ETV Bharat / sports

ಆರ್​ಸಿಬಿ vs ಪಂಜಾಬ್​ ಪಂದ್ಯಕ್ಕೂ ಮೊದಲೇ ಬ್ಯಾಡ್ ​ನ್ಯೂಸ್! ಆತಂಕದಲ್ಲಿ ಫ್ಯಾನ್ಸ್​ - RCB VS PBKS MATCH

ಐಪಿಎಲ್​ನ ಇಂದಿನ ಪಂದ್ಯದಲ್ಲಿ ಆರ್​ಸಿಬಿ ಮತ್ತು ಪಂಜಾಬ್​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ.

Virat Kohli
ವಿರಾಟ್ ಕೊಹ್ಲಿ (AFP)
author img

By ETV Bharat Sports Team

Published : April 18, 2025 at 3:31 PM IST

Updated : April 18, 2025 at 6:29 PM IST

1 Min Read

RCB vs PBKS: ಐಪಿಎಲ್​ನಲ್ಲಿ ಇಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು vs ಪಂಜಾಬ್​ ಕಿಂಗ್ಸ್​ ತಂಡಗಳ ನಡುವೆ ಹೈವೋಲ್ಟೇಜ್​ ಪಂದ್ಯವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಈ ಋತುವಿನಲ್ಲಿ ಎರಡೂ ತಂಡಗಳು ಭರ್ಜರಿ ಪ್ರದರ್ಶನ ನೀಡುತ್ತಿವೆ. ಆರ್​ಸಿಬಿ ತಾನಾಡಿರುವ 6 ಪಂದ್ಯಗಳ ಪೈಕಿ 4 ಪಂದ್ಯಗಳನ್ನು ಗೆದ್ದುಕೊಂಡರೆ, ಪಂಜಾಬ್​ ಕಿಂಗ್ಸ್​ ಕೂಡ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಕಂಡಿದೆ. ಅಂಕಪಟ್ಟಿಯಲ್ಲಿ ಆರ್​ಸಿಬಿ 3ನೇ ಸ್ಥಾನದಲ್ಲಿದ್ದರೆ, ಪಂಜಾಬ್​ ನಾಲ್ಕನೇ ಸ್ಥಾನದಲ್ಲಿದೆ.

ತವರಿನಲ್ಲಿ ಆರ್​ಸಿಬಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದು ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ತವರಿನ ಸೋಲಿನ ಓಟಕ್ಕೆ ಬ್ರೇಕ್​ ಹಾಕಲು ಮುಂದಾಗಿದೆ. ಫ್ಯಾನ್ಸ್​ ಕೂಡ ತವರಿನಲ್ಲಿ ಆರ್​ಸಿಬಿ ಗೆಲುವಿನ ಬಾವುಟ ಹಾರಿಸಲಿ ಎಂದು ಆಶಿಸುತ್ತಿದ್ದಾರೆ. ಇದರ ನಡುವೆೆ ಹವಾಮಾನ ಇಲಾಖೆ ಅಭಿಮಾನಿಗಳಿಗೆ ​ಶಾಕಿಂಗ್​ ನ್ಯೂಸ್​ ಕೊಟ್ಟಿದೆ.

ಹೌದು, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಸದ್ಯ ಬೆಂಗಳೂರಿನಲ್ಲಿ ಮಳೆಯ ವಾತಾವರಣವಿದ್ದು, ಪಂದ್ಯದ ವೇಳೆ ಶೇ.22ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಳೆದೆರಡು ದಿನಗಳಿಂದ ರಾಜಧಾನಿಯಲ್ಲಿ ಸಂಜೆ ಸಮಯ ಮಳೆಯಾಗುತ್ತಿದೆ.

RCB vs PBKS ಸೋಲು-ಗೆಲುವಿನ ದಾಖಲೆ: ಎರಡೂ ತಂಡಗಳು ಐಪಿಎಲ್​ನಲ್ಲಿ ಈವರೆಗೂ ಒಟ್ಟು 33 ಬಾರಿ ಎದುರುಬದುರಾಗಿವೆ. ಪಂಜಾಬ್​ ಕಿಂಗ್ಸ್ ಆರ್​ಸಿಬಿ ವಿರುದ್ಧ​ 17 ಬಾರಿ ಗೆಲುವು ಸಾಧಿಸಿದ್ದರೆ, ಬೆಂಗಳೂರು 16 ಬಾರಿ ಪಂಜಾಬ್​ ವಿರುದ್ಧ ಜಯಿಸಿದೆ.

ಸಂಭಾವ್ಯ ತಂಡಗಳು-ಆರ್​ಸಿಬಿ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್, ರಸಿಖ್ ದಾರ್ ಸಲಾಂ, ಕೃನಾಲ್ ಪಾಂಡ್ಯ, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ಯಶ್ ದಯಾಲ್.

ಪಂಜಾಬ್​ ಕಿಂಗ್ಸ್: ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್​), ಮಾರ್ಕೊ ಜಾನ್ಸೆನ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶ್ದೀಪ್ ಸಿಂಗ್, ಸೂರ್ಯಾಂಶ್ ಶೆಡ್ಜ್, ಯುಜ್ವೇಂದ್ರ ಚಾಹಲ್.

ಇದನ್ನೂ ಓದಿ: IPL​ನಲ್ಲಿ ಕೊಹ್ಲಿ ಯಾವ ತಂಡದ ವಿರುದ್ದ ಎಷ್ಟು ರನ್​ ಬಾರಿಸಿದ್ದಾರೆ? CSK ವಿರುದ್ಧ ಗಳಿಸಿರುವ ರನ್ ಎಷ್ಟು​?

Last Updated : April 18, 2025 at 6:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.