ಐಪಿಎಲ್ ಈ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ನಿನ್ನೆ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತಲುಪಿದೆ.
ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಪ್ರಮುಖ ಇನ್ನಿಂಗ್ಸ್ ಆಡಿ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಪರೂಪದ ಸಾಧನೆ ಮಾಡಿದೆ. ಇದುವರೆಗೆ ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಇಂತಹ ದಾಖಲೆಯನ್ನು ಮಾಡಲು ಸಾಧ್ಯವಾಗಿಲ್ಲ.
Sixes sweeter than ever 🤌
— IndianPremierLeague (@IPL) April 27, 2025
Krunal Pandya’s bat did all the talking in that incredible 73* (47) 👊
Scorecard ▶ https://t.co/9M3N5Ws7Hm#TATAIPL | #DCvRCB | @krunalpandya24 pic.twitter.com/RZWKy8RCBK
ಅಪರೂಪದ ದಾಖಲೆ ಬರೆದ ಆರ್‌ಸಿಬಿ: ಪ್ರಸ್ತುತ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ 10 ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ ಏಳು ಪಂದ್ಯಗಳನ್ನು ಗೆದ್ದಿದೆ ಮತ್ತು ಮೂರಲ್ಲಿ ಸೋಲನ್ನು ಕಂಡಿದೆ. ಈ ಗೆಲುವುಗಳಲ್ಲಿ ಆರು ಪಂದ್ಯಗಳನ್ನು ತವರು ನೆಲದ ಹೊರಗಡೆ ಗೆದ್ದಿರುವುದಾಗಿದೆ ಎಂಬುದು ಗಮನಾರ್ಹ.
VINTAGE BHUVI ❤
— Star Sports (@StarSportsIndia) April 27, 2025
Gen Gold bowler, #BhuvneshwarKumar, outfoxes #DC power-hitter, #AshutoshSharma, to put #RCB in cruise control! 🤩
Watch the LIVE action ➡ https://t.co/2H6bmSltQD#IPLonJioStar 👉 #DCvRCB | LIVE NOW on Star Sports 1, Star Sports 1 Hindi, Star Sports 2, Star… pic.twitter.com/JnU8EjcfcQ
ಐಪಿಎಲ್ ಇತಿಹಾಸದಲ್ಲಿ ಎದುರಾಳಿಯ ಮೈದಾನದಲ್ಲಿ ಆಡಿದ ಪಂದ್ಯಗಳಲ್ಲಿ ಸತತ ಆರು ಗೆಲುವುಗಳನ್ನು ದಾಖಲಿಸಿರುವುದು ಇದೇ ಮೊದಲು. ಇಲ್ಲಿಯವರೆಗೆ ಯಾವುದೇ ತಂಡ ಇಂತಹ ಸಾಧನೆಯನ್ನು ಮಾಡಿಲ್ಲ. ಆರ್‌ಸಿಬಿ ಪ್ರಸ್ತುತ 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಉಳಿದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಒಂದನ್ನು ಗೆದ್ದರೆ, ಪ್ಲೇಆಫ್ ಸ್ಥಾನ ಬಹುತೇಕ ಖಚಿತವಾಗುತ್ತದೆ.
Playing 𝘽𝙤𝙡𝙙 and marching on 😎
— IndianPremierLeague (@IPL) April 27, 2025
The red-hot @RCBTweets claim the top of the points table after Match 4️⃣6️⃣ ❤
Will they continue to stay on the 🔝? 🤔#TATAIPL pic.twitter.com/EB0E14pVGc
ಪಾಟಿದಾರ್ ಹೇಳಿಕೆ: ಪಂದ್ಯದ ಬಳಿಕ ಮಾತನಾಡಿದ ನಾಯಕ ರಜತ್ ಪಾಟಿದಾರ್ ನಾವು ಪ್ಲಾನ್ ಪ್ರಕಾರ ಬೌಲಿಂಗ್ ಮಾಡಲು ಸಾಧ್ಯವಾಯಿತು. ನಾನು ಮೊದಲೇ ಹೇಳಿದ್ದೇನೆ ಸ್ಥಳಗಳ ಬಗ್ಗೆ ನಾವು ಯೋಚಿಸಲ್ಲ ಉತ್ತಮ ಪ್ರದರ್ಶನ ನೀಡಲು ಮಾತ್ರ ಪ್ರಯತ್ನಿಸುತ್ತೇವೆ.
𝙏𝙝𝙚 𝙍𝙪𝙣-𝙈𝙖𝙘𝙝𝙞𝙣𝙚 🔢
— IndianPremierLeague (@IPL) April 27, 2025
With class and authority, Virat Kohli is now dominating the Orange Cap race 🧡#TATAIPL | @imVkohli pic.twitter.com/jO2JjRuG9a
ಮೊದಲನೆಯದಾಗಿ, ನಮ್ಮ ಬೌಲಿಂಗ್ ಹೇಗಿರಬೇಕು, ಗುರಿಯನ್ನು ಹೇಗೆ ಚೇಸ್ ಮಾಡಬೇಕು ಎಂಬುದರ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಿದ್ದೇವೆ. ನಮ್ಮ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ ಅವರಿಂದ ನನಗೆ ಕಲಿಯಲು ಅವಕಾಶ ಸಿಕ್ಕಿದೆ" ಎಂದು ಹೇಳಿದ್ದಾರೆ.
Impact 🤝 match-winning spells 💫
— IndianPremierLeague (@IPL) April 27, 2025
Josh Hazlewood with 1️⃣8️⃣ wickets is the new leader in the Purple Cap race 🧢#TATAIPL pic.twitter.com/7PaGYFiCwb
ಡೆಲ್ಲಿ ಕ್ಯಾಪಿಟಲ್ಸ್ vs ಆರ್‌ಸಿಬಿ ಪಂದ್ಯ: ಭಾನುವಾರ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.
Continues adding runs, continues adding his 𝙫𝙖𝙡𝙪𝙚 😎
— IndianPremierLeague (@IPL) April 27, 2025
Nicholas Pooran is unmoved from the Fantasy leaderboard 👊
Will anyone catch him? 🤔 #TATAIPL | @nicholas_47 pic.twitter.com/pEe7UbeRo2
ಈ ಗುರಿಯನ್ನು ಬೆನ್ನುಹತ್ತಿದ ಬೆಂಗಳೂರು ತಂಡ ವಿರಾಟ್ ಕೊಹ್ಲಿ (51) ಮತ್ತು ಕೃನಾಲ್ ಪಾಂಡ್ಯ (73) ಅರ್ಧಶತಕದ ಸಹಾಯದಿಂದ 18.3 ಓವರ್ಗಳಲ್ಲೆ ಗೆಲುವಿನ ದಡ ಸೇರಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ 14 ಅಂಕಗಳೊಂಡದಿಗೆ ಅಗ್ರಸ್ಥಾನಕ್ಕೆ ತಲುಪಿತು.
ಇದನ್ನೂ ಓದಿ: ಪಂದ್ಯದ ನಡುವೆಯೇ ವಾಗ್ವಾದಕ್ಕಿಳಿದ ವಿರಾಟ್ - ರಾಹುಲ್: ಅಸಲಿ ಕಾರಣ ಇದೇ!