ETV Bharat / sports

ರೋಹಿತ್, ಸೂರ್ಯ ಕುಮಾರ್ ಯಾದವ್ ಜೊತೆಯಾಟ: 3 ವರ್ಷದ ಬಳಿಕ ಚೆನ್ನೈ ಸೋಲಿಸಿದ ಮುಂಬೈ - MI VS CSK

ಐಪಿಎಲ್​ನಲ್ಲಿ ಮೂರು ವರ್ಷಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯಭೇರಿ ಬಾರಿಸಿದೆ.

ರೋಹಿತ್, ಸೂರ್ಯ ಕುಮಾರ್ ಯಾದವ್ ಜೊತೆಯಾಟ: 3 ವರ್ಷದ ಬಳಿಕ ಚೆನ್ನೈ ಸೋಲಿಸಿದ ಮುಂಬೈ
ರೋಹಿತ್, ಸೂರ್ಯ ಕುಮಾರ್ ಯಾದವ್ ಜೊತೆಯಾಟ: 3 ವರ್ಷದ ಬಳಿಕ ಚೆನ್ನೈ ಸೋಲಿಸಿದ ಮುಂಬೈ (AP)
author img

By ETV Bharat Karnataka Team

Published : April 21, 2025 at 12:10 AM IST

2 Min Read

ಮುಂಬೈ: ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಎದುರು ಮುಂಬೈ ಇಂಡಿಯನ್ಸ್ ಅನಾಯಾಸ ಜಯ ದಾಖಲಿಸಿತು. ಈ ಮೂಲಕ ಆಡಿರುವ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 8 ಅಂಕಗಳೊಂದಿಗೆ ಮುಂಬೈ ಅಂಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಜೊತೆಗ ಸುಮಾರು ಮೂರು ವರ್ಷಗಳ ಬಳಿಕ ಐಪಿಎಲ್​ನಲ್ಲಿ ಚೆನ್ನೈ ಎದುರು ಮುಂಬೈ ಜಯಿಸಿದೆ.

ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇದರಿಂದಾಗಿ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್​ ಕಲೆಹಾಕಿತು.

ಚೆನ್ನೈ ನೀಡಿದ್ದ 177 ರನ್ ಗುರಿಯನ್ನು ಮುಂಬೈ ಇಂಡಿಯನ್ಸ್ ಕೇವಲ 1 ವಿಕೆಟ್ ಕಳೆದುಕೊಂಡು 15.4 ಓವರ್​ಗಳಲ್ಲಿ ಜಯಭೇರಿ ಬಾರಿಸಿತು. ಮುಂಬೈ ಇಂಡಿಯನ್ಸ್ ತಂಡದ ಪರ ರೋಹಿತ್ ಶರ್ಮಾ 76 ರನ್, ಸೂರ್ಯಕುಮಾರ್ ಯಾದವ್ 68 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರು 113 ರನ್​ಗಳ ಭರ್ಜರಿ ಜೊತೆಯಾಟವಾಡಿದರು.

ರೋಹಿತ್ ಶರ್ಮಾ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ಸೇರಿದಂತೆ ಅಜೇಯ 76 ರನ್ ಬಾರಿಸಿದರೆ, ಸೂರ್ಯ ಕುಮಾರ್ ಯಾದವ್ 30 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಸೇರಿದಂತೆ ಅಜೇಯ 68 ರನ್ ಗಳಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್​ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯಲಿಲ್ಲ. ಶೇಖ್ ರಶೀದ್ (19) ಮತ್ತು ರಚಿನ್ ರವೀಂದ್ರ 5 ರನ್ ಬಾರಿ ನಿರಾಸೆ ಮೂಡಿಸಿದರು. ಬಳಿಕ ಕ್ರೀಸ್​ಗೆ ಆಗಮಿಸಿದ ಆಯುಷ್ ಮಾತ್ರೆ ತಮ್ಮ ಮೊದಲ ಪಂದ್ಯದಲ್ಲಿಯೇ ಕೇವಲ 15 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್ ಗಳಿಂದ 32 ರನ್ ಬಾರಿಸಿ ಔಟಾದರು.

ನಂತರ ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಕೇವಲ 35 ಎಸೆತಗಳಿಂದ 4 ಬೌಂಡರಿ ಮತ್ತು 2 ಬೌಂಡರಿಗಳಿಂದ ಅಜೇಯ 53 ರನ್ ಗಳಿಸಿದರೆ, ಶಿವಂ ದುಬೆ 32 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್​ಗಳಿಂದ 50 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಹೇಂದ್ರ ಸಿಂಗ್ ಧೋನಿ(4) ರನ್ ಬಾರಿಸಿ ನಿರಾಸೆ ಮೂಡಿಸಿದರು.

ಸಂಕ್ಷಿಪ್ತ ಸ್ಕೋರ್

ಚೆನ್ನೈ ಸೂಪರ್ ಕಿಂಗ್ಸ್ : 176/6 (20 ಓವರ್)

ಮುಂಬೈ ಇಂಡಿಯನ್ಸ್ : 177/1 (15.4 ಓವರ್)

ಇದನ್ನೂ ಓದಿ: 'ಪಂಜಾಬ್'​ ಕೋಟೆಗೆ ನುಗ್ಗಿ 'ಕಿಂಗ್ಸ್'​ ಪಡೆಯನ್ನು ಬಗ್ಗುಬಡಿದ ಆರ್​ಸಿಬಿ: 48 ಗಂಟೆಗಳಲ್ಲೇ ಹಳೆಯ ಲೆಕ್ಕ ಚುಕ್ತ!

ಇದನ್ನೂ ಓದಿ: ವಯಸ್ಸು 14, IPLಗೆ ಕಾಲಿಟ್ಟ ಮೊದಲ ಪಂದ್ಯದ ಮೊದಲ ಎಸೆತವೇ ಸಿಕ್ಸರ್! ಸಂಚಲನ ಸೃಷ್ಟಿಸಿದ ವೈಭವ್ ಸೂರ್ಯವಂಶಿ ಆಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.