ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲನುಭವಿಸಿತ್ತು. ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದು ಸೋಲಿಗೆ ಕಾರಣವಾಗಿತ್ತು. ಜೊತೆಗೆ ರೋಹಿತ್ ಶರ್ಮಾ ನಾಯಕನ ಜವಾಬ್ದಾರಿ ನಿಭಾಯಿಸುವಲ್ಲಿ ಫೇಲ್ ಆಗಿದ್ದರು. ಸರಣಿಯುದ್ದಕ್ಕೂ ರನ್ ಗಳಿಸಲು ಹೆಣಗಾಡಿದ್ದ ಹಿಟ್ಮ್ಯಾನ್ ಇದೀಗ ಮತ್ತೆ ಕಮ್ಬ್ಯಾಕ್ ಮಾಡಲು ಸಿದ್ಧತೆ ನಡೆಸಿದ್ದಾರೆ.
ತಮ್ಮ ಕಳೆದು ಹೋಗಿರುವ ಫಾರ್ಮ್ ಅನ್ನು ರಣಜಿ ಮೂಲಕ ಮರಳಿ ಪಡೆಯಲು ರೋಹಿತ್ ಶರ್ಮಾ ಈ ಪಂದ್ಯವಾಳಿಯಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ತಂಡದೊಂದಿಗೆ ಅಭ್ಯಾಸ ನಡೆಸಿರುವ ರೋಹಿತ್ ಜ.23 (ಗುರುವಾರ) ದಿಂದ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಪಂದ್ಯವನ್ನು ಆಡಲಿದ್ದಾರೆ. ಈ ಪಂದ್ಯಕ್ಕೆ ಮುಂಬೈ ತಂಡ 17 ಆಟಗಾರರ ತಂಡವನ್ನು ಪ್ರಕಟಿಸಿದ್ದು ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ.
ರೋಹಿತ್ ಶರ್ಮಾ ಜೊತೆಗೆ ಯುವ ಆಟಗಾರ ಯಶಸ್ವಿ ಜೈಶ್ವಾಲ್, ಶಿವಂ ದುಬೆ, ಶಾರ್ದೂಲ್ ಠಾಕೂರ್ ಮತ್ತು ಶ್ರೇಯಸ್ ಅಯ್ಯರ್ ಮುಂಬೈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಬಿಸಿಸಿಐ ಟೀಂ ಇಂಡಿಯಾ ಆಟಗಾರರಿಗೆ ಖಡಕ್ ವಾರ್ನಿಂಗ್ ಮಾಡಿದ್ದು ಅಂತರಾಷ್ಟ್ರೀಯ ಪಂದ್ಯಗಳು ಇಲ್ಲದಿರುವಾಗ ಎಲ್ಲಾ ಆಟಗಾರರು ಕಡ್ಡಾಯವಾಗಿ ದೇಶೀಯ ಲೀಗ್‌ಗಳಲ್ಲಿ ಆಡಬೇಕು ಎಂದು ಆದೇಶಿಸಿತು. ಇದೇ ಕಾರಣಕ್ಕೆ ರೋಹಿತ್, ಗಿಲ್, ಜಡೇಜಾ, ಪಂತ್ ಮುಂತಾದ ಆಟಗಾರರು ರಣಜಿ ಪಂದ್ಯಗಳಲ್ಲಿ ಆಡಲು ಸಿದ್ಧರಾಗಿದ್ದಾರೆ.
ಏತನ್ಮಧ್ಯೆ, ರೋಹಿತ್ ಶರ್ಮಾ 2015 ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಪಂದ್ಯವನ್ನು ಆಡಲಿದ್ದಾರೆ. ಆದರೆ ರಣಜಿ ಪಂದ್ಯಕ್ಕೂ ಮೊದಲು ರೋಹಿತ್ ಶರ್ಮಾ ನಾಯಕನಾಗಿ ಮುಂಬೈ ತಂಡವನ್ನು ನಡೆಸಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದ್ರೆ ಮುಂಬೈ ತಂಡಕ್ಕೆ ಅಜಿಂಕ್ಯ ರಹಾನೆ ಅವರನ್ನು ನಾಯಕ ಮಾಡಿ ನೇಮಿಸಲಾಗಿದ್ದು ರೋಹಿತ್ಗೆ ಅನಿರೀಕ್ಷಿತ ಆಘಾತವಾದಂತಾಗಿದೆ.
ಇದೀಗ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ರಣಜಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಪಂದ್ಯಾವಳಿಗಳನ್ನು ಆಡಲಿದ್ದಾರೆ. ಈ ರಣಜಿ ಪಂದ್ಯದ ನಂತರ ಹಿಟ್ಮ್ಯಾನ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗವಹಿಸಲಿದ್ದಾರೆ.
ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ), ಯಶಸ್ವಿ ಜೈಶ್ವಾಲ್, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಆಯುಷ್ ಮಾತ್ರೆ, ಶಿವಂ ದುಬೆ, ಸಿದ್ದೇಶ್ ಲಾಡ್, ಆಕಾಶ್ ಆನಂದ್, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಹಿಮಾಂಶು ಸಿಂಗ್, ಶಾರ್ದೂಲ್ ಠಾಕೂರ್, ತನುಷಿಯನ್ ಸಾಮ್ಸ್ ಮುಲಾನಿ, ರಾಯ್ಸ್ಟನ್ ಡಯಾಸ್, ಮೋಹಿತ್ ಅವಸ್ತಿ, ಕರ್ಶ್ ಕೊಠಾರಿ, ಸಿಲ್ವೆಸ್ಟರ್ ಡಿಸೋಜಾ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ 13 ವರ್ಷದ ಹಳೆ ಸೇಡು ತೀರಿಸಿಕೊಳ್ಳಲು ಸಜ್ಜಾದ ಟೀಂ ಇಂಡಿಯಾ!