ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದ ಒಂದು ವಾರ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್ ನಾಳೆಯಿಂದ ಮತ್ತೇ ಪ್ರಾರಂಭಗೊಳ್ಳುತ್ತಿದೆ. ಈ ಋತುವಿನಲ್ಲಿ ಇನ್ನು ಫೈನಲ್ ಸೇರಿ 17 ಪಂದ್ಯಗಳು ಬಾಕಿ ಉಳಿದಿವೆ.
ಏತನ್ಮಧ್ಯೆ, ಗುಜರಾತ್ ಟೈಟಾನ್ಸ್, ಆರ್ಸಿಬಿ ಸೇರಿ 7 ತಂಡಗಳ ನಡುವೆ ಪ್ಲೇಆಫ್ಗಾಗಿ ಭಾರೀ ಪೈಪೋಟಿ ಇದೆ. ಅಗ್ರ ಎರಡು ಸ್ಥಾನಗಳಲ್ಲಿರುವ ಗಜುರಾತ್ ಮತ್ತು ಬೆಂಗಳೂರು ತಂಡಗಳು ಇನ್ನೊಂದು ಪಂದ್ಯದಲ್ಲಿ ಗೆಲುವು ಸಾಧಿಸಿದರು ಪ್ಲೇಆಫ್ಗೆ ಅರ್ಹತೆ ಪಡೆಯಲಿವೆ.
ಆದರೆ ನಾಲ್ಕನೇ ಸ್ಥಾನಕ್ಕಾಗಿ ಮುಂಬೈ, ಕೆಕೆಆರ್, ಲಕ್ನೋ ತಂಡಗಳ ನಡುವೇ ಭಾರೀ ಪೈಪೋಟಿ ಏರ್ಪಡಲಿದೆ. ಅದರಲ್ಲೂ ಲಕ್ನೋ ತಂಡ ಹೇಗಾದರು ಮಾಡಿ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ ನಾಲ್ಕನೇ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಉಳಿದಿರುವ 3 ಪಂದ್ಯಗಳಲ್ಲೂ ಲಕ್ನೋಗೆ ಗೆಲುವು ಅನಿವಾರ್ಯವಾಗಿದೆ. ಪ್ಲೇಆಫ್ ಹಣಾಹಣಿ ನಡುವೆಯೇ ತಂಡಕ್ಕೆ ದೊಡ್ಡ ಆಘಾತವಾಗಿದೆ. ತಂಡದ ಸ್ಟಾರ್ ಬೌಲರ್ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ತಮ್ಮ ವೇಗದ ಬೌಲಿಂಗ್ ಮೂಲಕವೇ ಎಲ್ಲರನ್ನೂ ಆಕರ್ಷಿಸಿದ್ದ ಯುವ ವೇಗಿ ಮಯಾಂಕ್ ಯಾದವ್ ಮತ್ತೆ ಗಾಯಗೊಂಡಿದ್ದಾರೆ. ಬೆನ್ನಿನ ಗಾಯದಿಂದಾಗಿ ಅವರು ಐಪಿಎಲ್‌ನ ಉಳಿದ ಪಂದ್ಯಗಳನ್ನು ಕೊಳ್ಳಲಿದ್ದಾರೆ.
Kyle Jamieson 🚀 steps in for Ferguson at PBKS! 🔁
— Sports updates (@Sportsu26269313) May 16, 2025
Kusal Mendis 🇱🇰 takes over from Buttler in GT! 🔄
William O'Rourke 💥 replaces Mayank Yadav in LSG! ⚡
.
.#IPL2025 #PlayerReplacements #PBKS #GT #LSG #FreshTalent #SquadUpdates #GameChangerMoves #T20Thrills #Sportsupdates pic.twitter.com/v3x3zrjRwm
ಮಯಾಂಕ್ ಬೆನ್ನಿನ ಗಾಯಕ್ಕೆ ತುತ್ತಾಗಿದ್ದು ಐಪಿಎಲ್‌ನ ಉಳಿದ ಪಂದ್ಯಗಳಿಗೂ ಅವರು ಅಲಭ್ಯರಾಗಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ. ಲಕ್ನೋ ತಂಡವು ಅವರ ಬದಲಿಗೆ ವಿಲಿಯಂ ಒ'ರೂರ್ಕ್ (ನ್ಯೂಜಿಲೆಂಡ್) ಅವರನ್ನು ಆಯ್ಕೆ ಮಾಡಿದೆ.
LSG pacer Mayank Yadav ruled out of IPL 2025; replacement announced https://t.co/f6HpL8Gckk
— All Things Cricket (@Cricket_Things) May 16, 2025
ಮೂರನೇ ಬಾರಿಗೆ ಗಾಯ: ಒಂದೇ ವರ್ಷದಲ್ಲಿ ಮಯಾಂಕ್ ಮೂರನೇ ಬಾರಿಗೆ ಗಾಯಗೊಂಡಿದ್ದಾರೆ. ಕಳೆದ ವರ್ಷ ಮಾರ್ಚ್ 30 ರಿಂದ ಮೇ 4, 2025 ರವರೆಗೆ ಮಯಾಂಕ್ ಕೇವಲ 9 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರು ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು.
🚨 IPL 2025 Replacement Update 🏏
— KreedOn (@kreedonworld) May 16, 2025
Kyle Jamieson replaces Lockie Ferguson for PBKS 💥
Kusal Mendis steps in for Jos Buttler at GT 🔁
William O'Rourke takes over from Mayank Yadav for LSG ⚡#ipl2025 #iplupdates #pbks #gt #lsg #kreedon pic.twitter.com/GTLKC6ROUi
ಆದ್ರೆ ಕಳೆದ ಏಪ್ರಿಲ್‌ನಲ್ಲಿ ಗಾಯಗೊಂಡ ಅವರು ಆರು ತಿಂಗಳ ಕಾಲ ಆಟದಿಂದ ಹೊರಗುಳಿದಿದ್ದರು. ನಂತರ ಅವರನ್ನು ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಯಿತು. ಆ ಸರಣಿಯ ಅಂತ್ಯದ ವೇಳೆಗೆ, ಬೆನ್ನಿನ ಗಾಯಕ್ಕೆ ತುತ್ತಾಗಿದ್ದರು.
Mayank Yadav’s Journey:
— Vipin Tiwari (@Vipintiwari952) May 16, 2025
- Ruled out in 2023.
- Roared back in 2024 and grabbed headlines.
- Touted as a BGT contender.
- Played India in 2024
- Injured again in 2024
- Returned IPL midway in 2025.
- Played few games, and injured again
are we watching a future star slip through… pic.twitter.com/V29yfEHWk2
ಐಪಿಎಲ್ ದಾಖಲೆ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಯಾಂಕ್ ಯಾದವ್ 2024-25ರ ಅವಧಿಯಲ್ಲಿ ಒಟ್ಟು 6 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 9 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಟೆಸ್ಟ್ನಿಂದ ನಿವೃತ್ತಿ ಪಡೆದಿರುವ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿ ರೀ ಎಂಟ್ರಿ! ನಿಜಾನ?