ETV Bharat / sports

ಐಸಿಸಿ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಶ್ರೇಯಸ್​ ಅಯ್ಯರ್​! - SHREYAS IYER

ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಶ್ರೇಯಸ್​ ಅಯ್ಯರ್​ ಐಸಿಸಿ ತಿಂಗಳಿನ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ICC AWARD  CHAMPIONS TROPHY 2025  ICC MONTH OF THE PLAYER AWARD  ಶ್ರೇಯಸ್​ ಅಯ್ಯರ್​
ಶ್ರೇಯಸ್​ ಅಯ್ಯರ್​ (ANI)
author img

By ETV Bharat Sports Team

Published : April 16, 2025 at 10:28 AM IST

1 Min Read

ಟೀಂ ಇಂಡಿಯಾದ ಸ್ಟಾರ್​ ಕ್ರಿಕೆಟರ್​ ಶ್ರೇಯಸ್​ ಅಯ್ಯರ್​ ಐಸಿಸಿ ಮಾರ್ಚ್​ ತಿಂಗಳ ಕ್ರಿಕೆಟಿಗೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಯ್ಯರ್ 243 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದರು. ಈ ಅನುಕ್ರಮದಲ್ಲಿ ಅಯ್ಯರ್​ ನ್ಯೂಜಿಲೆಂಡ್ ಆಟಗಾರರಾದ ಜಾಕೋಬ್ ಡಫಿ ಮತ್ತು ರಚಿನ್ ರವೀಂದ್ರ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಯ್ಯರ್​, "ಐಸಿಸಿ ಮಾರ್ಚ್ ತಿಂಗಳ ಆಟಗಾರನಾಗಿ ಆಯ್ಕೆಯಾಗಿದ್ದು, ನನಗೆ ಸಂತೋಷ ತಂದಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ನನ್ನ ಪ್ರದರ್ಶನವನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಇನ್ನಿಂಗ್ಸ್​​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಅಯ್ಯರ್​: ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ 98 ಎಸೆತಗಳಲ್ಲಿ 79 ರನ್ ಗಳಿಸಿದ್ದ ಈ ಸ್ಟಾರ್ ಬ್ಯಾಟ್ಸ್‌ಮನ್, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಪ್ರಮುಖ ಇನ್ನಿಂಗ್ಸ್ ನಲ್ಲಿ ಅತ್ಯಗತ್ಯವಾಗಿದ್ದ 45 ರನ್​ ಚಚ್ಚಿದ್ದರು. ನ್ಯೂಜಿಲೆಂಡ್ ವಿರುದ್ಧದ ಫೈನಲ್​ ಪಂದ್ಯದಲ್ಲಿ ಶ್ರೇಯಸ್ (48) ಅಮೂಲ್ಯವಾದ ಇನ್ನಿಂಗ್ಸ್ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೂ ಮುನ್ನ ಫೆಬ್ರವರಿ ತಿಂಗಳಲ್ಲಿ ಭಾರತ ಐಸಿಸಿ ವರ್ಷದ ಆಟಗಾರ ಪ್ರಶಸ್ತಿಯನ್ನು ಶುಭಮನ್ ಗಿಲ್ ಪಡೆದುಕೊಂಡಿದ್ದರು. ಸತತ 2 ತಿಂಗಳ ಭಾರತೀಯ ಆಟಗಾರರು ಐಸಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮೂರನೇ ಬಾರಿಗೆ ಚಾಂಪಿಯನ್​ ಆಗಿದ್ದ ಟೀಂ ಇಂಡಿಯಾ: ಚಾಂಪಿಯನ್ಸ್​ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತ ಅಜೇಯವಾಗಿಯೆ ಟ್ರೋಫಿಯನ್ನು ಗೆದ್ದುಕೊಂಡಿದೆ. ಈ ಟೂರ್ನಿಯ ಲೀಗ್​ ಹಂತದ ಮೂರು ಪಂದ್ಯಗಳನ್ನು ಗೆದ್ದ ಭಾರತ ಬಳಿಕ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್​ಗಳಿಂದೆ ಗೆಲುವು ಸಾಧಿಸಿತ್ತು. ಬಳಿಕ ಫೈನಲ್​ನಲ್ಲಿ ನ್ಯೂಜಿಲೆಂಡ್​ ತಂಡವನ್ನು ಬಗ್ಗು ಬಡಿದು ಮೂರನೇ ಬಾರಿಗೆ ಚಾಂಪಿಯನ್​ ಆಗಿ ಹೊರ ಹೊಮ್ಮಿತ್ತು .

ಇದನ್ನೂ ಓದಿ: RCB ಪಂದ್ಯಕ್ಕೂ ಮೊದಲೇ ಬಿಗ್​ಶಾಕ್​! ಐಪಿಎಲ್​ ನಿಂದ ಹೊರಬಿದ್ದ ಸ್ಟಾರ್​ ಪ್ಲೇಯರ್​​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.