Sourav Ganguly Podcast: ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂದು ಈ ಹಿಂದೆ ಹಲವು ಊಹಾಪೋಹಗಳು ಕೇಳಿ ಬಂದಿದ್ದವು. ಇದೆಲ್ಲವನ್ನು ದಾದಾ ತಳ್ಳಿ ಹಾಕಿದ್ದರು. ಆದರೆ ಇತ್ತೀಚೆಗೆ ಮತ್ತೊಮ್ಮೆ ಇದೆ ವಿಚಾರ ಮುನ್ನೆಲೆಗೆ ಬಂದಿದ್ದು ಈ ಬಗ್ಗೆ ದಾದಾ ಸ್ಪಷ್ಟನೆ ನೀಡಿದ್ದಾರೆ.
ಪಿಟಿಐ ಜೊತೆಗಿನ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ ಗಂಗೂಲಿ ರಾಜಕೀಯ ಪ್ರವೇಶ, ಮುಂದಿನ ಭವಿಷ್ಯದ ಬಗ್ಗೆ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ. ಗಂಗೂಲಿ ಅವರು ಟೀಮ್ ಇಂಡಿಯಾದ ಕೋಚ್ ಆಗಿ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. 2018-19 ಮತ್ತು 2022-23ರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ದಾದಾ, ಟೀಮ್ ಇಂಡಿಯಾದ ಕೋಚ್ ಆಗುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಕ್ರಿಕೆಟ್ ಬಳಿಕ ವಿಭಿನ್ನ ಪಾತ್ರಗಳಲ್ಲಿ ಕೆಲಸ ಮಾಡುವ ಬಗ್ಗೆ ನಿಜವಾಗಿಯೂ ಎಂದಿಗೂ ಯೋಚಿಸಿರಲಿಲ್ಲ ಆದರೇ 2013ರಲ್ಲಿ ಕ್ರಿಕೆಟ್ ಜರ್ನಿ ಕೊನೆಗೊಳಿಸಿ ನಂತರ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡೆ ಎಂದು ತಿಳಿಸಿದರು.
VIDEO | " no, i have no interest in politics. it’s not as easy as you say," said legendary cricketer sourav ganguly (@SGanguly99) during an exclusive conversation with PTI CEO and Editor-in-Chief Vijay Joshi, when asked about the West Bengal Assembly Elections 2026 and the… pic.twitter.com/VTymnIfSr1
— Press Trust of India (@PTI_News) June 22, 2025
ಮುಂದುವರೆದು ಮಾತನಾಡುತ್ತ ಈ ಸಮಯದಲ್ಲಿ, ಮಹಿಳಾ ಕ್ರಿಕೆಟ್ ಅನ್ನು ಉತ್ತೇಜಿಸುವ ಮೂಲಕ ಭಾರತೀಯ ಕ್ರಿಕೆಟ್‌ಗೆ ದೊಡ್ಡ ಕೊಡುಗೆ ನೀಡಿದ್ದು ನನಗೆ ತೃಪ್ತಿ ಇದೆ ಎಂದು ತಿಳಿಸಿದರು.
ಇದೇ ವೇಳೆ ಭವಿಷ್ಯದಲ್ಲಿ ಟೀಮ್ ಇಂಡಿಯಾದ ಕೋಚ್ ಆಗಿ ನೀವು ತಂಡಕ್ಕೆ ಕೊಡುಗೆ ನೀಡಲು ಬಯಸಿದ್ದೀರ ಎಂದು ಕೇಳಲಾಯ್ತು? ಇದಕ್ಕೆ "ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ" ನನಗಿನ್ನು ಈಗ 53 ವರ್ಷ ಮುಂದೆ ಎಲ್ಲಾ ತಿಳಿಯುತ್ತೆ. ನಾನು ಅದಕ್ಕೂ ಸಿದ್ಧನಿದ್ದೇನೆ ಎಂದು ಕೋಚ್ ಹುದ್ದೆಯೆ ಇಂಗಿತ ವ್ಯಕ್ತ ಪಡಿಸಿದರು.
VIDEO | Veteran cricketer Sourav Ganguly (@SGanguly99), when asked whether he could have contributed more to Indian cricket by coaching the national team, said:
— Press Trust of India (@PTI_News) June 22, 2025
" i never really thought about it (coaching the indian team) because i got into different roles. i finished in 2013 and… pic.twitter.com/Z0LRaNXd3q
ಗಂಭೀರ್ ಹೊಗಳಿದ ಗಂಗೂಲಿ: ಅಲ್ಲದೆ, ಪ್ರಸ್ತುತ ಕೋಚ್ ಆಗಿರುವ ಗೌತಮ್ ಗಂಭೀರ್ ಅವರನ್ನು ಹೊಗಳಿದರು. ಈ ಸಂದರ್ಭದಲ್ಲಿ ಗಂಗೂಲಿ ತಾವು ಆಡಿದ ದಿನಗಳನ್ನು ನೆನಪಿಸಿಕೊಂಡು, ಗಂಭೀರ್ ತಮ್ಮ ಹಿರಿಯರ ಬಗ್ಗೆ ಅಪಾರ ಗೌರವ ಹೊಂದಿದ್ದರು ಎಂದು ಹೇಳಿದರು. ಗಂಭೀರ್ ಅವರೊಂದಿಗೆ ಆಡಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು ಮತ್ತು ಅವರು ತಮ್ಮನ್ನು ಮತ್ತು ಹಿರಿಯ ಆಟಗಾರರನ್ನು ಗೌರವಿಸುವ ವ್ಯಕ್ತಿ ಎಂದು ಹೇಳಿದರು.
ರಾಜಕೀಯ ಪ್ರವೇಶದ ಬಗ್ಗೆ ಹೇಳಿದ್ದೇನು: ಮುಂದಿನ ವರ್ಷ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದ್ದು ನೀವು ಯಾವುದಾದರೂ ರಾಜಕೀಯ ಪಕ್ಷವನ್ನು ಸೇರಲು ಯೋಜಿಸುತ್ತಿದ್ದೀರಾ? ಎಂದು ಕೇಳಿ ಪ್ರಶ್ನೆಗೆ ದಾದಾ ಉತ್ತರಿಸಿದ್ದಾರೆ. "ನನಗೆ ಯಾವುದೇ ಪಕ್ಷಕ್ಕೆ ಸೇರುವ ಆಸಕ್ತಿ ಇಲ್ಲ" ಎಂದು ಹೇಳಿದ್ದಾರೆ. ನಿಮಗೆ ಸಿಎಂ ಹುದ್ದೆ ಕೊಡುವುದಾಗಿ ಭರವಸೆ ನೀಡಿದರೆ ಏನು ಮಾಡುತ್ತೀರಿ?" ಎಂಬ ಇನ್ನೊಂದು ಪ್ರಶ್ನೆಯನ್ನು ಕೇಳಿದಾಗ, ಇದಕ್ಕೂ ಅವರೂ ಆಸಕ್ತಿ ತೋರಿಸಲಿಲ್ಲ.
ಇದನ್ನೂ ಓದಿ: ಭಾರತದ ಈ ಬ್ಯಾಟರ್ ಕಂಡ್ರೆ ಬ್ರಿಟಿಷರು ಭಯ ಪಡ್ತಿದ್ದೇಕೆ ಗೊತ್ತೆ? ಲಾರ್ಡ್ಸ್ನಲ್ಲಿ ಇಂದಿಗೂ ಇವರೇ ಕಿಂಗ್!