲ್ಲ ಇದಕ್ಕೆ ಬೆಸ್ಟ್ ಉದಾರಣೆ ಅಂದರೆ ವೆಸ್ಟ್ ಇಂಡೀಸ್ ತಂಡ.
ಹೌದು, ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಥೈಲ್ಯಾಂಡ್ ತಂಡದ ವಿರುದ್ಧ ಆರು ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದರೂ ವೆಸ್ಟ್ ಇಂಡೀಸ್ ತಂಡ 2025ರ ಮಹಿಳಾ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಆಡಿದ್ದ 5 ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಎರಡರಲ್ಲಿ ಸೋಲನ್ನು ಕಂಡಿದ್ದ ವೆಸ್ಟ್ ಇಂಡೀಸ್ ಮಹಿಳಾ ತಂಡ ಥೈಲ್ಯಾಂಡ್ ವಿರುದ್ದದ ತನ್ನ ಕೊನೆಯ ಪಂದ್ಯದಲ್ಲಿ ಉತ್ತಮ ರನ್ರೇಟ್ನೊಂದಿಗೆ ಗೆಲುವು ಸಾಧಿಸುವುದು ಅಗತ್ಯವಾಗಿತ್ತು.

ಅದರಂತೆ ಈ ಪಂದ್ಯದಲ್ಲಿ ಥೈಲ್ಯಾಂಡ್ ತಂಡ ಮೊದಲ ಬ್ಯಾಟಿಂಗ್ ಮಾಡಿ ವೆಸ್ಟ್ ಇಂಡೀಸ್ಗೆ 167ರನ್ಗಳ ಗುರಿಯನ್ನು ನೀಡಿತ್ತು. ಕೆರೆಬಿಯನ್ ಪಡೆ ವಿಶ್ವಕಪ್‌ಗೆ ಅರ್ಹತೆ ಪಡೆಯಬೇಕೆಂದರೆ 10.1 ಓವರ್ಗಳಲ್ಲೆ ಈ ಗುರಿಯನ್ನು ತಲುಪಬೇಕಿತ್ತು.
ಅದಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಿದ ಕೆರೆಬಿಯನ್ ಪಡೆ ಗೆಲುವಿಗಾಗಿ ಕೊನೆ ವರೆಗೂ ಹೋರಾಡಿತು. ಅದರಲ್ಲೂ ಆರಂಭಿಕ ಬ್ಯಾಟರ್ ಹೇಲಿ ಮ್ಯಾಥ್ಯು ಅವರ ಸ್ಫೋಟಕ ಬ್ಯಾಟಿಂಗ್ ನಿಂದ 29 ಎಸೆತಗಳಲ್ಲೇ 11 ಬೌಂಡರಿ 2 ಸಿಕ್ಸರ್ ಸಹಾಯದಿಂದ 70 ರನ್ ಚಚ್ಚಿದರೇ, ಹೆನ್ರಿ 17 ಎಸೆತಗಳಲ್ಲಿ 48 ರನ್ ಬಾರಿಸಿದರು ಇವರರ ಬ್ಯಾಟಿಂಗ್ ಬಲದಿಂದಾಗಿ ವೆಸ್ಟ್ ಇಂಡೀಸ್ ತಂಡ ಕೇವಲ 10.5 ಓವರ್ಗಳಲ್ಲೆ 167ರನ್ ಗುರಿಯನ್ನು ಯಶಸ್ವಿಯಾಗಿ ಭೇದಿಸಿ ಪಂದ್ಯವನ್ನು ಗೆದ್ದುಕೊಂಡಿತು.
ಆದರೆ ವೆಸ್ಟ್ ಪಂದ್ಯ ಗೆಲುವಿಗೆ 4 ಎಸೆತಗಳು ಹೆಚ್ಚು ಪಡೆದಿದ್ದರಿಂದಈ ವರ್ಷ ಭಾರತದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ 2025ರ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಇದರಿಂದಾಗಿ ಬಾಂಗ್ಲಾದೇಶ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿತು. ಬಾಂಗ್ಲಾದೇಶ ನಿವ್ವಳ ರನ್ ರೇಟ್ 0.639 ಆಗಿದ್ದು ವೆಸ್ಟ್ ಇಂಡೀಸ್ನ ನಿವ್ವಳ ರನ್ ರೇಟ್ 0.626 ಆಗಿದೆ. ಕೇವಲ 0.013 ರನ್ ರೇಟ್ನಿಂದ ಕೆರೆಬಿಯನ್ ಪಡೆ ವಿಶ್ವಕಪ್ ರೇಸ್ನಿಂದ ಹೊರ ಬಿದ್ದಿದೆ.
ಇದನ್ನೂ ಓದಿ: ಶುಭಮನ್ ಗಿಲ್ಗೆ ಬಿಗ್ ಶಾಕ್! ಐಪಿಎಲ್ ಕಮಿಟಿಯಿಂದ ಕಠಿಣ ಶಿಕ್ಷೆ