ETV Bharat / sports

ಚೆನ್ನೈ, ಲಕ್ನೋ ವಿರುದ್ಧದ ಪಂದ್ಯಗಳನ್ನು ಗೆದ್ದರೆ RCBಗಿದೆ ದಾಖಲೆ ಬರೆಯುವ ಚಾನ್ಸ್​: ಆ ರೆಕಾರ್ಡ್​ಗಳೇನು ಗೊತ್ತಾ​? - RCB GOT CHANCE TO CREATE NEW RECORD

ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ತನ್ನ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ 'ಅಜೇಯ' ದಾಖಲೆಯೊಂದನ್ನು ನಿರ್ಮಿಸಲಿದೆ.

RCB
ಆರ್​ಸಿಬಿ ತಂಡ (IANS)
author img

By ETV Bharat Karnataka Team

Published : April 30, 2025 at 7:39 PM IST

2 Min Read

ಬೆಂಗಳೂರು: ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂದ್ಯದಿಂದ ಪಂದ್ಯಕ್ಕೆ ಅಭಿಮಾನಿಗಳ ಮನಗೆಲ್ಲುತ್ತಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರುವ ಆರ್‌ಸಿಬಿ ಇದುವರೆಗೂ ಆಡಿರುವ 10 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ಸಾಧಿಸುವ ಮೂಲಕ ಟೇಬಲ್ ಟಾಪರ್​ ಆಗಿ ಹೊರಹೊಮ್ಮಿದೆ. ಇದರ ನಡುವೆ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ತನ್ನ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ 'ಅಜೇಯ' ದಾಖಲೆಯೊಂದನ್ನು ನಿರ್ಮಿಸಲಿದೆ.

ಬದ್ಧ ವೈರಿಗಳ ವಿರುದ್ಧ ಅಜೇಯವಾಗುಳಿಯುವ ಸುವರ್ಣಾವಕಾಶ: 2009ರ ಐಪಿಎಲ್‌ ಆವೃತ್ತಿ ಹೊರತುಪಡಿಸಿದರೆ ಇನ್ಯಾವುದೇ ಸೀಸನ್‌ಗಳಲ್ಲಿ ಆರ್‌ಸಿಬಿ ವಿರುದ್ಧ ಲೀಗ್ ಹಂತದಲ್ಲಿ 1ಕ್ಕಿಂತ ಹೆಚ್ಚು ಪಂದ್ಯಗಳನ್ನ ಸಿಎಸ್‌ಕೆ ತಂಡ ಸೋತಿಲ್ಲ. ಆದಾಗ್ಯೂ ಸಹ, 2009ರ ಆವೃತ್ತಿಯಲ್ಲಿ ಮುಖಾಮುಖಿಯಾದ 3 ಪಂದ್ಯಗಳ ಪೈಕಿ 1 ಪಂದ್ಯವನ್ನು ಸಿಎಸ್‌ಕೆ ತಂಡ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಐಪಿಎಲ್‌ನಲ್ಲಿ ಈಗಾಗಲೇ ಸಿಎಸ್‌ಕೆ ತಂಡವನ್ನ ಒಮ್ಮೆ ಮಣಿಸಿರುವ ಆರ್‌ಸಿಬಿ ತಂಡ, ಮೇ 3ರಂದು ತವರಿನ ಅಭಿಮಾನಿಗಳ ಎದುರು ಸಿಎಸ್‌ಕೆ ತಂಡವನ್ನು ಮಣಿಸಿದರೆ ಲೀಗ್ ಹಂತದಲ್ಲಿ ಬದ್ಧವೈರಿ ವಿರುದ್ಧ ಮೊದಲ ಬಾರಿಗೆ ಸೋಲಿಲ್ಲದೆ ಉಳಿದುಕೊಳ್ಳಲಿದೆ.

ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನ ಅಭಿಮಾನಿಗಳೆದುರು ಗೆಲುವು ಸಾಧಿಸಿರುವ ಆರ್‌ಸಿಬಿ ಹುಡುಗರ ಆತ್ಮವಿಶ್ವಾಸವೂ ಇಮ್ಮಡಿಗೊಂಡಿದೆ. ಇತ್ತ ಈ ಬಾರಿ ಆಡಿರುವ 9 ಪಂದ್ಯಗಳಲ್ಲಿ 7 ಪಂದ್ಯಗಳನ್ನ‌ು ಕೈಚೆಲ್ಲಿ ಅಂಕಪಟ್ಟಿಯಲ್ಲಿ ಪಾತಾಳದಲ್ಲಿರುವ ಚೆನ್ನೈ ಮುಂದಿನ ಸುತ್ತಲ್ಲಿ ಆರ್‌ಸಿಬಿಗೆ ಎದುರಾಗುವುದು ಬಹುತೇಕ ಕಷ್ಟವೆಂದೇ ಹೇಳಲಾಗುತ್ತಿದೆ.

ಅಪರೂಪದ ದಾಖಲೆ ನಿರ್ಮಿಸಲು ಚಾನ್ಸ್​: ತವರಿನಲ್ಲಿ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ದಾಖಲಿಸಿರುವ ಆರ್‌ಸಿಬಿ ಉಳಿದ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಆದರೆ ತವರಿನಾಚೆ ಆರ್‌ಸಿಬಿ ತಂಡ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದೆ. ಈ ಬಾರಿ ತವರಿನಾಚೆ ಆರು ಪಂದ್ಯಗಳನ್ನ ಆರ್‌ಸಿಬಿ ತಂಡ ಆಡಿದ್ದು, ಆ ಆರೂ ಪಂದ್ಯಗಳಲ್ಲಿ ಜಯ ದಾಖಲಿಸಿದೆ. ತವರಿನಾಚೆ ಉತ್ತಮ ಲಯದಲ್ಲಿರುವ ಆರ್‌ಸಿಬಿ ತಂಡ ಮೇ 9ರಂದು ಲಕ್ನೋದಲ್ಲಿ ನಡೆಯಲಿರುವ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದ್ದೇ ಆದರೆ ಲೀಗ್ ಹಂತದಲ್ಲಿ ತವರಿನಾಚೆ ಎಲ್ಲ ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

2012ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ತವರಿನಾಚೆ ಆಡಿದ ಒಟ್ಟು 10 ಪಂದ್ಯಗಳನ್ನು (ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳು ಸೇರಿದಂತೆ) ಗೆದ್ದ ದಾಖಲೆಯನ್ನು ಹೊಂದಿದೆ. ಆದರೆ ಲೀಗ್ ಹಂತದಲ್ಲಿ ರಾಜಸ್ಥಾನ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮುಗ್ಗರಿಸಿತ್ತು. ಆದರೆ ಈ ಬಾರಿ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿದರೆ ತವರಿನಾಚೆ ಲೀಗ್ ಹಂತದಲ್ಲಿ ಅಜೇಯವಾಗುಳಿಯುವ ಮೊದಲ ತಂಡ ಎಂಬ ಖ್ಯಾತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾತ್ರವಾಗಲಿದೆ.

ಮೇ 3ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್‌ಸಿಬಿ ಎದುರಿಸಲಿದೆ ಹಾಗೂ ಮೇ 9ರಂದು ಲಕ್ನೋದ‌ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡದ ಸವಾಲನ್ನು ಆರ್‌ಸಿಬಿ ಎದುರಿಸಲಿದೆ.

ಇದನ್ನೂ ಓದಿ: ಐಪಿಎಲ್​ ಇತಿಹಾಸದಲ್ಲೇ ಯಾವ ತಂಡಕ್ಕೂ ಸಾಧ್ಯವಾಗದ ಅಪರೂಪದ ದಾಖಲೆ ಬರೆದ ಆರ್‌ಸಿಬಿ!

ಇದನ್ನೂ ಓದಿ: ಮ್ಯಾಚು ನಮ್ದೆ, ಕ್ಯಾಪು ನಮ್ದೆ, ಪಾಯಿಂಟ್​ ಟೇಬಲು​ ನಮ್ದೆ, ಈ ಸಲ ಕಪ್ಪೂ​ ನಮ್ದೇ ಅಂತಿದ್ದಾರೆ ಫ್ಯಾನ್ಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.