ನವದೆಹಲಿ : ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಅಂದರೆ ಜುಲೈ 27 ರಿಂದ ಎಲ್ಲಾ ದೇಶಗಳ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಇಂದು ಭಾರತದ ಕ್ರೀಡಾಪಟುಗಳು ಶೂಟಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಹಾಕಿ ಮತ್ತು ಟೆನ್ನಿಸ್‌ನಂತಹ ಆಟಗಳಲ್ಲಿ ಭಾರತಕ್ಕಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದಕ್ಕೂ ಮುನ್ನ ಇಂದು ಯಾವ ಪಂದ್ಯದಲ್ಲಿ ಯಾವ ಆಟಗಾರರು ಭಾರತಕ್ಕೆ ಸವಾಲೊಡ್ಡಲಿದ್ದಾರೆ ಎಂಬುದನ್ನು ನಾವು ನಿಮಗೆ ತಿಳಿಸಲಿದ್ದೇವೆ.
Checkout First Group Stage Fixtures of Our Shuttlers at #Paris2024 🔥🏸
— BAI Media (@BAI_Media) July 25, 2024
📸: @badmintonphoto#IndiaAtParis24#Cheer4Bharat#IndiaontheRise#Badminton pic.twitter.com/n8qVQ7FxpO
ಭಾರತೀಯ ಅಥ್ಲೀಟ್‌ಗಳ ಸ್ಪರ್ಧೆ : ಶೂಟಿಂಗ್ನಲ್ಲಿ ಒಟ್ಟು 3 ಪಂದ್ಯಗಳು ನಡೆಯಲಿವೆ. ಅವುಗಳೆಂದರೆ, 10 ಮೀಟರ್ ಏರ್ ರೈಫಲ್ (ಟೀಂ), 10 ಮೀಟರ್ ಏರ್ ಪಿಸ್ತೂಲ್ ಪುರುಷರ ವಿಭಾಗ, 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ವಿಭಾಗಕ್ಕೆ ಸ್ಪರ್ಧೆಗಳು ನಡೆಯಲಿವೆ.
ಭಾರತದ 10 ಮೀಟರ್ ಏರ್ ರೈಫಲ್ಸ್ ತಂಡದಲ್ಲಿ ಸಂದೀಪ್ ಸಿಂಗ್, ಅರ್ಜುನ್ ಬಾಬುತಾ, ಎಲವೆನಿಲ್ ವಲರಿವನ್, ರಮಿತಾ ಜಿಂದಾಲ್ ಸ್ಪರ್ಧಿಸಲಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಪುರುಷರ ಪಂದ್ಯದಲ್ಲಿ ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ ಸ್ಪರ್ಧಿಸಲಿದ್ದಾರೆ. ಇದರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ವಿಭಾಗದಲ್ಲಿ ರಿದಮ್ ಸಾಂಗ್ವಾನ್, ಮನು ಭಾಕರ್ ಭಾಗವಹಿಸಲಿದ್ದಾರೆ.
Mark your calendars!
— Hockey India (@TheHockeyIndia) July 26, 2024
Here's when and where you can catch Team India in action at the Paris Olympics 2024. 🏑🔥
Watch it all go down live on @JioCinema and @Sports18 #HockeyIndia #IndiaKaGame #HockeyLayegaGold #Paris2024 #Hockey #IndiaAtParis #Cheer4Bharat #WinItForSreejesh
.… pic.twitter.com/kcCuPdT9tF
10 ಮೀ ಏರ್ ರೈಫಲ್ ಮಿಶ್ರ ತಂಡ (ಸಂದೀಪ್ ಸಿಂಗ್, ಅರ್ಜುನ್ ಬಾಬುತಾ, ಎಲವೆನಿಲ್ ವಲರಿವನ್, ರಮಿತಾ ಜಿಂದಾಲ್) ಸ್ಪರ್ಧೆ ಫ್ರಾನ್ಸ್‌ನ ಕಾಲಮಾನ, ಮಧ್ಯಾಹ್ನ 12:30 ಕ್ಕೆ ನಡೆಯಲಿದೆ.
10 ಮೀ ಏರ್ ಪಿಸ್ತೂಲ್ ಪುರುಷರ ವಿಭಾಗ (ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ) ಸ್ಪರ್ಧೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.
10 ಮೀ ಏರ್ ಪಿಸ್ತೂಲ್ ಮಹಿಳೆಯರ ವಿಭಾಗ (ರಿದಮ್ ಸಾಂಗ್ವಾನ್, ಮನು ಭಾಕರ್) ಸ್ಪರ್ಧೆ ಸಂಜೆ 4 ಗಂಟೆಗೆ ನಡೆಯಲಿದೆ.
ಬ್ಯಾಡ್ಮಿಂಟನ್ - ಇಂದು ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕಾಗಿ ಮೂರು ಪಂದ್ಯಗಳು ನಡೆಯಲಿವೆ. ಇದರಲ್ಲಿ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್‌ನಲ್ಲಿ ಗ್ವಾಟೆಮಾಲಾದ ಕಾರ್ಡನ್ ಕೆವಿನ್ ಅವರ ಎದುರು ಸ್ಪರ್ಧಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಫ್ರಾನ್ಸ್‌ನ ಕಾರ್ವಿ ಲುಕಾಸ್ ಮತ್ತು ಲೇಬರ್ ರೊನಾನ್ ಅವರನ್ನು ಎದುರಿಸಲಿದೆ.
ಮಹಿಳೆಯರ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಕೊರಿಯಾದ ಕಿಮ್ ಸೋ ಯಾಂಗ್ ಮತ್ತು ಕಾಂಗ್ ಹೀ ಯಾಂಗ್ ಜೊತೆ ಆಡಲಿದೆ. ಲಕ್ಷ್ಯ ಸೇನ್ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯ ಪಂದ್ಯಗಳಿಂದ ಭಾರತವು ದೊಡ್ಡ ನಿರೀಕ್ಷೆಯನ್ನು ಹೊಂದಿದೆ.
ಪುರುಷರ ಸಿಂಗಲ್ಸ್ (ಲಕ್ಷ್ಯ ಸೇನ್) – ಮಧ್ಯಾಹ್ನ 12 ಗಂಟೆಯಿಂದ ಆರಂಭ.
ಪುರುಷರ ಡಬಲ್ಸ್ (ಗುಂಪು) (ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ) ಮಧ್ಯಾಹ್ನ 12 ಗಂಟೆಯಿಂದ ಆರಂಭ.
ಮಹಿಳೆಯರ ಡಬಲ್ಸ್ (ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ) ಮಧ್ಯಾಹ್ನ 12 ಗಂಟೆಯಿಂದ ಆರಂಭ.
ಬಾಕ್ಸಿಂಗ್ - ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಇಂದು ಒಂದೇ ಒಂದು ಪಂದ್ಯ ಆಯೋಜನೆಯಾಗಿದೆ. ಈ ಪಂದ್ಯದಲ್ಲಿ, ಭಾರತೀಯ ಮಹಿಳಾ ಕುಸ್ತಿಪಟು ಪ್ರೀತಿ ಪವಾರ್ ಅವರು (ಮಹಿಳೆಯರ 54 ಕೆಜಿ) ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿದ್ದು, ತಮ್ಮ ಸುತ್ತಿನ 32 ಪಂದ್ಯವನ್ನು ಆಡಲಿದ್ದಾರೆ, ಅಲ್ಲಿ ಅವರು ವಿಯೆಟ್ನಾಂನ ವಿಯೊ ಥಿ ಕಿಮ್ ಅನ್ಹ್ ಅವರನ್ನು ಎದುರಿಸಲಿದ್ದಾರೆ. ಈ ಸ್ಪರ್ಧೆ ರಾತ್ರಿ 7 ಕ್ಕೆ ನಡೆಯಲಿದೆ.
ಟೆನಿಸ್ - ಇಂದು ಟೆನಿಸ್‌ನಲ್ಲಿ ಭಾರತದ ಅತ್ಯಂತ ಅನುಭವಿ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಅವರ ಜೊತೆಗಾರ ಎನ್ ಶ್ರೀರಾಮ್ ಬಾಲಿಜಿ ಅವರು ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಫ್ರೆಂಚ್ ಜೋಡಿಯಾದ ರೆಬೌಲ್ ಫ್ಯಾಬಿಯನ್ ಮತ್ತು ರೋಜರ್-ವಾಸೆಲಿನ್ ಎಡ್ವರ್ಡ್ ವಿರುದ್ಧ ಆಡಲಿದ್ದಾರೆ.
ಟೇಬಲ್ ಟೆನಿಸ್ - ಇಂದು ಭಾರತಕ್ಕಾಗಿ ಟೇಬಲ್ ಟೆನಿಸ್‌ನಲ್ಲಿ, ಹರ್ಮೀತ್ ದೇಸಾಯಿ ಜೋರ್ಡಾನ್‌ನ ಅಬೋ ಯಮನ್ ಜೈದ್ ಅವರೊಂದಿಗೆ ಮೊದಲ ಸುತ್ತಿನ ಮೊದಲ ಪಂದ್ಯವನ್ನು ಆಡಲಿದ್ದಾರೆ. ಭಾರತವು ಜುಲೈ 27 ರಂದು ಟೇಬಲ್ ಟೆನಿಸ್‌ನಲ್ಲಿ ಕೇವಲ 1 ಪಂದ್ಯವನ್ನು ಮಾತ್ರ ಆಡಲಿದೆ. ಸ್ಪರ್ಧೆ ಸಂಜೆ 6: 30ಕ್ಕೆ ನಡೆಯಲಿದೆ.
ಇದನ್ನೂ ಓದಿ : ಪ್ಯಾರಿಸ್ ಒಲಿಂಪಿಕ್ಸ್: ಚಿನ್ನ ಗೆಲ್ಲುವ ಉತ್ಸಾಹದಲ್ಲಿ ಪಾರುಲ್ ಚೌಧರಿ, ಪುತ್ರಿಯ ಬಗ್ಗೆ ಪೋಷಕರ ವಿಶ್ವಾಸ - PARIS OLYMPICS 2024