ಚೆನ್ನೈ ಸೂಪರ್ ಕಿಂಗ್ಸ್ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಸಿಎಸ್ಕೆ ತಂಡದ ಖಾಯಂ ನಾಯಕ ಋತುರಾಜ್ ಗಾಯಕ್ವಾಡ್ ಮೊಣಕೈ ಗಾಯದಿಂದಾಗಿ ಐಪಿಎಲ್ 18ನೇ ಆವೃತ್ತಿಯಿಂದ ಹೊರಗುಳಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಮ್ಯಾನೇಜ್‌ಮೆಂಟ್ ಮತ್ತೊಮ್ಮೆ ನಾಯಕತ್ವದ ಜವಾಬ್ದಾರಿಯನ್ನು ಮಾಹಿ ಕೈಗೆ ನೀಡಿದೆ. ಇಂದು ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಧೋನಿ ತಂಡವನ್ನು ಮುನ್ನಡೆಸಲಿದ್ದಾರೆ.
2008-2023ರ ನಡುವಿನ ಒಂದು ಋತುವನ್ನು ಹೊರತುಪಡಿಸಿ ಎಲ್ಲ ಋತುಗಳಲ್ಲಿ ಧೋನಿ ತಂಡದ ನಾಯಕತ್ವ ವಹಿಸಿದ್ದರು. ಅವರು 2016ರ ಋತುವಿನಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡವನ್ನು ಮುನ್ನಡೆಸಿದರು. ಕೊನೆಯ ಬಾರಿಗೆ 2023ರ ಫೈನಲ್‌ನಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಆ ಋತುವಿನಲ್ಲಿ ಚೆನ್ನೈ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಈಗ ಎರಡು ವರ್ಷಗಳ ನಂತರ ಧೋನಿ ಮತ್ತೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಅನುಕ್ರಮದಲ್ಲಿ, ಧೋನಿ ಐಪಿಎಲ್‌ನಲ್ಲಿ ನಾಯಕನಾಗಿ, ಯಾರೂ ಮುಟ್ಟಲಾಗದ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅವು ಯಾವವು ಎಂದು ಇದೀಗ ತಿಳಿಯೋಣ!
ಧೋನಿ ಐಪಿಎಲ್ ದಾಖಲೆ
- ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ನಾಯಕನಾಗಿ ಮುನ್ನಡೆಸಿದ ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ ಇದುವರೆಗೂ 226 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. 200+ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಏಕೈಕ ಆಟಗಾರ ಧೋನಿ ಆಗಿದ್ದಾರೆ. ರೋಹಿತ್ ಶರ್ಮಾ (158), ವಿರಾಟ್ ಕೊಹ್ಲಿ (143) ಮತ್ತು ಗೌತಮ್ ಗಂಭೀರ್ (129) ನಂತರದ ಸ್ಥಾನದಲ್ಲಿದ್ದಾರೆ.
- ನಾಯಕನಾಗಿ ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಗೆದ್ದ ದಾಖಲೆ ಕೂಡ ಧೋನಿ ಹೆಸರಲ್ಲಿದೆ. ನಾಯಕನಾಗಿ 133 ಪಂದ್ಯಗಳನ್ನು ಗೆದ್ದಿದ್ದಾರೆ. ರೋಹಿತ್ ಶರ್ಮಾ (87), ಗೌತಮ್ ಗಂಭೀರ್ (71), ಮತ್ತು ವಿರಾಟ್ (66) ಪಂದ್ಯಗಳನ್ನು ಗೆದ್ದಿದ್ದಾರೆ.
- ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ನಾಯಕ ಧೋನಿ ಅವರ ಹೆಸರಿನಲ್ಲಿದೆ. ಅವರು ತಮ್ಮ ವೃತ್ತಿಜೀವನದಲ್ಲಿ 218 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಂತರ ವಿರಾಟ್ (168), ರೋಹಿತ್ (158) ಮತ್ತು ಡೇವಿಡ್ ವಾರ್ನರ್ (109) ಇದ್ದಾರೆ.
- ವಿಕೆಟ್ ಕೀಪರ್ ಆಗಿ ಧೋನಿ ಅತಿ ಹೆಚ್ಚು ಸ್ಟಂಪಿಂಗ್ ಮಾಡಿರುವ ಪ್ಲೇಯರ್ ಆಗಿದ್ದಾರೆ. ಅವರು 195 ಸ್ಟಂಪಿಂಗ್ ಮಾಡಿದ್ದಾರೆ. ದಿನೇಶ್ ಕಾರ್ತಿಕ್ (174), ವೃದ್ಧಿಮಾನ್ ಸಹಾ (113) ಮತ್ತು ರಿಷಭ್ ಪಂತ್ (99) ಧೋನಿ ನಂತರದ ಸ್ಥಾನದಲ್ಲಿದ್ದಾರೆ.
- ಧೋನಿ ನಾಯಕನಾಗಿ 226 ಪಂದ್ಯಗಳಲ್ಲಿ 4,660ರನ್ ಗಳಿಸಿದ್ದಾರೆ. ಇದರಲ್ಲಿ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ (4,994 ರನ್) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಇಬ್ಬರು ಐಪಿಎಲ್‌ನಲ್ಲಿ 4000+ ರನ್ ಗಳಿಸಿರು ನಾಯಕರಾಗಿದ್ದಾರೆ.
- ಸತತ ಎರಡು ಐಪಿಎಲ್ ಟ್ರೋಫಿಗಳನ್ನು ಗೆದ್ದ ಮೊದಲ ನಾಯಕ ಧೋನಿ ಆಗಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010 ಮತ್ತು 2011ರಲ್ಲಿ ಚಾಂಪಿಯನ್ ಆಗಿತ್ತು. ಇದಾದ ಬಳಿಕ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದರು. ರೋಹಿತ್ 2019 ಮತ್ತು 2020ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಪಟ್ಟಕೇರಿಸಿದ್ದರು.
ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ಅತಿ ಕೆಟ್ಟ ದಾಖಲೆ ಬರೆದ ಆರ್ಸಿಬಿ