SRH Players Nitish Kumar Reddy Statement: ಐಪಿಎಲ್ನಲ್ಲಿ ಶುಕ್ರವಾರ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಚೆಪಾಕ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 154 ರನ್ಗಳ ಸಾಮಾನ್ಯ ಗುರಿಯನ್ನು ಬೆನ್ನುಹತ್ತಿದ್ದ ಎಸ್ಆರ್ಹೆಚ್ ಪಡೆ 5 ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಇದರೊಂದಿಗೆ ಈ ಋತುವಿನಲ್ಲಿ ಮೂರನೇ ಗೆಲುವು ದಾಖಲಿಸಿತು. ಜೊತೆಗೆ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಈ ವರೆಗೂ ಒಂಬತ್ತು ಪಂದ್ಯಗಳಲ್ಲಿ ಮೂರಲ್ಲಿ ಗೆದ್ದಿರುವ ಸನ್‌ರೈಸರ್ಸ್ ಉಳಿದ ಮುಂದಿನ ಐದು ಪಂದ್ಯಗಳನ್ನು ಗೆದ್ದರೆ ಮಾತ್ರ ನಾಕೌಟ್ ಹಂತಕ್ಕೆ ತಲುಪುತ್ತದೆ.
A milestone victory 👏#SRH register their first ever win at Chepauk with a strong performance against #CSK 🔝💪
— IndianPremierLeague (@IPL) April 25, 2025
Scorecard ▶ https://t.co/26D3UampFQ#TATAIPL | #CSKvSRH | @SunRisers pic.twitter.com/lqeX4CiWHP
ಏತನ್ಮಧ್ಯೆ ಈ ಕುರಿತು ಮಾತನಾಡಿರುವ ಹೈದರಾಬಾದ್ ತಂಡದ ಆಲ್ರೌಂಡರ್ ನಿತೀಶ್ ರೆಡ್ಡಿ ಕಳೆದ ವರ್ಷ ಆರ್‌ಸಿಬಿ ಮಾಡಿದ್ದ ಪ್ಲಾನ್ ಅನ್ನೇ ನಾವು ಅನುಸರಿಸಿ ಪ್ಲೇಆಫ್ಗೆ ತಲುಪುತ್ತೇವೆ ಎಂದು ನಿತೀಶ್ ರೆಡ್ಡಿ ಹೇಳಿದ್ದಾರೆ. ಈ ವಿಷಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಮಗೆ ಸ್ಫೂರ್ತಿ ಎಂದಿದ್ದಾರೆ. ಚೆನ್ನೈ ವಿರುದ್ಧ ಗೆದ್ದಿರುವುದು ಸಂತೋಷವಾಗಿದೆ. ಇಂದಿನಿಂದ, ನಾವು ಪ್ರತಿ ಪಂದ್ಯದ ಫಲಿತಾಂಶದ ಬಗ್ಗೆ ಯೋಚಿಸುತ್ತೇವೆ.
IPL 2025 POINTS TABLE. 📈
— Mufaddal Vohra (@mufaddal_vohra) April 25, 2025
- RR & CSK at No.9 and No.10 with 4 Points each. pic.twitter.com/qdNdOOoEBt
ಈಗ ನಾವು ಗೆದ್ದಿದ್ದೇವೆ ಉಳಿದ ಪಂದ್ಯಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ಮಧ್ಯಮ ಕ್ರಮಾಂಕದಲ್ಲಿ ಕಮಿಂದು ಜೊತೆ ಉತ್ತಮ ಪ್ರದರ್ಶನ ನೀಡಬೇಕಿದೆ. ದೊಡ್ಡ ಹೊಡೆತಗಳನ್ನು ಆಡದೇ ತಂಡವನ್ನು ಹೇಗೆ ಗೆಲ್ಲಿಸಬೇಕು ಎಂದು ನಾವು ಚಚರ್ಚಸಿದ್ದೇವೆ.
"ಸಿಎಸ್ಕೆ ಪರ ನೂರ್ ಅಹ್ಮದ್ ಮತ್ತು ಖಲೀಲ್ ಅಹ್ಮದ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೂ ಕೊನೆಯಲ್ಲಿ, ನಾವು ಗೆಲುವು ಸಾಧಿಸಿದ್ದೇವೆ. ಇನ್ಮುಂದೆ ನಮಗೆ ಮಾಡು ಇಲ್ಲವೇ ಮಡಿ ಹೋರಾಟ ಇರಲಿದೆ. ಆದರೆ ನಾವು ಪ್ಲೇಆಫ್ಗೆ ತಲುಪಲು ಆರ್‌ಸಿಬಿ ತಂಡವನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದೇವೆ.
🚨 SRH WINS THEIR FIRST EVER IPL MATCH AT THE CHEPAUK VS CSK. 🚨 pic.twitter.com/8KFOoORpYH
— Mufaddal Vohra (@mufaddal_vohra) April 25, 2025
ಕಳೆದ ವರ್ಷ ಆರ್‌ಸಿಬಿ ಕೂಡ ಇದೇ ಪರಿಸ್ಥಿತಿಯಲ್ಲಿತ್ತು. ಕೊನೆಯ 6 ಪಂದ್ಯಗಳನ್ನು ಗೆಲ್ಲಲೇ ಬೇಕಾಗಿತ್ತು. ಅವರು ಸತತ ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೆ ತಲುಪಿದ್ದರು. ಈ ವರ್ಷ ನಾವು ಅದನ್ನು ಏಕೆ ಮಾಡಲು ಸಾಧ್ಯವಿಲ್ಲ? ನಾವು 100 ಪ್ರತಿಶತ ಪ್ರದರ್ಶನ ನೀಡಿದರೆ, ಉಳಿದ ಪಂದ್ಯಗಳನ್ನು ಗೆಲ್ಲುವ ಸಾಧ್ಯತೆಗಳು ಉತ್ತಮವಾಗಿರುತ್ತವೆ" ಎಂದು ನಿತೀಶ್ ಕುಮಾರ್ ರೆಡ್ಡಿ ಮಾತನಾಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೆ ತಲುಪಿತ್ತು.
ಇದನ್ನೂ ಓದಿ: ಬರೋಬ್ಬರಿ 12 ವರ್ಷದ ಬಳಿಕ ಹೈದರಾಬಾದ್ ತಂಡಕ್ಕೆ ಗೆಲುವು! ಪ್ಲೇಆಫ್ ಕನಸು ಜೀವಂತ