LSG vs CSK Match: ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲಕ್ನೋ ಪಡೆ ರಿಷಭ್ ಪಂತ್ (63) ಅರ್ಧಶತಕದ ನೆರವಿನಿಂದಾಗಿ 20 ಓವರ್ಗಳಲ್ಲಿ 166 ರನ್ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆ ತಂಡ 19.3 ಓವರ್ಗಳಲ್ಲೇ ಗುರಿ ತಲುಪಿ ಗೆಲುವಿನ ದಡ ಸೇರಿತು.
Doing what he does best 💛 🫡
— IndianPremierLeague (@IPL) April 14, 2025
For his brilliant finishing act of 26*(11) and yet another 🔝 effort behind the stumps, #CSK skipper MS Dhoni is the Player of the Match 🙌 💥
Scorecard ▶ https://t.co/jHrifBkT14 #TATAIPL | #LSGvCSK | @msdhoni pic.twitter.com/Xcw0whVQo4
30 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 56 ರನ್ ಬೇಕಿದ್ದಾಗ ಬ್ಯಾಟಿಂಗ್ಗೆ ಬಂದ ಧೋನಿ ಅದ್ಭುತ ಪ್ರದರ್ಶನ ನೀಡಿದರು. ಶಿವಂ ದುಬೆ ಜೊತೆ ಸೋರಿ ಬ್ಯಾಟ್ ಬೀಸಿದ ಧೋನಿ ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 26ರನ್ ಚಚ್ಚಿದರು. ಅಲ್ಲದೇ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
MS DHONI WITH HIS 18TH POTM AWARD IN THE IPL. 🦁 pic.twitter.com/CMuPJJIvyg
— Mufaddal Vohra (@mufaddal_vohra) April 14, 2025
ಧೋನಿ ಅವರ ಧನಾ ಧನ್ ಇನ್ನಿಂಗ್ಸ್ನಿಂದಾಗಿ ಸತತ ಐದು ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ತಂಡ ಅಂತಿಮವಾಗಿ ಗೆಲುವಿನ ಟ್ರ್ಯಾಕ್ಗೆ ಮರಳಿದೆ.
The IMPACT player does it with MAX IMPACT 🤩
— IndianPremierLeague (@IPL) April 14, 2025
Shivam Dube 🤝 MS Dhoni with a match-winning partnership 💛@ChennaiIPL are 🔙 to winning ways 😎
Scorecard ▶ https://t.co/jHrifBlqQC #TATAIPL | #LSGvCSK pic.twitter.com/AI2hJkT9Dt
ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಧೋನಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮ ಖಾತೆಗೆ ಸೇರಿಸಿಕೊಂಡರು. ಇದರೊಂದಿಗೆ ದಾಖಲೆ ಬರೆದರು. ಐಪಿಎಲ್ ಇತಿಹಾಸದಲ್ಲೇ ಪಂದ್ಯ ಶ್ರೇಷ್ಠ ಪಡೆದ ಹಿರಿಯ ಆಟಗಾರ ಎಂಬ ಅಪರೂಪದ ದಾಖಲೆ ಧೋನಿ ಹೆಸರಿಗೆ ಸೇರಿದೆ.
THE ONE HANDED SIX OF MS DHONI. 🤯pic.twitter.com/msIdL84cCt
— Mufaddal Vohra (@mufaddal_vohra) April 14, 2025
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಹಿರಿಯ ಆಟಗಾರರು
- ಎಮ್ಎಸ್ ಧೋನಿ - 43 ವರ್ಷ 282 ದಿನಗಳು (2025)
- ಪ್ರವೀಣ್ ತಾಂಬೆ - 42 ವರ್ಷ 209 ದಿನಗಳು (2014)
- ಶೇನ್ ವಾರ್ನ್ - 41 ವರ್ಷ 223 ದಿನಗಳು (2011)
- ಶೇನ್ ವಾರ್ನ್ - 41 ವರ್ಷ 211 ದಿನಗಳು (2011)
- ಆಡಮ್ ಗಿಲ್‌ಕ್ರಿಸ್ಟ್ - 41 ವರ್ಷ 181 ದಿನಗಳು (2013)
- ಕ್ರಿಸ್ ಗೇಲ್ - 41 ವರ್ಷ 35 ದಿನಗಳು (2020)
- ಶೇನ್ ವಾರ್ನ್ - 40 ವರ್ಷ 204 ದಿನಗಳು (2010)
- ಆಡಮ್ ಗಿಲ್‌ಕ್ರಿಸ್ಟ್ - 40 ವರ್ಷ 185 ದಿನಗಳು (2012)
- ರಾಹುಲ್ ದ್ರಾವಿಡ್ - 40 ವರ್ಷ 85 ದಿನಗಳು (2013)
ಇದನ್ನೂ ಓದಿ: ಐಪಿಎಲ್ ನಡುವೆಯೇ CSK ತಂಡ ಸೇರಿದ ಮುಂಬೈ ಬ್ಯಾಟರ್: ಕಾರಣ ಏನು?