ETV Bharat / sports

23 ವರ್ಷಗಳ ಬಳಿಕ ಭಾರತದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ವೆಸ್ಟ್​ ಇಂಡೀಸ್​ ಬ್ಯಾಟರ್

ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಆರಂಭಿಕ ಬ್ಯಾಟರ್​ ಜಾನ್​ ಕ್ಯಾಂಪ್ಬೆಲ್​ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಜಾನ್​ ಕ್ಯಾಂಪ್ಬೆಲ್​
ಜಾನ್​ ಕ್ಯಾಂಪ್ಬೆಲ್​ (AP)
author img

By ETV Bharat Sports Team

Published : October 13, 2025 at 1:53 PM IST

2 Min Read
Choose ETV Bharat

IND vs WI 2nd Test: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಾನ್ ಕ್ಯಾಂಪ್ಬೆಲ್ ವೆಸ್ಟ್ ಇಂಡೀಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಕಮ್​ಬ್ಯಾಕ್​ ಮಾಡಿದೆ.

ಅದರಲ್ಲೂ ಜಾನ್ ಕ್ಯಾಂಪ್ಬೆಲ್ ಭರ್ಜರಿ ಪ್ರದರ್ಶನದಿಂದ ವೆಸ್ಟ್ ಇಂಡೀಸ್ ತಂಡ ಭಾರತ ವಿರುದ್ಧ ಮುನ್ನಡೆ ಸಾಧಿಸುವಲ್ಲಿ ಯಶಸ್ವಿ ಆಗಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 518 ರನ್​ ಗಳಿಸಿತ್ತು. ಇದಕ್ಕುತ್ತರವಾಗಿ ವೆಸ್ಟ್​ 248 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಫಾಲೋ ಆನ್​ಗೆ ಒಳಗಾಗಿತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿತು.

ಮೂರನೇ ದಿನದ ಆಟದ ಅಂತ್ಯಕ್ಕೆ, ಕೆರಿಬಿಯನ್ ತಂಡವು ಫಾಲೋ ಆನ್‌ಗೆ ಒಳಗಾದ ನಂತರ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳಿಗೆ 173 ರನ್ ಗಳಿಸಿತ್ತು. ನಾಲ್ಕನೇ ದಿನ ಆರಂಭವಾದ ಸ್ವಲ್ಪ ಸಮಯದ ನಂತರ, ವೆಸ್ಟ್ ಇಂಡೀಸ್‌ನ ಎರಡನೇ ಇನ್ನಿಂಗ್ಸ್ ಸ್ಕೋರ್ 200 ದಾಟಿತು. ತಂಡದ ಪರ ಶೈ ಹೋಪ್ ಮತ್ತು ಕ್ಯಾಂಪ್​ಬೆಲ್​ ಶತಕ ಬಾರಿಸಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಮೂರನೇ ವಿಕೆಟ್‌ಗೆ 177 ರನ್‌ಗಳನ್ನು ಸೇರಿಸಿದರು. ಇದು ವೆಸ್ಟ್​ ಇಂಡೀಸ್​ ಮುನ್ನಡೆಗೆ ಕಾರಣವಾಯ್ತು.

ದಾಖಲೆ ಬರೆದ ಕ್ಯಾಂಪ್ಬೆಲ್​: ಈ ಎಡಗೈ ಬ್ಯಾಟ್ಸ್‌ಮನ್ ಪಂದ್ಯದ ನಾಲ್ಕನೇ ದಿನದಂದು ರವೀಂದ್ರ ಜಡೇಜಾ ಅವರ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಪೂರೈಸಿದರು. ಸಿಕ್ಸರ್​ ಸಿಡಿಸಿ ಶತಕ ಪೂರ್ಣಗೊಳಿಸಿದ ಐದನೇ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಶತಕದೊಂದಿಗೆ, ಕ್ಯಾಂಪ್ಬೆಲ್ ಏಳು ವರ್ಷಗಳ ಬರವನ್ನು ನೀಗಿಸಿದರು. ಭಾರತದ ವಿರುದ್ಧ ಟೆಸ್ಟ್ ಶತಕ ಗಳಿಸಿದ ಮೊದಲ ವೆಸ್ಟ್ ಇಂಡೀಸ್​​​​ನ ಮೊದಲ ಆರಂಭಿಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ವಾಸ್ತವವಾಗಿ, ವೆಸ್ಟ್ ಇಂಡೀಸ್‌ನ ಪ್ರಸ್ತುತ ಟೆಸ್ಟ್ ನಾಯಕ ರೋಸ್ಟನ್ ಚೇಸ್ ಭಾರತದ ವಿರುದ್ಧ ಶತಕ ಗಳಿಸಿದ ಕೊನೆಯ ಬ್ಯಾಟ್ಸ್‌ಮನ್ ಆಗಿದ್ದು, ಅಕ್ಟೋಬರ್ 2018ರಲ್ಲಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಜಾನ್ ಕ್ಯಾಂಪ್‌ಬೆಲ್ ದೆಹಲಿ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಶತಕ ಗಳಿಸುವ ಮೂಲಕ ಏಳು ವರ್ಷಗಳ ಬರವನ್ನು ಕೊನೆಗೊಳಿಸಿದರು. ಜೊತೆಗೆ ಕ್ಯಾಂಪ್‌ಬೆಲ್ ತಮ್ಮ ಮೊದಲ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ಇವರು 2019ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಕ್ಯಾಂಪ್ಬೆಲ್​ ಮೊದಲ ಟೆಸ್ಟ್​ ಶತಕ ಸಿಡಿಸಿಲು 50 ಇನ್ನಿಂಗ್ಸ್‌ಗಳನ್ನು (25 ಟೆಸ್ಟ್‌ ಪಂದ್ಯಗಳು) ತೆಗೆದುಕೊಂಡರು.

ಮೊದಲ ಟೆಸ್ಟ್ ಶತಕ ಗಳಿಸಲು ಅತಿ ಹೆಚ್ಚು ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡ ಆರಂಭಿಕರು

  • 58 ಇನ್ನಿಂಗ್ಸ್ - ಟ್ರೆವರ್ ಗೊಡ್ಡಾರ್ಡ್ (ದಕ್ಷಿಣ ಆಫ್ರಿಕಾ)
  • 49 ಇನ್ನಿಂಗ್ಸ್​ - ಜಾನ್ ಕ್ಯಾಂಪ್ಬೆಲ್ (ವೆಸ್ಟ್​ ಇಂಡೀಸ್​)
  • 44 ಇನ್ನಿಂಗ್ಸ್​ - ಡ್ಯಾರೆನ್ ಗಂಗಾ (ವೆಸ್ಟ್​ ಇಂಡೀಸ್​)
  • 32 ಇನ್ನಿಂಗ್ಸ್​ - ಇಮರುಲ್​ ಕಾಯೆಸ್ (ಬಾಂಗ್ಲಾದೇಶ)
  • 31 ಇನ್ನಿಂಗ್ಸ್​ - ಬಾಬ್​ ಸಿಂಪ್ಸಾನ್​ (ಆಸ್ಟ್ರೇಲಿಯಾ)

ಏತನ್ಮಧ್ಯೆ, ಜಾನ್ ಕ್ಯಾಂಪ್ಬೆಲ್ 19 ವರ್ಷಗಳಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಮೊದಲ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರರಾದರು. ಇದಕ್ಕೂ ಮೊದಲು ಡ್ಯಾರೆನ್ ಗಂಗಾ 2006ರಲ್ಲಿ 135 ರನ್ ಗಳಿಸಿ ಕೊನೆಯದಾಗಿ ಭಾರತ ವಿರುದ್ಧ ಶತಕ ಸಿಡಿಸಿದ್ದರು.

ಇತಿಹಾಸ ಸೃಷ್ಟಿಸಿದ ಕ್ಯಾಂಪ್ಬೆಲ್: ಇದಲ್ಲದೇ, ಕ್ಯಾಂಪ್ಬೆಲ್ 23 ವರ್ಷಗಳ ನಂತರ ಭಾರತದ ವಿರುದ್ಧ ಭಾರತದ ನೆಲದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಕೆರಿಬಿಯನ್ ಆರಂಭಿಕ ಆಟಗಾರ ಎನಿಸಿಕೊಂಡರು. ಇದಕ್ಕೂ ಮೊದಲು, ವೇವೆಲ್ ಹಿಂಡ್ಸ್ 2002ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ: ಮಹಿಳಾ ವಿಶ್ವಕಪ್: ಸತತ ಎರಡು ಪಂದ್ಯ ಸೋತ ಭಾರತದ ಸೆಮಿಸ್​ ಹಾದಿ ಹೇಗಿದೆ?