ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ 6ನೇ ಪಂದ್ಯವನ್ನು ಆಡುತ್ತಿದೆ. ಇದರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಐದು ಪಂದ್ಯಗಳನ್ನು ಆಡಿರುವ ಬೆಂಗಳೂರು ತಂಡ 3 ರಲ್ಲಿ ಗೆದ್ದು ಎರಡರಲ್ಲಿ ಸೋಲನ್ನು ಕಂಡಿದೆ.
ಇದೀಗ ಇಂದು ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಬಗ್ಗು ಬಡಿಯಲು ಮುಂದಾಗಿದೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ವಿರುದ್ಧ ಆಡಿದ್ದ ಎರಡೂ ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದ ಬೆಂಗಳೂರು ಈ ಬಾರಿ ಗೆದ್ದು ಹಳೆ ಲೆಕ್ಕಾಚುಕ್ತಿ ಮಾಡಲು ಸಜ್ಜಾಗಿದೆ. ಇದಕ್ಕಾಗಿ ಬಲಿಷ್ಠ ಪಡೆಯೊಂದಿಗೆ ಮೈದಾನಕ್ಕೆ ಆಗಮಿಸುತ್ತಿದೆ.
Today's forecast: Expect a STORM of SIXES... 🌪
— Star Sports (@StarSportsIndia) April 13, 2025
Who do you think will smash the most sixes today in Jaipur? 🤔#IPLonJioStar 👉 #RRvRCB | SUN, 13th APR, 2:30 PM on Star Sports 2, Star Sports 2 Hindi & JioHotstar! pic.twitter.com/c94YlXmgG0
RCB vs RR ಸೋಲು-ಗೆಲುವು ದಾಖಲೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಈವೆರೆಗೆ ಒಟ್ಟು 32 ಬಾರಿ ಐಪಿಎಲ್ನಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಆರ್ಸಿಬಿ 15 ಪಂದ್ಯಗಳನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ ರಾಜಸ್ಥಾನ ತಂಡ 14 ಬಾರಿ ಆರ್ಸಿಬಿ ವಿರುದ್ಧ ಜಯಭೇರಿ ಬಾರಿಸಿದೆ. ಮೂರು ಪಂದ್ಯಗಳು ರದ್ದಾಗಿವೆ. ರಾಜಸ್ಥಾನ ವಿರುದ್ಧ ಆರ್ಸಿಬಿಯ 200ರನ್ ಹೈಸ್ಕೋರ್ ಆಗಿದೆ. 70ರನ್ ಲೋಸ್ಕೋರ್ ಆಗಿದೆ. ರಾಜಸ್ತಾನ ತಂಡ ಆರ್ಸಿಬಿ ವಿರುದ್ದ 217 ರನ್ ಬಾರಿಸಿದ್ದ ಹೈಸ್ಕೋರ್ ಆಗಿದೆ. 58 ರನ್ ಕಡಿಮೆ ಸ್ಕೋರ್ ಆಗಿದೆ.
It’s experience vs explosiveness. Gen Gold takes on Gen Bold.
— Star Sports (@StarSportsIndia) April 13, 2025
Will King Kohli deliver another masterclass, or will Jaiswal bring the fireworks?#IPLonJioStar 👉 #RRvRCB | SUN, 13th APR, 2:30 PM on Star Sports 2, Star Sports 2 Hindi & JioHotstar! pic.twitter.com/2M4i1zXJVK
ಈ ಇಬ್ಬರ ಮೇಲೆ ಭಾರೀ ನಿರೀಕ್ಷೆ: ಇಂದಿನ ಪಂದ್ಯದಲ್ಲಿ ಈ ಮೂವರು ಆಟಗಾರರ ಮೇಲೆ ಭಾರೀ ನಿರೀಕ್ಷೆಗಳು ಹುಟ್ಟುಕೊಂಡಿವೆ. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋಲನ್ನು ಕಂಡಿದ್ದ ಆರ್ಸಿಬಿ ಈ ಪಂದ್ಯದಲ್ಲಿ ಗೆಲ್ಲಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ. ಜೊತೆಗೆ ಈ ಮೂವರು ಆಟಗಾರ ಮೇಲೆ ಭಾರೀ ನಿರೀಕ್ಷೆ ಇಟ್ಟಿದ್ದಾರೆ. ಹೌದು, ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಆರಂಭಿಕರಾಗಿ ಅಬ್ಬರಿಸಿದರೆ ತಂಡ ಬೃಹತ್ ಮೊತ್ತವನ್ನು ಕಲೆಹಾಕಲಿದೆ. ಸದ್ಯ ಉತ್ತಮ ಫಾರ್ಮ್ನಲ್ಲಿರುವ ಪಾಟೀದರ್ ಮೇಲೂ ನಿರೀಕ್ಷೆಗಳಿದ್ದು ಒಮ್ಮೆ ಈ ಬ್ಯಾಟರ್ ಸೆಟ್ ಆದರೆ ರನ್ ಮಳೆಯನ್ನೆ ಹರಿಸುತ್ತಾರೆ.
ಸಂಭಾವ್ಯ ತಂಡಗಳು - ಆರ್ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟೀದರ್ (ನಾಯಕ), ದೇವದರ್ ಪಡಿಕ್ಕಲ್, ಲಿವಿಂಗ್ಸ್ಟೋನ್/ಜೇಕಬ್ ಬೆಥೆಲ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೆಜೆಲ್ವುಡ್, ಯಶ್ ದಯಾಲ್.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ.
ಇದನ್ನೂ ಓದಿ: ಸನ್ ರೈಸರ್ಸ್ ಹೈದರಾಬಾದ್ ಅಬ್ಬರಕ್ಕೆ ದಾಖಲೆಗಳು ಪೀಸ್ ಪೀಸ್!