ETV Bharat / sports

ವಿನೇಶ್ ಫೋಗಟ್‌ ಮೇಲ್ಮನವಿ ತೀರ್ಪಿನ ಗಡುವು ವಿಸ್ತರಣೆ: CAS ನಿರ್ಧಾರ ಪ್ರಕಟ ಯಾವಾಗ? - PARIS OLYMPICS 2024

author img

By PTI

Published : Aug 11, 2024, 10:19 AM IST

ಒಲಿಂಪಿಕ್ಸ್​ನಲ್ಲಿ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕಾಗಿ ಅನರ್ಹಗೊಂಡಿದ್ದ ವಿನೇಶ್ ಪೋಗಟ್ ಬೆಳ್ಳಿ ಪದಕಕ್ಕೆ ಮನವಿ ಮಾಡಿದ್ದಾರೆ. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಈ ಮೇಲ್ಮನವಿಯ ತೀರ್ಪು ಯಾವಾಗ ಪ್ರಕಟವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

VINESH PHOGAT  VINESH PHOGATS PLEA  CAS DECISION  INDIAN OLYMPIC ASSOCIATION  OLYMPICS 2024
ವಿನೇಶ್ ಪೋಗಟ್ ಮೇಲ್ಮನವಿ ತೀರ್ಪು ಮಂಗಳವಾರಕ್ಕೆ ಮುಂದೂಡಿಕೆ (AP)

ಪ್ಯಾರಿಸ್ (ಫ್ರಾನ್ಸ್​)​: ಪ್ಯಾರಿಸ್ ಒಲಿಂಪಿಕ್​ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ ಪಂದ್ಯದಿಂದ ಅನರ್ಹಗೊಳಿಸಿರುವ ಒಲಿಂಪಿಕ್​ ಸಮಿತಿ ನಿರ್ಧಾರ ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್​) ವಿನೇಶ್​ ಫೋಗಟ್​​ ಸಲ್ಲಿಸಿದ್ದ ಅರ್ಜಿಯ ತೀರ್ಪಿಗಾಗಿ ನಿರೀಕ್ಷೆ ಮುಂದುವರೆದಿದೆ. ಈಗಾಗಲೇ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ನೀಡುವುದು ಬಾಕಿ ಇದೆ.

ಮಹಿಳಾ ಫ್ರೀಸ್ಟೈಲ್ ಕುಸ್ತಿಯಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್ ಅವರನ್ನು 100 ಗ್ರಾಂ ತೂಕ ಹೆಚ್ಚಳ ಹಿನ್ನೆಲೆಯಲ್ಲಿ ಒಲಿಂಪಿಕ್ ಸಮಿತಿ ಮತ್ತು ಕುಸ್ತಿ ಸಮಿತಿ ಅನರ್ಹಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ವಿನೇಶ್​ ಪದಕದಿಂದ ವಂಚಿತರಾಗಿದ್ದರು. ಕ್ರಮ ಪ್ರಶ್ನಿಸಿ ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದರು.

ವಿನೇಶ್​ ಅವರ ಮೇಲ್ಮನವಿಯ ಬಹುನಿರೀಕ್ಷಿತ ತೀರ್ಪು ಈ ಹಿಂದಿನ ಹೇಳಿಕೆ ಪ್ರಕಾರ ಇಂದು (ಭಾನುವಾರ) ಸಂಜೆ ವೇಳೆಗೆ ಪ್ರಕಟವಾಗಬೇಕಿತ್ತು. ಆದರೆ ಕೆಲ ಗೊಂದಲಗಳ ನಡುವೆ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಭಾರತೀಯ ಒಲಿಂಪಿಕ್ ಅಸೋಸಿಯೇಷನ್, ​​​​ಆಗಸ್ಟ್ 13ರಂದು ತೀರ್ಪು ಹೊರಬೀಳಲಿದೆ ಎಂದು ತಿಳಿಸಿದೆ.

ಇದರಿಂದಾಗಿ, ವಿನೇಶ್ ಪದಕ ಪಡೆಯುತ್ತಾರೋ ಇಲ್ಲವೋ ಎಂಬ ಕುತೂಹಲ ಮುಂದುವರೆದಿದೆ. ಫೋಗಟ್ ಬೆಳ್ಳಿ ಪದಕವನ್ನು ನೀಡುವಂತೆ ಕೋರಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಮೇಲ್ಮನವಿಯ ವಿಚಾರಣೆಯು ಶುಕ್ರವಾರವೇ ಪೂರ್ಣಗೊಂಡಿದೆ. ಇದಕ್ಕೂ ಮುನ್ನ ಶನಿವಾರ ರಾತ್ರಿ 9:30ಕ್ಕೆ ತೀರ್ಪು ಹೊರ ಬೀಳಲಿದೆ ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಹೇಳಿಕೆ ಬಿಡುಗಡೆ ಮಾಡಿತ್ತು. ಆದರೆ, ಬಳಿಕ ತೀರ್ಪನ್ನು ಆಗಸ್ಟ್ 11ರ (ಇಂದು) ಸಂಜೆ 6 ಗಂಟೆಗೆ ಮುಂದೂಡಲಾಗಿದೆ ಎಂದು ಶನಿವಾರ ಪ್ರಕಟಿಸಲಾಗಿತ್ತು.

"ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ತಾತ್ಕಾಲಿಕ ವಿಭಾಗವು ವಿನೇಶ್ ಫೋಗಾಟ್ ಮೇಲ್ಮನವಿ ಅರ್ಜಿ ವಿಚಾರಣೆ ತೀರ್ಪನ್ನು ಆಗಸ್ಟ್ 13, 2024ರಂದು ಸಂಜೆ 6 00 ಗಂಟೆಗೆ ಪ್ರಕಟಿಸಲು ಸಮಯ ನಿಗದಿಪಡಿಸಿದೆ'' ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ ಹೇಳಲಾಗಿದ್ದ ಆಗಸ್ಟ್ 11ರ ಸಮಯವು ಎರಡೂ ಕಡೆಯವರಿಗೆ ಹೆಚ್ಚುವರಿ ದಾಖಲೆಗಳನ್ನು ಏಕೈಕ ಮಧ್ಯಸ್ಥಗಾರನ ಮುಂದೆ ಪ್ರಸ್ತುತಪಡಿಸಲು ನೀಡಿದ್ದಾಗಿದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸ್ಪಷ್ಟನೆ ನೀಡಿದೆ.

50 ಕೆಜಿ ಫ್ರೀಸ್ಟೈಲ್ ಕುಸ್ತಿ ಮಹಿಳೆಯರ ವಿಭಾಗದಲ್ಲಿ ವಿನೇಶ್​ ಪೋಗಟ್​ ಆಗಸ್ಟ್​ 6ರಂದು ಒಂದೇ ದಿನ ಮಾಜಿ ಚಾಂಪಿಯನ್‌ ಸೇರಿದಂತೆ ಮೂವರಿಗೆ ಸೋಲುಣಿಸಿ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಬಳಿಕ ಕೆಲವೇ ಗಂಟೆಗಳಲ್ಲಿ ಫೈನಲ್​ ಹಣಾಹಣಿಯಲ್ಲಿ ಅಮೆರಿಕದ ಕುಸ್ತಿಪಟುವನ್ನು ಎದುರಿಸಬೇಕಿತ್ತು. ಆದರೆ, ಅನಿರೀಕ್ಷಿತವಾಗಿ ಅಂತಿಮ ಸ್ಪರ್ಧೆಗೂ ಮುನ್ನ ತೂಕ ಪರಿಶೀಲಿಸಿದಾಗ ವಿನೇಶ್ 100 ಗ್ರಾಂ ಅಧಿಕ ತೂಕ ಹೊಂದಿರುವುದು ಕಂಡುಬಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು.

ಈ ಬೆಳವಣಿಗೆಗಳ ಬೆನ್ನಲ್ಲೇ ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಹೇಳಿದ್ದಾರೆ. ಅಲ್ಲದೆ, ಕನಿಷ್ಠ ಬೆಳ್ಳಿ ಪದಕವನ್ನಾದರೂ ನೀಡುವಂತೆ ಮನವಿಯಲ್ಲಿ ಕೋರಿದ್ದಾರೆ. ಒಂದು ವೇಳೆ ತೀರ್ಪು ವಿನೇಶ್ ಪರ ಬಂದರೆ, ಅವರಿಗೆ ಬೆಳ್ಳಿ ಪದಕ ಸಿಗಲಿದೆ.

ಓದಿ: ವಿನೇಶ್​ ಫೋಗಟ್​ ಅರ್ಜಿ ವಿಚಾರಣೆ ಪೂರ್ಣ: ಇಂದೇ ತೀರ್ಪು ಪ್ರಕಟ - vinesh phogat plea

ETV Bharat Logo

Copyright © 2024 Ushodaya Enterprises Pvt. Ltd., All Rights Reserved.