ನವದೆಹಲಿ: ಐಪಿಎಲ್ 2025ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್‌ಕೆ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮೊಣಕೈ ಗಾಯದಿಂದಾಗಿ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಈ ಋತುವಿನ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದಿದ್ದ ಪಂದ್ಯದಿಂದಲೇ ರುತುರಾಜ್ ಗಾಯಕ್ವಾಡ್ ಹೊರಗುಳಿಯಲಿದ್ದಾರೆ ಎಂದು ವರದಿ ಆಗಿದ್ದವು. ಆದರೆ ರುತುರಾಜ್ ಗಾಯದಿಂದ ಚೇತರಿಸಿಕೊಂಡು ಪಂದ್ಯಕ್ಕೆ ಮರಳಿದ್ದರು. ಇದೀಗ ಗಾಯದ ತೀವ್ರತೆ ಹೆಚ್ಚಾದ ಕಾರಣ, ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಸಿಎಸ್‌ಕೆ ಆಡಲಿರುವ ಮುಂದಿನ 9 ಪಂದ್ಯಗಳಿಗೆ ಧೋನಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸ್ವತಃ ತಂಡದ ಮುಖ್ಯಕೋಚ್ ಆಗಿರುವ ಸ್ಟೀಫನ್ ಫ್ಲೆಮಿಂಗ್ ದೃಢಪಡಿಸಿದ್ದಾರೆ.
CAPTAIN MAHENDRA SINGH DHONI 🦁7️⃣#WhistlePodu #Yellove 🦁💛 pic.twitter.com/H3Wqm6AdGt
— Chennai Super Kings (@ChennaiIPL) April 10, 2025
ಧೋನಿ 2008 ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಅಲ್ಲದೆ ಇವರ ನಾಯಕತ್ವದಲ್ಲಿ ಸಿಎಸ್‌ಕೆ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಆದರೆ 2022ರ ಋತುವಿಗೂ ಮುನ್ನ ವಯಸ್ಸಿನ ಕಾರಣದಿಂದಾಗಿ ಧೋನಿ ನಾಯಕತ್ವ ತ್ಯಜಿಸಿದ್ದರು. ಈ ವೇಳೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ಸಿಎಸ್‌ಕೆ ಕಳಪೆ ಪ್ರದರ್ಶನ ನೀಡಿದ ಕಾರಣ ಋತುವಿನ ಮಧ್ಯದಲ್ಲೇ ಮರಳಿ ಧೋನಿ ಅವರಿಗೆ ನಾಯಕ್ತವ ಹಸ್ತಾಂತರಿಸಲಾಗಿತ್ತು.
2023ರಲ್ಲಿ ತಂಡವನ್ನು ಮತ್ತೆ ಚಾಂಪಿಯನ್ ಪಟ್ಟಕ್ಕೇರಿಸಿದ ಧೋನಿ 2024ರ ಐಪಿಎಲ್‌ನಿಂದ ರುತುರಾಜ್ ಗಾಯಕ್ವಾಡ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದರು. ಸದ್ಯ ನಡೆಯುತ್ತಿರುವ ಋತುವಿನಲ್ಲಿ ಚೆನ್ನೈ ತಂಡ ಕಳಪೆ ಪ್ರದರ್ಶನ ನೀಡುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ ಸತತ ನಾಲ್ಕು ಪಂದ್ಯಗಳನ್ನು ಸೋತು 9ನೇ ಸ್ಥಾನದಲ್ಲಿದೆ.
🚨 OFFICIAL STATEMENT 🚨
— Chennai Super Kings (@ChennaiIPL) April 10, 2025
Ruturaj Gaikwad ruled out of the season due to a hairline fracture of the elbow.
MS DHONI TO LEAD. 🦁
GET WELL SOON, RUTU ! ✨ 💛#WhistlePodu #Yellove🦁💛 pic.twitter.com/U0NsVhKlny
ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮುಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಏಪ್ರಿಲ್ 11ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: ಕನ್ನಡ ಗೊತ್ತಿರದ ಅಭಿಮಾನಿಗಳಿಗಾಗಿ ಜಿಲೇಬಿ ಅಭಿಯಾನ ಆರಂಭಿಸಿದ RCB!