RCB vs DC Match: ಐಪಿಎಲ್ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಋತುವಿನಲ್ಲಿ ಎರಡೂ ತಂಡಗಳು ಅದ್ಭುತ ಪ್ರದರ್ಶನ ನೀಡುತ್ತಿವೆ. ಡೆಲ್ಲಿ ತಂಡ ಈ ವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಬೆಂಗಳೂರು ಪಡೆ ಆಡಿದ 4 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಒಂದರಲ್ಲಿ ಸೋಲನ್ನು ಕಂಡಿದೆ. ಗುಜರಾತ್ ಟೈಟಾನ್ಸ್ ವಿರುದ್ದ ಆರ್‌ಸಿಬಿ ಸೋಲಿಗೆ ಶರಣಾಗಿತ್ತು. ಇಂದಿನ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಬಗ್ಗು ಬಡಿದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಆರ್‌ಸಿಬಿ ತಯಾರಿ ನಡೆಸುತ್ತಿದೆ.
LET’S. ROAR. MACHA! 🐅 pic.twitter.com/kXfBzxnwBj
— Delhi Capitals (@DelhiCapitals) April 10, 2025
ಆರ್‌ಸಿಬಿ ಮಾಸ್ಟರ್ ಪ್ಲಾನ್: ಡೆಲ್ಲಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಆರ್‌ಸಿಬಿ ಸಜ್ಜಾಗಿದೆ. ಇದಕ್ಕಾಗಿ ಕೆಲ ಯೋಜನೆಗಳನ್ನು ರೂಪಿಸಿಕೊಂಡಿದೆ. ಡೆಲ್ಲಿ ವಿರುದ್ಧ ಟಾಸ್ ಗೆಲ್ಲುವುದು ಆರ್‌ಸಿಬಿ ಮೊದಲ ಪ್ಲಾನ್ ಆದರೆ, ಪವರ್ ಪ್ಲೇನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಕಟ್ಟಿ ಹಾಕವುದು ಎರಡನೇ ಪ್ಲಾನ್ ಆಗಿದೆ. ಸದ್ಯ ರಾಹುಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಒಂದು ವೇಳೆ ಬ್ಯಾಟಿಂಗ್ ಸೆಟ್ ಆದರೆ ಬೃಹತ್ ಸ್ಕೋರ್ ದಾಖಲಿಸಬಲ್ಲರು. ಒಟ್ಟಾರೆ ಪವರ್ಪ್ಲೇನಲ್ಲಿ ಹೆಚ್ಚಿನ ವಿಕೆಟ್ ಪಡೆದು ಡೆಲ್ಲಿ ಮೇಲೆ ಒತ್ತಡ ಹೆಚ್ಚಿಸಿ ಅಲ್ಪಮೊತ್ತಕ್ಕೆ ಕಟ್ಟಿ ಹಾಕಲು ಪ್ಲಾನ್ ಮಾಡಿಕೊಂಡಿದೆ.
The Chinnaswamy is ready to roar! 🐯
— Star Sports (@StarSportsIndia) April 10, 2025
KL & Axar look to extend DC’s unbeaten run, but Kohli, Bhuvi & Hazlewood stand guard at home. 🥳
A Rivalry Week showdown awaits! #IPLRivalryWeek ⚔#IPLonJioStar 👉 #RCBvDC | THU, 10 Apr | 6:30 PM LIVE on Star Sports 1, Star Sports 1 Hindi… pic.twitter.com/H9Q0ybnwO4
ಹೆಡ್ ಟು ಹೆಡ್: ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈವರೆಗೂ 31 ಪಂದ್ಯಗಳನ್ನು ಆಡಿವೆ. ಇದರಲ್ಲಿ ಆರ್‌ಸಿಬಿ ಹೆಚ್ಚು ಪಂದ್ಯ ಗೆದ್ದು ಪ್ರಾಬಲ್ಯ ಸಾಧಿಸಿದೆ. ಡೆಲ್ಲಿ ವಿರುದ್ದ ಆರ್‌ಸಿಬಿ ಈ ವರೆಗೂ 19 ಪಂದ್ಯಗಳನ್ನು ಗೆದ್ದುಕೊಂಡಿದೆ. ಇದೆ ವೇಳೆ ಆರ್‌ಸಿಬಿ ಮೇಲೆ ಡೆಲ್ಲಿ ತಂಡ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಡೆಲ್ಲಿ ವಿರುದ್ಧ ಆರ್‌ಸಿಬಿ ಸಾಧಿಸಿರುವ 215ರನ್ ಹೈಸ್ಕೋರ್ ಆಗಿದ್ದು 137 ಕಡಿಮೆ ಸ್ಕೋರ್ ಆಗಿದೆ. ಆರ್‌ಸಿಬಿ ವಿರುದ್ಧ ಡೆಲ್ಲಿಯ 196 ರನ್ ಹೈಸ್ಕೋರ್ ಆಗಿದ್ದು 95 ಕನಿಷ್ಠ ಸ್ಕೋರ್ ಆಗಿದೆ.
𝐓𝐞𝐥𝐥 𝐲𝐨𝐮 𝐚𝐥𝐥 𝐚𝐛𝐨𝐮𝐭 𝐢𝐭 𝐰𝐡𝐞𝐧 𝐈 𝐬𝐞𝐞 𝐲𝐨𝐮 𝐚𝐠𝐚𝐢𝐧. 🥹
— Royal Challengers Bengaluru (@RCBTweets) April 9, 2025
Great to catch up with you, Faf! ❤@faf1307 | #PlayBold #ನಮ್ಮRCB pic.twitter.com/0on8t9miDI
ಸಂಭಾವ್ಯ ತಂಡಗಳು - ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಟ್ರಿಸ್ಟಾನ್ ಸ್ಟಬ್ಸ್, ಕೆಎಲ್ ರಾಹುಲ್, ಅಕ್ಸರ್ ಪಟೇಲ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ಮುಖೇಶ್ ಕುಮಾರ್/ಟಿ ನಟರಾಜನ್. ಇಂಪ್ಯಾಕ್ಟ್ ಪ್ಲೇಯರ್: ಮೋಹಿತ್ ಶರ್ಮಾ.
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್. ಇಂಪ್ಯಾಕ್ಟ್ ಪ್ಲೇಯರ್: ರಾಸಿಖ್ ಸಲಾಂ/ಸುಯಶ್ ಶರ್ಮಾ.
ಇದನ್ನೂ ಓದಿ: 128 ವರ್ಷಗಳ ಬಳಿಕ ಒಲಿಂಪಿಕ್ಸ್ಗೆ ಕ್ರಿಕೆಟ್ ಮರು ಸೇರ್ಪಡೆ: ಈ 6 ತಂಡಗಳಿಗೆ ಮಾತ್ರ ಅವಕಾಶ!