RCB vs CSK Virat Kohli: ಐಪಿಎಲ್ 2025 ಅದ್ದೂರಿಯಾಗಿ ಸಾಗುತ್ತಿದೆ. ಈಗಾಗಲೇ 7 ಪಂದ್ಯಗಳು ಯಶಸ್ವಿಯಾಗಿ ಮುಗಿದಿವೆ ಇಂದು 8ನೇ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಉಭಯ ತಂಡಗಳಿಗೆ ಇದು ಪ್ರತಿಷ್ಠೆಯ ಪಂದ್ಯವಾಗಿದ್ದು, ಇದರಲ್ಲಿ ಗೆಲುವು ಸಾಧಿಸಲು ಕಠಿಣ ಅಭ್ಯಾಸ ನಡೆಸುತ್ತಿವೆ.
ಅದರಲ್ಲೂ ಆರ್ಸಿಬಿ ತಂಡದ ಪ್ರಮುಖ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಈ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ. ಹಾಗಾದರೆ ಐಪಿಎಲ್ನಲ್ಲಿ ಕೊಹ್ಲಿ ಸಿಡಿಸಿರುವ ಶತಕ - ಅರ್ಧಶತಕಗಳೆಷ್ಟು, ಸಿಎಸ್ಕೆ ವಿರುದ್ಧ ಕಲೆ ಹಾಕಿದ ರನ್ಗಳೆಷ್ಟು ಎಂದು ಇದೀಗ ತಿಳಿಯೋಣ.
When it comes to consistency, King Kohli stands in a league of his own. 👑🫡#PlayBold #ನಮ್ಮRCB #IPL2025 pic.twitter.com/cOeoRgfCLe
— Royal Challengers Bengaluru (@RCBTweets) March 25, 2025
ವಿರಾಟ್ ಕೊಹ್ಲಿ IPL ದಾಖಲೆ: ಮೊದಲ ಆವೃತ್ತಿಯಿಂದಲೂ ಈವರೆಗೂ ಬರೋಬ್ಬರಿ 18 ಆವೃತ್ತಿಗಳಲ್ಲಿ ಆರ್ಸಿಬಿ ತಂಡ ಪ್ರತಿನಿಧಿಸುತ್ತಿರುವ ಕೊಹ್ಲಿ ಒಟ್ಟು 253 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 38ರ ಸರಾಸರಿಯಲ್ಲಿ 8063 ರನ್ ಬಾರಿಸಿದ್ದಾರೆ. ಇದರಲ್ಲಿ 8 ಶತಕ ಮತ್ತು 56 ಅರ್ಧಶತಕ ಸೇರಿವೆ. 113 ಇವರ ಐಪಿಎಲ್ನ ಹೈಸ್ಕೋರ್ ಆಗಿದೆ.
Precision Personified ™️#PlayBold #ನಮ್ಮRCB #IPL2025 pic.twitter.com/H4b57mSOWe
— Royal Challengers Bengaluru (@RCBTweets) March 26, 2025
CSK ವಿರುದ್ಧ ಕೊಹ್ಲಿ ದಾಖಲೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ವಿರಾಟ್ ಕೊಹ್ಲಿ ದಾಖಲೆ ಉತ್ತಮವಾಗಿದೆ, ಇವರು ಈವರೆಗೂ ಈ ತಂಡದ ವಿರುದ್ಧ 34 ಪಂದ್ಯಗಳನ್ನು ಆಡಿ 1067ರನ್ ಗಳಿಸಿದ್ದಾರೆ. ಇದರಲ್ಲಿ 9 ಅರ್ಧ ಶತಕಗಳು ಸೇರಿವೆ. ಚೆನ್ನೈ ವಿರುದ್ಧ ಕೊಹ್ಲಿ ದಾಖಲಿಸಿರುವ 90 ರನ್ ಹೈಸ್ಕೋರ್ ಆಗಿದೆ.
𝐈𝐭’𝐬 𝐚𝐥𝐥 𝐜𝐚𝐥𝐦 𝐨𝐧 𝐭𝐡𝐞 𝐬𝐨𝐮𝐭𝐡𝐞𝐫𝐧 𝐟𝐫𝐨𝐧𝐭!
— Royal Challengers Bengaluru (@RCBTweets) March 28, 2025
Smiles, warmth and chill vibes ahead of the big match up tonight at Chepauk!
🎧: Animal #PlayBold #ನಮ್ಮRCB #CSKvRCB pic.twitter.com/bhQSBcN38K
ಚೆಪಾಕ್ ಮೈದಾನದಲ್ಲಿ ವಿರಾಟ್ ದಾಖಲೆ: 2008 ರಿಂದ 2024ರ ವರೆಗೆ ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ವಿರಾಟ್ ಕೊಹ್ಲಿ ಒಟ್ಟು 9 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 304 ರನ್ ಗಳಿಸಿದ್ದಾರೆ. 58 ಹೈಸ್ಕೋರ್ ಆಗಿದೆ. ಈ ಮೈದಾನದಲ್ಲಿ ಕೊಹ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ.
VK's smash ➡️ KP's reflexes, OP! 😮💨#PlayBold #ನಮ್ಮRCB #IPL2025 pic.twitter.com/ZkGmZTxfbt
— Royal Challengers Bengaluru (@RCBTweets) March 25, 2025
ಕೊಹ್ಲಿ ಹೆಸರಲ್ಲಿರುವ ದೊಡ್ಡ ದಾಖಲೆ: ಐಪಿಎಲ್ನಲ್ಲಿ ಕೊಹ್ಲಿ ದೊಡ್ಡ ದಾಖಲೆಯೊಂದನ್ನು ಬರೆದಿದ್ದಾರೆ. 2016ರ ಆವೃತ್ತಿಯ ಐಪಿಎಲ್ನಲ್ಲಿ ಕೊಹ್ಲಿ ಬರೋಬ್ಬರಿ 973 ರನ್ ಬಾರಿಸಿದ್ದರು. ಇದು ಐಪಿಎಲ್ ಸೀಸನ್ ಒಂದರಲ್ಲಿ ಬ್ಯಾಟರ್ ದಾಖಲಿಸಿದ ಅತ್ಯಧಿಕ ಮೊತ್ತವಾಗಿದೆ. ಇದನ್ನು ಮುರಿಯಲು ಈ ವರೆಗೂ ಯಾರಿಗೂ ಸಾಧ್ಯವಾಗಿಲ್ಲ. ಈ ಆವೃತ್ತಿಯಲ್ಲಿ ಕೊಹ್ಲಿ 4 ಶತಕ ಮತ್ತು 7 ಅರ್ಧಶತಕದ ಸಹಾಯದೊಂದಿಗೆ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ: ಇಂದು RCB vs CSK ಫೈಟ್: ಆರ್ಸಿಬಿ ಪರ ಅಪಾಯಕಾರಿ ಆಟಗಾರರು ಕಣಕ್ಕೆ, ಇವರು ಸಿಡಿದೆದ್ರೆ ದಾಖಲೆಗಳು ಛಿದ್ರ!