RCB vs RR Match: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ನಾಳೆ ತನ್ನ 6ನೇ ಪಂದ್ಯ ಆಡಲು ಸಜ್ಜಾಗಿದೆ. ಇದರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವೂ ಜೈಪೂರ್ನ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನಡೆಯಲಿದೆ.
ಈಗಾಗಲೇ ಐದು ಪಂದ್ಯಗಳನ್ನು ಆಡಿರುವ ಬೆಂಗಳೂರು ಪಡೆ 3ರಲ್ಲಿ ಗೆದ್ದು ಎರಡರಲ್ಲಿ ಸೋಲು ಕಂಡಿದೆ. ಅದರಲ್ಲೂ ಬುಧವಾರ ನಡೆದಿದ್ದ ತವರು ಮೈದಾನದಲ್ಲಿ ಡೆಲ್ಲಿ ವಿರುದ್ಧ ಸೋಲನ್ನು ಕಂಡಿರುವ ಆರ್ಸಿಬಿ ಇದೀಗ ರಾಜಸ್ಥಾನ ಮಣಿಸಿ ಮೂರನೇ ಸ್ಥಾನಕ್ಕೆರಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಬಲಿಷ್ಠ ತಂಡದೊಂದಿಗೆ ಮೈದಾನಕ್ಕಿಳಿಯಲು ಸಜ್ಜಾಗಿದೆ.
Royal Challenge Packaged Drinking Water Moment of the Day 📸
— Royal Challengers Bengaluru (@RCBTweets) April 12, 2025
No-look shot: Check. 💥
Pose: Sharp. 😮💨
Gaffers: Impressed. 👌#PlayBold #ನಮ್ಮRCB #IPL2025 pic.twitter.com/1SJMjHxTCr
ಸ್ಟಾರ್ ಆಟಗಾರನನ್ನು ಹೊರಗಿಡುವ ಸಾಧ್ಯತೆ; ನಾಳೆಯ ಪಂದ್ಯಕ್ಕಾಗಿ ಆರ್ಸಿಬಿ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೌದು, ಸತತ ಎರಡು ಪಂದ್ಯಗಳಲ್ಲಿ ಫ್ಲಾಪ್ ಆಗಿರುವ ಸ್ಟಾರ್ ಆಟಗಾರನನ್ನು ಈ ಪಂದ್ಯದಿಂದ ಹೊರಗಿಡುವ ಸಾಧ್ಯತೆ ದಟ್ಟವಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ಲಿವಿಂಗ್ಸ್ಟೋನ್ ಮುಂಬೈ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದ್ದರು.
𝐓𝐫𝐚𝐯𝐞𝐥 𝐃𝐢𝐚𝐫𝐢𝐞𝐬: 𝐓𝐡𝐞 𝐏𝐢𝐧𝐤 𝐂𝐢𝐭𝐲 𝐠𝐞𝐭𝐬 𝐚 𝐬𝐩𝐥𝐚𝐬𝐡 𝐨𝐟 𝐆𝐫𝐞𝐞𝐧 🩷💚
— Royal Challengers Bengaluru (@RCBTweets) April 12, 2025
Before we go Green against RR on Sunday, the team sported new green travel kit en route Jaipur, sharing a few special messages about RCB’s Go Green initiative over the years. 🪴… pic.twitter.com/1GO1KsNPTa
ಬುಧವಾರ ತವರು ಮೈದಾನದಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಾದರೂ ತಂಡಕ್ಕೆ ಆಸರೆ ಆಗುತ್ತಾರೆ ಎಂದುಕೊಂಡಿದ್ದ ಫ್ಯಾನ್ಸ್ಗಳಿಗೆ ಮತ್ತೆ ನಿರಾಸೆ ಮೂಡಿಸಿದ್ದರು. ಸಂಕಷ್ಟದಲ್ಲಿದ್ದ ತಂಡಕ್ಕೆ ಕೈ ಹಿಡಿಯದ ಲಿವಿಂಗ್ಸ್ಟೋನ್ 6 ಎಸೆತಗಳನ್ನು ಆಡಿ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರಿಂದಾಗಿ ತಂಡ ಅಲ್ಪಮೊತ್ತಕ್ಕೆ ಕುಸಿಯಿವುದರ ಜೊತೆಗೆ ಸೋಲು ಕಂಡಿತು.
ಇದೀಗ ಮುಂದಿನ ಪಂದ್ಯಕ್ಕೆ ಲಿವಿಂಗ್ಸ್ಟೋನ್ ಅವರನ್ನು ಹೊರಗಿಡುವ ಸಾಧ್ಯತೆ ಇದೆ. ಇವರ ಸ್ಥಾನಕ್ಕೆ ಜೇಕಬ್ ಬೆಥೆಲ್ ಅವರನ್ನು ಆಡಿಸುವು ಬಗ್ಗೆ ಚಿಂತಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಇಂಗ್ಲೆಂಡ್ನ ಯುವ ಆಲ್ರೌಂಡರ್ ಆಗಿರುವ ಬೆಥೆಲ್ ಅವರನ್ನು ಮೆಗಾ ಹರಾಜಿನಲ್ಲಿ ಆರ್ಸಿಬಿ 2 ಕೋಟಿ ರೂಗೆ ಖರೀದಿಸಿತ್ತು. ಆದರೆ, ಈ ವರೆಗೂ ಆರ್ಸಿಬಿ ಪರ ಕಣಕ್ಕಿಳಿಯುವ ಅವಕಾಶ ಬೆಥೆಲ್ಗೆ ದೊರೆತಿಲ್ಲ. ನಾಳೆಯ ಪಂದ್ಯಕ್ಕೆ ಕಣಕ್ಕಿಳಿಯುವ ಸಾಧ್ಯತೆ ಇದೆ.
Royal Challenge Packaged Drinking Water Naya Sher of the Match: Suyash Sharma 🐅
— Royal Challengers Bengaluru (@RCBTweets) April 11, 2025
With a crafty 1️⃣/2️⃣5️⃣ at an economy of just 6️⃣.2️⃣, he tightened the screws during the crucial middle overs and spun his way to be a standout performer! 👏 #PlayBold #ನಮ್ಮRCB #IPL2025 #RCBvDC pic.twitter.com/e835WiVRMm
ಆರ್ಸಿಬಿ ಸಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟೀದರ್ (ನಾಯಕ), ದೇವದರ್ ಪಡಿಕ್ಕಲ್, ಲಿವಿಂಗ್ಸ್ಟೋನ್/ಜೇಕಬ್ ಬೆಥೆಲ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೆಜೆಲ್ವುಡ್, ಯಶ್ ದಯಾಲ್.
ಇದನ್ನೂ ಓದಿ: ಶಾಕಿಂಗ್ ನ್ಯೂಸ್: ಐಪಿಎಲ್ನಿಂದ ಹೊರಬಿದ್ದ ಡೇಂಜರಸ್ ಆಲ್ರೌಂಡರ್ ; ಏನಾಯ್ತು?