Virat Support Dravid: ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವಿನ ಪಂದ್ಯವೂ ಅಪರೂಪದ ಕ್ಷಣಕ್ಕೆ ಸಾಕ್ಷಿ ಆಗಿದ್ದು, ಇದರ ವಿಡಿಯೋ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಭಾನುವಾರ ನಡೆದಿದ್ದ ಡಬಲ್ ಹೆಡ್ಡರ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನವನ್ನು ಮಣಿಸಿ ಭರ್ಜರಿ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ಜೈಸ್ವಾಲ್ (75) ಅವರ ಆಕರ್ಷಕ ಅರ್ಧಶತಕ, ರಿಯಾನ್ ಪರಾಗ್ (30) ಧ್ರುವ್ ಜುರೆಲ್ (35) ಬ್ಯಾಟಿಂಗ್ ನೆರವಿನಿಂದಾಗಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಭಾರಿಸಿತು.
Rahul Dravid 🤝 Virat Kohli
— VIKAS (@VikasYadav69014) April 14, 2025
- Rahul Dravid appreciate the Innings of Virat Kohli ❤️ pic.twitter.com/NweGEbA2pX
ಇದಕ್ಕುತ್ತರವಾಗಿ ಬೆಂಗಳೂರು ತಂಡ ಫಿಲ್ ಸಾಲ್ಟ್ (65) ಮತ್ತು ವಿರಾಟ್ ಕೊಹ್ಲಿ (62) ಬೆಂಕಿ ಬಿರುಗಾಳಿ ಬ್ಯಾಟಿಂಗ್ನಿಂದಾಗಿ 17.3 ಓವರ್ಗಳಲ್ಲೇ ಗೆಲುವಿನ ದಡ ಸೇರಿತು. ಆದರೆ, ಈ ಪಂದ್ಯ ಬಳಿಕ ನಡೆದ ಪ್ರಸಂಗವೊಂದು ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳ ಮನ ಸೆಳೆದಿದೆ.
ಹೌದು, ಪಂದ್ಯದ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ಅಭಿನಂದನೆ ಸಲ್ಲಿಸುವುದು ಸರ್ವೇ ಸಾಮಾನ್ಯ. ಆದರೆ, ಈ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯಕೋಚ್ ಆಗಿರುವ ರಾಹುಲ್ ದ್ರಾವಿಡ್ ಕೂಡ ಮೈದಾನಕ್ಕೆ ಆಗಮಿಸಿ ಆರ್ಸಿಬಿ ಆಟಗಾರರನ್ನು ಅಭಿನಂದಿಸಿದ್ದಾರೆ. ದ್ರಾವಿಡ್ ಸದ್ಯ ಕಾಲಿನ ಗಾಯಕ್ಕೆ ತುತ್ತಾಗಿದ್ದು, ಎಲ್ಲರಿಗೂ ಗೊತ್ತೆ ಇದೆ.
Virat Kohli touching Rahul Dravid's Feet📷 Respect for Virat Kohli pic.twitter.com/QJQflJjz4n
— Deepak C (@DeepakC06) April 14, 2025
ಆದರೂ ಅವರಲ್ಲಿರುವ ಗೇಮ್ ಸ್ಪಿರೀಟ್ ನೋಡಿದರೆ ಪ್ರತಿಯೊಬ್ಬ ಆಟಗಾರರಿಗೂ ಜೋಶ್ ತುಂಬುತ್ತೆ. ಕಾಲಿನಲ್ಲಿ ನೋವಿದ್ದರೂ ವೀಲ್ ಚೇರ್ನಲ್ಲೇ ಮೈದಾನಕ್ಕೆ ಆಗಮಿಸಿ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಿರುವ ದ್ರಾವಿಡ್ ನಿನ್ನೆಯ ಪಂದ್ಯದ ಬಳಿಕ ಆಟಗಾರರಿಗೆ ಅಭಿನಂದಿಸಲೆಂದು ಕುಂಟುತ್ತಲೇ ಮೈದಾನಕ್ಕೆ ಆಗಮಿಸಿದರು. ಈ ವೇಳೆ, ಇದನ್ನು ಗಮನಿಸಿದ ವಿರಾಟ್ ಕೊಹ್ಲಿ ರಾಹುಲ್ ದ್ರಾವಿಡ್ ಅವರನ್ನು ತಡೆದರು.
ಕಾಲಿನಲ್ಲಿ ನೋವಿದ್ದರು ಯಾಕೆ ಬಂದಿದ್ದೀರಿ ಎಂದು ಕೇಳಿದ್ದಾರೆ. ಆದರೂ ದ್ರಾವಿಡ್ ನಗುತ್ತಲೇ ಆರ್ಸಿಬಿ ಆಟಗಾರರನ್ನು ಅಭಿನಂದಿಸಿದರು. ಈ ವೇಳೆ ಕೊಹ್ಲಿ ಕೂಡ ದ್ರಾವಿಡ್ ಬೆನ್ನಿಗೆ ನಿಂತರು. ದ್ರಾವಿಡ್ ಮತ್ತು ಕೊಹ್ಲಿ ನಡುವಿನ ವಿಡಿಯೋ ಭಾರೀ ವೈರಲ್ ಆಗಿದೆ.
Virat Kohli asking injured Rahul Dravid bhai not to walk, saying the players will come to him. A small act, but it speaks volumes. Respect, care, and class.
— 🇮🇳🏏 𝑺𝒕𝒓𝒐𝒌𝒆𝑶𝑮𝒆𝒏𝒊𝒖𝒔 𝑺𝒑𝒆𝒂𝒌'𝒔 (@Stroke0GeniusSP) April 14, 2025
This is what makes him truly special. ❤️...#ViratKohli𓃵 #RRvRCB #RCBvsRR #IPL2025 #Cricketpic.twitter.com/5T5RxFjzER
ದಾಖಲೆ ಬರೆದ ವಿರಾಟ್: ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರು. ಅವರು ತಮ್ಮ ಆಕರ್ಷ ಬ್ಯಾಟಿಂಗ್ ಮೂಲಕ 62 ರನ್ ಬಾರಿಸಿದರು. ಇದರೊಂದಿಗೆ ಟಿ - 20 ಕ್ರಿಕೆಟ್ನಲ್ಲಿ 100 ಅರ್ಧಶತಕಗಳನ್ನು ಪೂರ್ಣಗೊಳಿಸಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯರಾದ ಕೊಹ್ಲಿ ಒಟ್ಟಾರೆ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡರು.
ಇದನ್ನೂ ಓದಿ: ಗುರುವಿಗೆ ಮಂಡಿಯೂರಿ ನಮಸ್ಕರಿಸಿದ ವಿರಾಟ್: ಕೊಹ್ಲಿ ಕಂಡು ಭಾವುಕರಾದ ದ್ರಾವಿಡ್