ಕರಾಚಿ: ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಏಕದಿನ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇದರೊಂದಿಗೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಜೊತೆಗೆ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಶಿಮ್ ಆಮ್ಲಾ ಅವರನ್ನು ಸರಿಗಟ್ಟಿದ್ದಾರೆ.
ಕರಾಚಿಯಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 29 ರನ್ ಗಳಿಸಿ ಔಟಾದರೂ ಬಾಬರ್ ದಾಖಲೆ ಬರೆದರು. ಸೈಮನ್ ಟಫಿ ಎಸೆದ 7ನೇ ಓವರ್ನ 3ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 6 ಸಾವಿರ ರನ್ ಪೂರ್ಣಗಳಿಸಿ ಅಶಿಮ್ ಆಮ್ಲಾ ದಾಖಲೆ ಸಮಗಟ್ಟಿದರು. ಈ ಪಂದ್ಯಕ್ಕೂ ಮುನ್ನ ಬಾಬರ್ ಅಜಮ್ 122 ಏಕದಿನ ಇನ್ನಿಂಗ್ಸ್‌ನಲ್ಲಿ 5990 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ 10 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದರು.
.@babarazam258 makes full use of the free-hit!
— Pakistan Cricket (@TheRealPCB) February 14, 2025
Smashed all the way for the first six of the day 💥#3Nations1Trophy | #PAKvNZ pic.twitter.com/uyqXlTrApR
ಜಂಟಿ ದಾಖಲೆ: ಆಮ್ಲಾ ಮತ್ತು ಬಾಬರ್ ನಂತರ, ಕೊಹ್ಲಿ ಏಕದಿನ ಪಂದ್ಯಗಳಲ್ಲಿ ವೇಗವಾಗಿ ಪೂರ್ಣಗೊಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಬಾಬರ್ 123 ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ತಲುಪಿದರೆ, ವಿರಾಟ್ ಕೊಹ್ಲಿ 136 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಬಾಬರ್, ಅಶಿಮ್ ಆಮ್ಲಾ ಮತ್ತು ವಿರಾಟ್ ನಂತರ ಏಕದಿನ ಪಂದ್ಯಗಳಲ್ಲಿ 6000 ರನ್ ಪೂರೈಸಿದ ಟಾಪ್ -5 ಆಟಗಾರರಲ್ಲಿ ಕೇನ್ ವಿಲಿಯಮ್ಸನ್ ಮತ್ತು ಡೇವಿಡ್ ವಾರ್ನರ್ ಕೂಡ ಸೇರಿದ್ದಾರೆ. ಕೇನ್ ವಿಲಿಯಮ್ಸನ್ ಮತ್ತು ವಾರ್ನರ್ 139 ಇನ್ನಿಂಗ್ಸ್‌ನಲ್ಲಿ 6 ಸಾವಿರ ರನ್ ಗಳಿಸಿದ್ದಾರೆ.
6️⃣0️⃣0️⃣0️⃣ ODI runs completed! @babarazam258 is the joint-fastest to the milestone ✅🥇#3Nations1Trophy | #PAKvNZ pic.twitter.com/uwwN5FFfrO
— Pakistan Cricket (@TheRealPCB) February 14, 2025
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ತ್ರಿಕೋನ ಸರಣಿಯ ಅಂತಿಮ ಪಂದ್ಯದಲ್ಲಿ ಬಾಬರ್ ಅಜಮ್ 29 ರನ್‌ಗಳ ಇನ್ನಿಂಗ್ಸ್ ಆಡಿದರು. ಫಖರ್ ಜಮಾನ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಅವರು 34 ಎಸೆತಗಳನ್ನು ಎದುರಿಸಿ 4 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 29 ರನ್ ಗಳಿಸಿದರು. ಈ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 242 ರನ್ಗಳಿಗೆ ಸರ್ವಪತನ ಕಂಡಿತು.
BABAR AZAM CREATED HISTORY..!!!! ⚡
— Tanuj Singh (@ImTanujSingh) February 14, 2025
- Babar Azam becomes the joint fastest to complete 6000 runs in ODI Cricket. pic.twitter.com/uNTc06nyTS
ಈ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್ 17.2 ಓವರ್ ವೇಳೆಗೆ 2 ವಿಕೆಟ್ ಕಳೆದುಕೊಂಡು 76 ರನ್ ಕಲೆಹಾಕಿದೆ. ಆರಂಭಿಕ ಬ್ಯಾಟರ್ ವಿಲ್ ಯಂಗ್ 5, ಕೇನ್ ವಿಲಿಯಮ್ಸನ್ 34 ರನ್ ಗಳಿಸಿ ಪೆವಿಲಿಯನ್ ಸೇರಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸೀಸ್ಗೆ ಭಾರೀ ಮುಖಭಂಗ; ದಾಖಲೆ ಬರೆದ ಲಂಕಾ