IPL 2025 LSG vs SRH: ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇಆಫ್ಗೆ ತಲುಪಲು ಗೆಲ್ಲಲೇ ಬೇಕಾಗಿದ್ದ ಪಂದ್ಯದಲ್ಲಿ ಸೋಲನ್ನು ಕಂಡು ಮತ್ತೊಮ್ಮೆ ಕಪ್ ಆಸೆಯನ್ನು ಕೈಚೆಲ್ಲಿದೆ. ಸೋಮವಾರ ಏಕಾನಾ ಮೈದಾನದಲ್ಲಿ ಲಕ್ನೋ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ ಆಗಿದ್ದವು.
ಈಗಾಗಲೇ ಪ್ಲೇಆಫ್ ನಿಂದ ಹೊರ ಬಿದ್ದಿರುವ ಹೈದರಾಬಾದ್ ತಂಡಕ್ಕೆ ಇದು ಔಪಚಾರಿಕ ಪಂದ್ಯವಾಗಿದ್ದರೂ ಲಕ್ನೋ ತಂಡಕ್ಕೆ ಮಾಡು ಇಲ್ಲ ಮಡಿ ಪಂದ್ಯವಾಗಿತ್ತು. ಪ್ಲೇಆಫ್ಗೆ ತಲುಪಲು ಉಳಿದ ಮೂರು ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿತ್ತು. ಆದರೆ ಲಕ್ನೋ ಆಸೆಗೆ ಹೈದರಾಬಾದ್ ತಣ್ಣೀರೆರೆಚಿತು. ಈ ಪಂದ್ಯದಲ್ಲಿ 6 ವಿಕೆಟ್ಗಳಿಂದ ಗೆಲುವು ಸಾಧಿಸಿತು.
ಲಕ್ನೋ ನೀಡಿದ್ದ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ ತಂಡ ಅಭಿಷೇಕ್ ಶರ್ಮಾ (59) ಅವರ ಅರ್ಧಶತಕ ಮತ್ತು ಕ್ಲಾಸೇನ್ (47), ಕಮಿಂದು ಮೆಂಡಿಸ್ (32), ಇಶನ್ ಕಿಶಾನ್ (35) ಅವರ ಬ್ಯಾಟಿಂಗ್ ಸಹಾಯದಿಂದಾಗಿ 18.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ವಿಜಯದ ಭಾವುಟ ಹಾರಿಸಿತು.
Sanjiv Goenka left the balcony out of anger after seeing 27 crores Rishabh Pant failing in back to back 12th game!! pic.twitter.com/MpOLClJ5rP
— Rajiv (@Rajiv1841) May 19, 2025
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ ಮಿಚೆಲ್ ಮಾರ್ಷ್ (65) ಮತ್ತು ಮಾಕ್ರಮ್ (61) ಬ್ಯಾಟಿಂಗ್ ಸಹಾಯದಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ಗಳನ್ನು ಗಳಿಸಿತ್ತಾದರೂ ಈ ಮೊತ್ತವನ್ನು ರಕ್ಷಿಸಿಕೊಳ್ಳಲು ವಿಫಲವಾಯ್ತು. ಇದರೊಂದಿಗೆ ಪ್ಲೇಆಫ್ ರೇಸ್ನಿಂದಲೂ ಹೊರಬಿತ್ತು.
Magnificent Malinga! 🪽😮
— IndianPremierLeague (@IPL) May 19, 2025
Athleticism on display from Eshan Malinga as he grabs a stunner to send back Rishabh Pant! 👌#LSG 133/2 after 13 overs.
Updates ▶ https://t.co/GNnZh90u7T#TATAIPL | #LSGvSRH | @SunRisers pic.twitter.com/5rSouA8Kw0
ಎಲ್ಎಸ್ಜಿ ಮಾಲೀಕ ಅಸಮಾಧಾನ: ನಿರ್ಣಾಯಕ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ತಂಡಕ್ಕೆ ಆಸೆರೆ ಆಗುತ್ತಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದರು. ಮತ್ತೊಮ್ಮೆ ಬ್ಯಾಟಿಂಗ್ನಲ್ಲಿ ಫ್ಲಾಪ್ ಆದರು. ಅವರು ಕೇವಲ 7 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು. ಇದರ ಬೆನ್ನಲ್ಲೆ ಲಕ್ನೋ ನಾಯಕ ಸಂಜೀವ್ ಗೋಯೆಂಕಾ ರಿಷಭ್ ವಿರುದ್ದ ಅಸಮಾಧಾನಗೊಂಡಂತೆ ಕಂಡರು.
See how Sanjiv Goenka reacted after Rishabh Pant dismissal and trust me you will never see this behaviour from King SRK and KKR Ceo Venky Mysore at KKR ever.pic.twitter.com/Toda6iKnko
— कट्टर INDIA समर्थक 🦁🇮🇳 ™ (@KKRWeRule) May 19, 2025
ರಿಷಭ್ ಪಂತ್ ಔಟಾಗುತ್ತಿದ್ದಂತೆ ಬಾಲ್ಕಾನಿಯಲ್ಲಿ ನಿಂತಿದ್ದ ಗೋಯೆಂಕಾ ಕೂಡಲೇ ಅಲ್ಲಿಂದ ಹೊರಟು ಹೋದರು. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫ್ಯಾನ್ಸ್ಗಳು ಕೂಡ ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಈ ನಾಲ್ವರು ಮಾತ್ರ 20ನೇ ಓವರ್ ಮೇಡನ್ ಮಾಡಿದ್ದು: ಹೆಸರು ಕೇಳಿದ್ರೆ ಅಚ್ಚರಿ ಪಡ್ತೀರಾ!