ETV Bharat / sports

'ಪಂಜಾಬ್'​ ಕೋಟೆಗೆ ನುಗ್ಗಿ 'ಕಿಂಗ್ಸ್'​ ಪಡೆಯನ್ನು ಬಗ್ಗುಬಡಿದ ಆರ್​ಸಿಬಿ: 48 ಗಂಟೆಗಳಲ್ಲೇ ಹಳೆಯ ಲೆಕ್ಕ ಚುಕ್ತ! - PBKS VS RCB MATCH

ಪಂಜಾಬ್​ ಕಿಂಗ್ಸ್​ ವಿರುದ್ದ ನಡೆದಿದ್ದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 7 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

Virat Kohli
ವಿರಾಟ್ ಕೊಹ್ಲಿ (AP)
author img

By ETV Bharat Sports Team

Published : April 20, 2025 at 7:38 PM IST

Updated : April 20, 2025 at 8:24 PM IST

2 Min Read

PBKS vs RCB: PBKS vs RCB: ಪಂಜಾಬ್​ ಕಿಂಗ್ಸ್​ ವಿರುದ್ದ ಇಂದು ನಡೆದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿತು.

ಚಂಡೀಗಢದ ಮುಲ್ಲಾನ್​ಪುರ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ನೀಡಿದ್ದ 158ರನ್ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ 3 ವಿಕೆಟ್ ಕಳೆದುಕೊಂಡು ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು. ತಂಡದ ಪರ ದೇವದತ್ ಪಡಿಕ್ಕಲ್ (61 ರನ್​) ಮತ್ತು ವಿರಾಟ್ ಕೊಹ್ಲಿ (73*) ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಆರಂಭಿಕ ಆಟಗಾರ ಫಿಲ್ ಸಾಲ್ಟ್ (1) ಈ ಪಂದ್ಯದಲ್ಲೂ ನಿರಾಸೆ ಮೂಡಿಸಿದರ.

ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಅರ್ಶ್‌ದೀಪ್ ಸಾಲ್ಟ್​ ಅವರಿಗೆ ಪೆವಿಲಿಯನ್​ ದಾರಿ ತೋರಿಸಿದರು. ಆದರೆ ಕೊಹ್ಲಿ ಮತ್ತು ಪಡಿಕ್ಕಲ್ ಸ್ಥಿರ ಪ್ರದರ್ಶನ ನೀಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಡಿಕ್ಕಲ್ ಅವರನ್ನು ಹರ್‌ಪ್ರೀತ್ ಔಟ್​ ಮಾಡಿದರು. ಇದರೊಂದಿಗೆ ಪಡಿಕ್ಕಲ್​ ಮತ್ತು ಕೊಹ್ಲಿ ನಡುವಿನ 103 ರನ್‌ಗಳ ಪಾಲುದಾರಿಕೆ ಕೊನೆಗೊಂಡಿತು.

ಬಳಿಕ ಬಂದ ಪಾಟೀದಾರ್​ ಕೂಡ ಕೊನೆ ವರೆಗೂ ಕ್ರೀಸ್​ನಲ್ಲಿ ಉಳಿಯಲು ಆಗಲಿಲ್ಲ. 17ನೇ ಓವರ್‌ನಲ್ಲಿ ಚಾಹಲ್​ಗೆ ವಿಕೆಟ್​ ಒಪ್ಪಿಸಿದರು. ಅಂತಿಮಾವಗಿ ಜಿತೇಶ್ (11) ಮತ್ತು ಕೊಹ್ಲಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡಕ್ಕೆ ಪ್ರಿಯಾಂಶ್ ಆರ್ಯ (22) ಮತ್ತು ಸಿಮ್ರಾನ್ ಸಿಂಗ್ (33) ಉತ್ತಮ ಆರಂಭ ನೀಡಿದರು. ಆದರೆ, ಇತರ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸದ ಕಾರಣ ತಂಡ ಸಾಧಾರಣ ಸ್ಕೋರ್‌ಗೆ ಸೀಮಿತವಾಯಿತು.

ಜೋಶ್ ಇಂಗ್ಲಿಸ್ (29), ಶಶಾಂಕ್ ಸಿಂಗ್ (31*), ಮತ್ತು ಮಾರ್ಕೊ ಜಾನ್ಸೆನ್ (25*) ಸಾಮಾನ್ಯ ಮೊತ್ತ ಕಲೆಹಾಕಿದರು. ನಾಯಕ ಶ್ರೇಯಸ್ ಅಯ್ಯರ್ (6) ಸತತ ಮೂರನೇ ಪಂದ್ಯದಲ್ಲಿ ಎರಡಂಕಿಯ ಸ್ಕೋರ್ ಗಳಿಸದೆ ನರ್ಗಮಿಸಿದರು. ನೆಹಾಲ್ ವಾಧೇರಾ (5) ಮತ್ತು ಸ್ಟೊಯಿನಿಸ್ (1) ನಿರಾಸೆ ಮೂಡಿಸಿದರು.

ಆರ್‌ಸಿಬಿ ಬೌಲರ್‌ಗಳಲ್ಲಿ ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ​ ರೊಮಾರಿಯೊ ಫೆಫರ್ಡ್ 1 ವಿಕೆಟ್ ಉರುಳಿಸಿದರು.

48 ಗಂಟೆಗಳಲ್ಲಿ ಸೇಡು ತೀರಿಸಿಕೊಂಡ ಆರ್​ಸಿಬಿ: ತವರು ಮೈದಾನ ಚಿನ್ನಸ್ವಾಮಿಯಲ್ಲಿ ಶುಕ್ರವಾರ ಇದೇ ಪಂಜಾಬ್​ ಕಿಂಗ್ಸ್​ ತಂಡದ ವಿರುದ್ದ ನಡೆದಿದ್ದ ಪಂದ್ಯದಲ್ಲಿ ಸೋಲನ್ನು ಕಂಡಿದ್ದ ಆರ್​ಸಿಬಿ ಇಂದು ಪಂಜಾಬ್​ ತಂಡವನ್ನು ತನ್ನದೆ ತವರಿನಲ್ಲಿ ಮಣಿಸಿ 48 ಗಂಟೆಯಲ್ಲೆ ಹಳೆಯ ಸೇಡನ್ನು ತೀರಿಸಿಕೊಂಡಿತು.

ಅಂಕಪಟ್ಟಿ: ಸದ್ಯ ಆಡಿದ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಆರ್​ಸಿಬಿ ಪಾಯಿಂಟ್ಸ್​ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇದರೊಂದಿಗೆ ತವರಿನಾಚೆ ಆಡಿದ ಐದು ಪಂದ್ಯಗಳಲ್ಲಿ ಗೆದ್ದು ಅಜೇಯ ಓಟವನ್ನು ಮುಂದುವರೆಸಿದೆ.

ಇದನ್ನೂ ಓದಿ: ಶುಭಮನ್​ ಗಿಲ್​ಗೆ ಬಿಗ್​ ಶಾಕ್..!​ ಐಪಿಎಲ್​ ಕಮಿಟಿಯಿಂದ ಕಠಿಣ ಶಿಕ್ಷೆ

Last Updated : April 20, 2025 at 8:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.