ETV Bharat / sports

ನೀರಜ್​ ಚೋಪ್ರಾಗೆ ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ ಮನು ಭಾಕರ್​; ಮತ್ತೆ ಪ್ರೀತಿ, ಮದುವೆ ವದಂತಿ! - Manu Bhakar Wishes Neeraj Chopra

ಸ್ಟಾರ್​ ಶೂಟರ್ ಹಾಗು ಒಲಿಂಪಿಕ್ಸ್​ ಪದಕ ವಿಜೇತೆ ಮನು ಭಾಕರ್ ಅವರು ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ ಅವರಿಗೆ ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿ ಶುಭ ಕೋರಿದ್ದಾರೆ.

author img

By ETV Bharat Sports Team

Published : Sep 16, 2024, 2:20 PM IST

ನೀರಜ್​ ಚೋಪ್ರಾಗೆ ಅಭಿನಂದಿಸಿದ ನೀರಜ್​ ಚೋಪ್ರಾ
ನೀರಜ್​ ಚೋಪ್ರಾಗೆ ಮನು ಭಾಕರ್ ಅಭಿನಂದನೆ (IANS)

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್​ ಡಬಲ್ ಪದಕ ವಿಜೇತೆ ಮತ್ತು ಮಹಿಳಾ ಶೂಟರ್ ಮನು ಭಾಕರ್ ಅವರು ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ಅಭಿನಂದಿಸಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಿರುವ ಕೆಲವು ನೆಟ್ಟಿಗರು, ನೀವು ನೀರಜ್‌ರನ್ನು ಮದುವೆಯಾಗುತ್ತೀರಾ ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

2024ರ ಪ್ಯಾರಿಸ್ ಒಲಿಂಪಿಕ್ಸ್ ವೇಳೆ ಇಬ್ಬರ ನಡುವಿನ ಸ್ನೇಹ ಸಂಬಂಧದ ವದಂತಿಗಳು ಹರಿದಾಡಿದ್ದವು. ನಂತರ ಒಲಿಂಪಿಕ್ಸ್​ ವೇಳೆ ಮನು ಭಾಕರ್ ಅವರ ತಾಯಿ ನೀರಜ್ ಅವರನ್ನು ಭೇಟಿಯಾಗಿ ಹತ್ತಿರದ ಸಂಬಂಧಿಯಂತೆ ಮಾತನಾಡಿಸಿದ್ದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದವು. ಅಲ್ಲದೇ ಈ ವಿಡಿಯೋದಲ್ಲಿ ಮನು ಮತ್ತು ನೀರಜ್​​ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ ದಿನಕ್ಕೊಂದು ವದಂತಿ ಹರಿದಾಡಲಾರಂಭಿಸಿದೆ.

ಈ ಕುರಿತು ಮೌನ ಮುರಿದ ಮನು ತಂದೆ, "ಆಕೆ ಇನ್ನೂ ಚಿಕ್ಕವಳು. ಮದುವೆ ವಯಸ್ಸಾಗಿಲ್ಲ. ಈ ಬಗ್ಗೆ ನಾವು ಯಾವುದೇ ರೀತಿಯಲ್ಲಿ ಯೋಚಿಸಿಲ್ಲ" ಎಂದು ವದಂತಿಗಳಿಗೆ ತೆರೆ ಎಳೆದಿದ್ದರು.

ಇದೀಗ ಮನ ತಮ್ಮ 'ಎಕ್ಸ್'​ ಖಾತೆಯಲ್ಲಿ ನೀರಜ್​ಗೆ ಅಭಿನಂದನೆ ಸಲ್ಲಿಸಿರುವ ಪೋಸ್ಟ್​ ಹಂಚಿಕೊಂಡ ಬೆನ್ನಲ್ಲೆ ಮತ್ತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್​ ಆಗಿದ್ದಾರೆ.

ಕಳೆದ ಶನಿವಾರ ನಡೆದ ಡೈಮಂಡ್​ ಲೀಗ್​ನಲ್ಲಿ ಕೇವಲ 1 ಸೆಂಟಿ ಮೀಟರ್‌ ಅಂತರದಿಂದ ನೀರಜ್​ ಟ್ರೋಫಿ ಕೈಚೆಲ್ಲಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಕಾರಣ ನೀಡಿದ್ದ ನೀರಜ್,​ ತಮ್ಮ ಎಡಗೈನ ನಾಲ್ಕನೇ ಮೂಳೆ ಮುರಿದಿರುವುದಿರುವುದರಿಂದ ನಿರೀಕ್ಷಿತ ಪ್ರದರ್ಶನ ನೀಡಲಾಗಲಿಲ್ಲ ಎಂದು ಎಕ್ಸ್‌ರೇ ಸಮೇತ ಮಾಹಿತಿ ಹಂಚಿಕೊಂಡಿದ್ದರು. ಇದನ್ನು ಮನು ಕೂಡ ರಿ ಪೋಸ್ಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದರು.

'2024ರ ನಿಮ್ಮ ಅದ್ಭುತ ಋತುವಿಗಾಗಿ ಅಭಿನಂದನೆಗಳು. ಶೀಘ್ರವಾಗಿ ನೋವಿನಿಂದ ಚೇತರಿಸಿಕೊಂಡು ಮುಂಬರುವ ವರ್ಷಗಳಲ್ಲಿ ನಿಮಗೆ ಹೆಚ್ಚಿನ ಯಶಸ್ಸನ್ನು ಆಶಿಸುತ್ತೇನೆ' ಎಂದು ಮನು ಭಾಕರ್ ಬರೆದುಕೊಂಡಿದ್ದಾರೆ.

ಇದಕ್ಕೆ ಅಭಿಮಾನಿಗಳು, 'ನೀವು ಅವರನ್ನು ಪ್ರೀತಿಸುತ್ತಿದ್ದೀರಾ' ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: 'ಕೊಹ್ಲಿಯನ್ನು ನೋಡಿ ಕ್ರಿಕೆಟ್​ ಕಲಿಯಿರಿ': ಬಾಬರ್​ಗೆ ಮಾಜಿ ಪಾಕ್ ಆಟಗಾರನಿಂದ ಛೀಮಾರಿ - Younus Khan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.