ಮುಂಬೈ ಇಂಡಿಯನ್ಸ್ ವಿರುದ್ಧ ನಡೆದಿದ್ದ ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲನ್ನು ಕಂಡಿದ್ದು ನಮಗೆಲ್ಲ ಗೊತ್ತೆ ಇದೆ. ಆದರೆ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಕನ್ನಡಿಗ ನೆರೆದಿದ್ದವರ ಗಮನ ಸೆಳೆದಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕೆ ಆಗಮಿಸಿದ ಕರುಣ್ ನಾಯರ್ ಆಕರ್ಷಕ ಬ್ಯಾಟಿಂಗ್ ಮೂಲಕ ದೆಹಲಿಯ ಗೆಲುವಿಗೆ ಬಲವಾದ ಅಡಿಪಾಯ ಹಾಕಿದರು. ಮೊದಲ ಎಸೆತದಲ್ಲೇ ಜೇಕ್ ಫ್ರೇಸರ್ ವಿಕೆಟ್ ಕಳೆದುಕೊಂಡ ಸಂಕಷ್ಟದಲ್ಲಿದ್ದ ತಂಡ ಕರುಣ್ ಅವರ ಅದ್ಭುತ ಪ್ರದರ್ಶನದಿಂದಾಗಿ ಚೇತರಿಸಿಕೊಂಡಿತು. ನಾಯರ್ ಆರಂಭದಿಂದಲೇ ಅಬ್ಬರಿಸಿ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಲ್ಲದೆ, ಕೇವಲ 40 ಎಸೆತಗಳಲ್ಲಿ 89 ರನ್ ಬಾರಿಸಿದರು.
Nair fire against Bumrah 🔥pic.twitter.com/3D6kjyR5lx
— Delhi Capitals (@DelhiCapitals) April 13, 2025
ಅದರಲ್ಲೂ ವಿಶ್ವದ ಅತ್ಯುತ್ತಮ ವೇಗಿ ಬುಮ್ರಾ ಬೌಲ್ ಎದರುರಿಸಲು ಉಳಿದ ಬ್ಯಾಟರ್ಗಳು ಹೆಣಗಾಡುತ್ತಿದ್ದರೇ ನಾಯರ್ ಸಲಿಸಾಗಿ ಬ್ಯಾಟ್ ಬೀಸಿದರು. ಬುಮ್ರಾ ಎಸೆದ ಓವರ್ ಒಂದರಲ್ಲಿ ಬರೋಬ್ಬರಿ 18 ರನ್ ಬಾರಿಸಿದ್ದಾರೆ. ಹಿಂದೆಂದೂ ಕರುಣ್ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿರಲಿಲ್ಲ. ಇದೀಗ ಸೂಪರ್ ಫಾರ್ಮ್‌ನೊಂದಿಗೆ ಐಪಿಎಲ್‌ಗೆ ಪ್ರವೇಶಿಸಿದ್ದಾರೆ.
Welcome back to the IPL, Karun 💙❤️ pic.twitter.com/QcLmXaxnY6
— Delhi Capitals (@DelhiCapitals) April 13, 2025
ನಾಯರ್ ಸೂಪರ್ ಫಾರ್ಮ್: ಇತ್ತೀಚೆಗೆ ನಡೆದಿದ್ದ ದೇಶೀಯ ಋತುವಿನಲ್ಲೂ ನಾಯರ್ ರನ್‌ಗಳ ಮೈದಾನದಲ್ಲಿ ರನ್ ಪ್ರವಾಹವನ್ನೇ ಸೃಷ್ಟಿಸಿದ್ದರು. ವಿಜಯ್ ಹಜಾರೆ ಟೂರ್ನಮೆಂಟ್‌ನಲ್ಲಿ ಸತತ ಮೂರು ಶತಕಗಳನ್ನು ಗಳಿಸಿದ್ದಲ್ಲದೆ, ಔಟಾಗದೆ ಟೂರ್ನಿಯಲ್ಲಿ 542 ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದರು. ಅವರು ರಣಜಿ ಮತ್ತು ಮುಷ್ತಾಕ್ ಅಲಿ ಟ್ರೋಫಿಗಳಲ್ಲೂ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ್ದು, ಭಾರತೀಯ ತಂಡಕ್ಕೆ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು ಆದರೆ ಅವಕಾಶ ಸಿಗುತ್ತಿಲ್ಲ.
Our hearts are full 🥹💙 pic.twitter.com/cau5zlrmcE
— Delhi Capitals (@DelhiCapitals) April 13, 2025
ಆದಾಗ್ಯೂ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ನಾಯರ್ಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ನೀಡಿತು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ನಾಯರ್ ಯಾವುದೇ ಸ್ವರೂಪದ ಕ್ರಿಕೆಟ್ ಆಡುವ ಸಮಾರ್ಥ್ಯ ತನ್ನಲಿದೆ ಎಂದು ಜಗತ್ತಿಗೆ ಸಾರಿದ್ದಾರೆ.
ಪಂದ್ಯದ ಹೈಲೆಟ್: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ತಂಡ ಕೊನೆವರೆಗೂ ಹೋರಾಡಿತಾದರೂ ಗೆಲುವು ದಕ್ಕಲಿಲ್ಲ. ಅಂತಿಮವಾಗಿ 12 ರನ್ಗಳಿಂದ ಸೋಲನುಭವಿಸಿತು.
ಇದನ್ನೂ ಓದಿ: RCB ಆಟಗಾರರನ್ನು ಅಭಿನಂದಿಸಲು ಕುಂಟುತ್ತಲೇ ಮೈದಾನಕ್ಕೆ ಬಂದ ದ್ರಾವಿಡ್: ಗುರುವಿನ ಬೆನ್ನಿಗೆ ನಿಂತ ಕೊಹ್ಲಿ!