ETV Bharat / sports

ಸೇಹ್ವಾಗ್​ ರೆಕಾರ್ಡ್​ ಮೇಲೆ ಹಿಟ್​ಮ್ಯಾನ್​ ಕಣ್ಣು: ಸಾರ್ವಕಾಲಿಕ ದಾಖಲೆ ಬರೆಯಲು ರೋಹಿತ್​ ಸಜ್ಜು! - Rohit Sharma

ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸೇಹ್ವಾಗ್​ ಅವರ ದಾಖಲೆ ಮುರಿಯಲು ರೋಹಿತ್​ ಶರ್ಮಾ ಸಜ್ಜಾಗಿದ್ದಾರೆ. ಆ ದಾಖಲೆ ಯಾವುದು ಎಂಬುದರ ಬಗ್ಗೆ ಈ ಸುದ್ದಿಯಲ್ಲಿ ತಿಳಿಯಿರಿ.

author img

By ETV Bharat Sports Team

Published : Sep 15, 2024, 11:04 PM IST

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ (Getty Images)

ಹೈದರಾಬಾದ್​: ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದೆ. ಈ ಸರಣಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಂದು ಚೆನ್ನೈ ಮೈದಾನದಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಚೆನ್ನೈ ತಲುಪಿ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಜತೆಗೆ ಈ ಸರಣಿ ನಾಯಕ ರೋಹಿತ್ ಶರ್ಮಾ ಅವರ ಪಾಲಿಗೆ ಮಹತ್ವದಾಗಿದೆ. ಏಕೆಂದರೆ ಅಪರೂಪದ ದಾಖಲೆಯೊಂದು ಬರೆಯಲಿದ್ದಾರೆ.

ಹೌದು, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಖಲೆ ಮೇಲೆ ಹಿಟ್‌ಮ್ಯಾನ್ ಕಣ್ಣಿಟ್ಟಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ ಟೆಸ್ಟ್‌ನಲ್ಲಿ 84 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಅನುಕ್ರಮದಲ್ಲಿ, ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಟೀಂ ಇಂಡಿಯಾ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಈ ಪಟ್ಟಿಯಲ್ಲಿ ಸೆಹ್ವಾಗ್ (90 ಸಿಕ್ಸರ್) ಅಗ್ರಸ್ಥಾನದಲ್ಲಿದ್ದಾರೆ. ಆದರೆ ರೋಹಿತ್ ಇನ್ನೂ 7 ಸಿಕ್ಸರ್ ಬಾರಿಸಿದರೆ ಟೆಸ್ಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟ್ಸ್​ಮನ್ ಎಂಬ ದಾಖಲೆ ಬರೆಯಲಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಈ ಸರಣಿಯಲ್ಲಿ ರೋಹಿತ್‌ಗೆ ಸೆಹ್ವಾಗ್‌ ದಾಖಲೆ ಮುರಿಯುವ ಅವಕಾಶವಿದೆ

ರೋಹಿತ್ ಟೆಸ್ಟ್ ವೃತ್ತಿಜೀವನ: 2013ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಹಿಟ್​ಮ್ಯಾನ್​​ ಇದುವರೆಗೆ 59 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ಆಡಿರುವ 101 ಇನ್ನಿಂಗ್ಸ್‌ಗಳಲ್ಲಿ 45.46 ಸರಾಸರಿಯಲ್ಲಿ 4137 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕ ಮತ್ತು 17 ಅರ್ಧ ಶತಕಗಳು ಸೇರಿವೆ. ಟೆಸ್ಟ್​ನ ಗರಿಷ್ಠ ಸ್ಕೋರ್ 212 ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.