ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವುದು ಗೊತ್ತೆ ಇದೆ. ಆದ್ರೆ ಇಂಗ್ಲೆಂಡ್ ಸರಣಿ ಹೊಸ್ತಿಲಲ್ಲಿರುವಾಗಲೇ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎಂಬ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದರ ನಡುವೆಯೇ ಟೆಸ್ಟ್ ನಿವೃತ್ತಿ ಪಡೆಯುವುದಕ್ಕೂ ಮುನ್ನ ವಿರಾಟ್ ಕೊಹ್ಲಿ ತಮ್ಮೊಂದಿಗೆ ನಡೆಸಿದ್ದ ಮಾತುಕತೆಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಬಹಿರಂಗ ಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸ್ತ್ರಿ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವುದು ಅಚ್ಚರಿ ಮೂಡಿಸಿದೆ. ಇನ್ನೂ 2-3 ವರ್ಷಗಳ ಕಾಲ ದೀರ್ಘ ಸ್ವರೂಪದಲ್ಲಿ ಆಡುವ ಸಾಮರ್ಥ್ಯ ವಿರಾಟ್ ಬಳಿ ಇತ್ತು. ಕೊಹ್ಲಿ ನಿವೃತ್ತಿಗೂ ಘೋಷಣೆ ಮಾಡುವ ಮೊದಲು ಅವರೊಂದಿಗೆ ಮಾತನಾಡಿದ್ದೆ ಎಂದು ಶಾಸ್ತ್ರಿ ಹೇಳಿದ್ದಾರೆ.
"ನಿವೃತ್ತಿಗೆ ಒಂದು ವಾರಕ್ಕೂ ಮುಂಚೆ ಕೊಹ್ಲಿ ಜೊತೆ ಮಾತನಾಡಿದ್ದೆ. ಈ ಸ್ವರೂಪದಲ್ಲಿ ತಂಡಕ್ಕೆ ಏನು ನೀಡಬೇಕಿತ್ತು ಅದನ್ನು ನೀಡಿದ್ದೇನೆ ಎಂಬ ಕ್ಲಾರಿಟಿ ಕೊಹ್ಲಿ ಬಳಿಯಿತ್ತು. ನಿವೃತ್ತಿ ಪಡೆದಿರುವುದಕ್ಕೆ ಕೊಹ್ಲಿಗೆ ಯಾವುದೇ ಬೇಸರ ಇಲ್ಲ. ಆದರೇ ನನಗೆ ಆಶ್ವರ್ಯವಾಗಿದ್ದೇನು ಎಂದರೇ ಇನ್ನೂ ಎರಡು ಅಥವಾ ಮೂರು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯ ವಿರಾಟ್ ಬಳಿ ಇತ್ತು.
ಕೊಹ್ಲಿ ದೈಹಿಕವಾಗಿ ಸದೃಢರಾಗಿದ್ದರೂ, ಮಾನಸಿಕವಾಗಿ ತುಂಬಾ ದಣಿದಿದ್ದರು. ಸಾಮಾನ್ಯವಾಗಿ ಆಟಗಾರನು ತಂಡದ ಪರ ತಮ್ಮ ಕೆಲಸವನ್ನು ಪೂರ್ಣಗೊಳಿಸಿದ ಬಳಿಕ ಶಾಂತವಾಗಿರುತ್ತಾರೆ. ಆದರೆ ಕೊಹ್ಲಿ ಮೈದಾನಕ್ಕೆ ಬಂದರೆ ಸಾಕು ಎಲ್ಲಾ ವಿಕೆಟ್‌ಗಳನ್ನು ಪಡೆಯಬೇಕು, ಎಲ್ಲಾ ಕ್ಯಾಚ್‌ಗಳನ್ನು ತಾವೇ ಹಿಡಿಯಬೇಕು ಮತ್ತು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ತಂಡವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಾರೆ.
ಅವರ ಆಟದ ತೀವ್ರತೆ ಈ ಮಟ್ಟದಲ್ಲಿರುತ್ತದೆ. ಇಂತಹ ಸಮಯದಲ್ಲಿ ಯಾರೇ ಇದ್ದರೂ ಮಾನಸಿಕವಾಗಿ ದಣಿಯುವುದು ಖಚಿತ" ಎಂದು ಹೇಳಿದ ಶಾಸ್ತ್ರಿ ಕೊಹ್ಲಿ ಸಾಧಿಸಲು ಏನೂ ಉಳಿದಿಲ್ಲ ಎಂದರು.
ಇದನ್ನೂ ಓದಿ: ಟೆಸ್ಟ್ನಿಂದ ನಿವೃತ್ತಿ ಪಡೆದಿರುವ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿ ರೀ ಎಂಟ್ರಿ! ನಿಜಾನ?