18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ರಣರೋಚಕತೆಯಿಂದ ಸಾಗುತ್ತಿದೆ. ಈಗಾಗಲೇ 30 ಪಂದ್ಯಗಳು ಪೂರ್ಣಗೊಂಡಿದ್ದ ಇಂದು 31ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ.
ಸದ್ಯ ಆಡಿರುವ ಐದು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೂರಲ್ಲಿ ಗೆದ್ದು 2 ರಲ್ಲಿ ಸೋಲನ್ನು ಕಂಡಿದೆ. ಇದೀಗ ಕೆಕೆಆರ್ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಮೇಲೆರಲು ತಯಾರಿ ನಡೆಸಿದೆ.
ಆದರೆ, ಈ ಪಂದ್ಯಕ್ಕೂ ಮೊದಲೇ ಪಂಜಾಬ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಈ ಋತುವಿನಿಂದ ಹೊರಬಿದ್ದಿದ್ದಾರೆ. ಈ ಬಗ್ಗೆ ಸ್ವತಃ ತಂಡವೆ ಬಹಿರಂಗ ಪಡಿಸಿದೆ. ಈ ಋತುವಿನ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ಲಾಕಿ ಫರ್ಗುಸನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ವಿರುದ್ದ ನಡೆದಿದ್ದ ಪಂದ್ಯದಲ್ಲಿ ಬೌಲಿಂಗ್ ಮಾಡಲು ಬಂದಿದ್ದ ಫರ್ಗುಸನ್ ಎರಡು ಎಸೆತಗಳನ್ನು ಬೌಲ್ ಮಾಡಿದ್ದ ವೇಳೆ ಎಡಗಾಲಿನ ಗಾಯದಿಂದಾಗಿ ಅರ್ಧದಲ್ಲೆ ಮೈದಾನ ತೊರೆದಿದ್ದರು. ಇಂದು ನಡೆಯಲಿರುವ ಕೋಲ್ಕತ್ತಾ ವಿರುದ್ಧದ ಪಂದ್ಯಕ್ಕೂ ಮುನ್ನ ಪಂಜಾಬ್ ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, "ಲಾಕಿ ಫರ್ಗುಸನ್ ಗಾಯಕ್ಕೆ ತುತ್ತಾಗಿದ್ದು ಈ ಋತುವಿನ ಅಂತ್ಯದವರೆಗೆ ಲಭ್ಯವಾಗುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ತಿಳಿಸಿದ್ದಾರೆ.
ಕೆಕೆಆರ್ ಪಂದ್ಯದ ಬಳಿಕ ಪಂಜಾಬ್ ಕಿಂಗ್ಸ್ ತಂಡ ಸತತ ಎರಡು ಪಂದ್ಯಗಳನ್ನು ಆರ್ಸಿಬಿ ವಿರುದ್ಧ ಆಡಲಿದೆ. ಇಂತಹ ಸಮಯದಲ್ಲಿ ತಂಡದ ಸ್ಟಾರ್ ಬೌಲರ್ ಹೊರಬಿದ್ದಿದ್ದು ತಂಡಕ್ಕೆ ಭಾರೀ ಹಿನ್ನಡೆ ಆಗಿದೆ.
🚨 LOCKIE FERGUSON RULED OUT OF IPL 2025 DUE TO AN INJURY. 🚨 pic.twitter.com/emaOynwO16
— Mufaddal Vohra (@mufaddal_vohra) April 15, 2025
ಮೆಗಾ ಹರಾಜಿನಲ್ಲಿ ಖರೀದಿಸಿದ್ದ ಪಂಜಾಬ್: ಐಪಿಎಲ್ 18ನೇ ಆವೃತ್ತಿ ಆರಂಭಕ್ಕೂ ಮುನ್ನ ಕಳೆದ ವರ್ಷ ಕೊನೆಯಲ್ಲಿ ಜೆಡ್ಡಾದಲ್ಲಿ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ 2 ಕೋಟಿ ರೂಪಾಯಿಗೆ ಫರ್ಗುಸನ್ ಅವರನ್ನು ಖರೀದಿ ಮಾಡಿತ್ತು. ಇದೀಗ ಅವರ ಸ್ಥಾನಕ್ಕೆ ಯಾವ ಆಟಗಾರನನ್ನು ಕರೆತರಲಾಗುತ್ತದೆ ಎಂದು ಕಾದು ನೋಡಬೇಕಿದೆ.
ಫರ್ಗುಸನ್ ದಾಖಲೆ: ಪಂಜಾಬ್ ಪರ ಈವರೆಗೂ 3 ಪಂದ್ಯಗಳನ್ನು ಆಡಿದ ಫರ್ಗುಸನ್ 5 ವಿಕೆಟ್ ಉರುಳಿಸಿದ್ದಾರೆ. 2017ರಲ್ಲಿ ಐಪಿಎಲ್ಗೆ ಪಾದರ್ಪಣೆ ಮಾಡಿದ್ದ ಫರ್ಗುಸನ್ ರೈಸಿಂಗ್ ಪೂಣೆ ಸೂಪರ್ ಜೈಂಟ್ಸ್ ಪರ ಡೆಬ್ಯು ಮಾಡಿದ್ದರು. ಐಪಿಎಲ್ನಲ್ಲಿ ಒಟ್ಟು 4 ತಂಡಗಳನ್ನು (ಕೆಕೆಆರ್, ಆರ್ಸಿಬಿ, ಆರ್ಪಿಎಸ್, ಪ್ರಸ್ತುತ ಪಂಜಾಬ್ ಕಿಂಗ್ಸ್) ಪ್ರತಿನಿಧಿಸಿದ್ದಾರೆ.
Bounce back stronger, Lockie! 🙌🏻 pic.twitter.com/mioIK42wfC
— Punjab Kings (@PunjabKingsIPL) April 14, 2025
ಈ ಅವಧಿಯಲ್ಲಿ ಒಟ್ಟು 49 ಪಂದ್ಯಗಳನ್ನು ಆಡಿರುವ ಫರ್ಗುಸನ್ 30ರ ಸರಾಸರಿಯಲ್ಲಿ 51 ವಿಕೆಟ್ಗಳನ್ನು ಪಡೆದಿದ್ದಾರೆ. 28 ರನ್ಗಳಿಗೆ 4 ವಿಕೆಟ್ ಪಡೆದಿರುವ ಇವರು ಉತ್ತಮ ಸ್ಪೆಲ್ ಆಗಿದೆ.
ಇದನ್ನೂ ಓದಿ: IPLನಲ್ಲಿ RCB ಸೇರಿ 9 ತಂಡಗಳಿಗೆ ಆಡಿರುವ ಏಕೈಕ ಪ್ಲೇಯರ್ ಇವರೇ!