ETV Bharat / sports

ಬರೋಬ್ಬರಿ 12 ವರ್ಷದ ಬಳಿಕ ಹೈದರಾಬಾದ್​ ತಂಡಕ್ಕೆ ಗೆಲುವು! ಪ್ಲೇಆಫ್​ ಕನಸು ಜೀವಂತ - CSK VS SRH MATCH

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಸನ್​ರೈಸಸರ್ಸ್ ಹೈದರಾಬಾದ್​ ತಂಡ 5 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

CSK vs SRH Highlight  IPL 2025 Playoff scenario  IPL 2025 SRH  ಐಪಿಎಲ್​ 2025
Ishan Kishan (Photo: AP)
author img

By ETV Bharat Sports Team

Published : April 26, 2025 at 9:57 AM IST

2 Min Read

CSK vs SRH Highlight: ಸತತ ಸೋಲುಗಳಿಂದ ಕಂಗೆಟ್ಟಿದ್ದ ಸನ್‌ರೈಸರ್ಸ್ ಹೈದರಾಬಾದ್ ಈ ಋತುವಿನಲ್ಲಿ ಮೂರನೇ ಗೆಲುವು ದಾಖಲಿಸಿದೆ.

ಶುಕ್ರವಾರ ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ. ಚೆನ್ನೈ ನೀಡಿದ್ದ ಗುರಿಯನ್ನು ಬೆನ್ನಟ್ಟಿದ್ದ ಹೈದರಾಬಾದ್​ ಪಡೆ 18.4 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 155 ರನ್‌ಗಳ ಗುರಿಯನ್ನು ತಲುಪಿತು. ತಂಡದ ಪರ ಇಶಾನ್ ಕಿಶನ್ (44 ರನ್) ಮತ್ತು ಕಮಿಂದು ಮೆಂಡಿಸ್ (30 ರನ್) ಉತ್ತಮ ಪ್ರದರ್ಶನ ನೀಡಿದರು. ಕೊನೆಯಲ್ಲಿ ನಿತೀಶ್ ರೆಡ್ಡಿ (19) ಪ್ರಭಾವಿತರಾದರು. ನೂರ್ ಅಹ್ಮದ್ 2, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದರು.

ಸಾಮಾನ್ಯ ಗುರಿಯನ್ನು ಪಡೆದಿದ್ದರು, ಸನ್‌ರೈಸರ್ಸ್ ತಂಡ ಚೇಸಿಂಗ್‌ ವೇಳೆ ಸಂಕಷ್ಟ ಅನುಭವಿಸಿತು. ಇನ್ನಿಂಗ್ಸ್​ನ ಎರಡನೇ ಎಸೆತದಲ್ಲಿ ಅಭಿಷೇಕ್ ಶರ್ಮಾ (0) ಡಕ್ ಔಟ್ ಆದರು . ಬಳಿಕ ಬಂದ ಇಶಾನ್ ಮತ್ತು ಹೆಡ್ ಸ್ಕೋರ್‌ಬೋರ್ಡ್ ಅನ್ನು ಮುನ್ನಡೆಸಿದರು. ಆದರೆ ಹೆಡ್ (19) ಮತ್ತು ಕ್ಲಾಸೆನ್ (7) ಕ್ರಮವಾಗಿ ಆರನೇ ಓವರ್ ಮತ್ತು 8.1 ಓವರ್‌ಗಳಲ್ಲಿ ಔಟಾದ ನಂತರ ಸನ್‌ರೈಸರ್ಸ್ ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಇಶಾನ್ ಎಚ್ಚರಿಕೆಯಿಂದ ಬ್ಯಾಟಿಂಗ್​ ಮಾಡಿದರು. ಅವರು ನಿರ್ಣಾಯಕ ಇನ್ನಿಂಗ್ಸ್ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ನಂತರ, ಇಶಾನ್ ಮತ್ತು ಅನಿಕೇತ್ (19) ಔಟ್ ಆದರೂ, ಮೆಂಡಿಸ್ ಮತ್ತು ನಿತೀಶ್ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.

12 ವರ್ಷಗಳ ಬಳಿಕ ಗೆಲುವ: ಚೆನ್ನೈ ವಿರುದ್ಧ ಗೆದ್ದ ಬಳಿಕ ಸನ್‌ರೈಸರ್ಸ್ ಅಪರೂಪದ ಸಾಧನೆ ಮಾಡಿತು. 12 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಚೆನ್ನೈ ತಂಡವನ್ನು ತಮ್ಮ ತವರು ನೆಲವಾದ ಚೆಪಾಕ್‌ನಲ್ಲಿ ಸೋಲಿಸಿತು. ಈ ಗೆಲುವಿನೊಂದಿಗೆ, ಸನ್‌ರೈಸರ್ಸ್ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಸದ್ಯ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದೆ. ಚೆನ್ನೈ ತಂಡವು ಈ ಋತುವಿನಲ್ಲಿ ಏಳನೇ ಸೋಲನ್ನು ಅನುಭವಿಸಿದ್ದು ಇದರೊಂದಿಗೆ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ!​

ಚೆನ್ನೈ ಬ್ಯಾಟಿಂಗ್​ ವೈಫಲ್ಯ: ಇದಕ್ಕೂ ಮುನ್ನ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಚೆನ್ನೈ​ ತಂಡ ಎಸ್​ಆರ್​ಹೆಚ್​ ಬೌಲಿಂಗ್​ ದಾಳಿಗೆ ತತ್ತರಿಸಿತ್ತು. ಆರಂಭಿಕ ನಾಲ್ಕು ಬ್ಯಾಟರ್​ಗಳ ಪೈಕಿ ಆಯುಷ್​ ಮ್ಹಾತ್ರೆ (30) ಹೊರತುಪಡಿಸಿ ಉಳಿದ ಬ್ಯಾಟರ್​ಗಳು ಅಲ್ಪಮೊತ್ತಕ್ಕೆ ಪೆವಿಲಿಯನ್​ ದಾರಿ ಹಿಡಿದರು. ಡೆವಾಲ್ಡ್​ ಬ್ರಾವಿಸ್ (42) ಉತ್ತಮ ಪ್ರದರ್ಶನ ನೀಡಿದ್ದರಿಂದ ತಂಡದ ಸ್ಕೋರ್​ 150ರ ಗಡಿ ದಾಟುವಲ್ಲಿ ಯಶಸ್ವಿ ಆಯ್ತು. SRH ಪರ ಹರ್ಷಲ್​ ಪಟೇಲ್​ 4 ವಿಕೆಟ್​ ಪಡೆದರೆ, ಕಮಿನ್ಸ್​, ಜಯದೇವ್​ ತಲಾ 2, ಕಮಿಂಡು ಮೆಂಡಿಸ್​ ಮತ್ತು ಶಮಿ ತಲಾ 1 ವಿಕೆಟ್​ ಪಡೆದರು.

ಇದನ್ನೂ ಓದಿ: ಐಪಿಎಲ್ 2025: ಹೆಚ್ಚು ವಿಕೆಟ್​, ಹೆಚ್ಚು ರನ್​, ಹೆಚ್ಚು ಬೌಂಡರಿ, ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.