ETV Bharat / sports

KL Rahul Birthday Special: ಕನ್ನಡಿಗ ಕೆ ಎಲ್​ ರಾಹುಲ್​ ಹೆಸರಲ್ಲಿರುವ ಟಾಪ್​ ದಾಖಲೆಗಳಿವು! - KL RAHUL

ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಪ್ಲೇಯರ್​ ಕನ್ನಡಿಗ ಕೆಎಲ್​ ರಾಹುಲ್​ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹೆಸರಲ್ಲಿರುವ ಟಾಪ್​ ದಾಖಲೆಗಳು ಹೀಗಿವೆ.

ಕೆಎಲ್​ ರಾಹುಲ್​ KL Rahul top records  KL Rahul Birthday  KL Rahul Birthday Special
KL ರಾಹುಲ್​ (IANS)
author img

By ETV Bharat Sports Team

Published : April 18, 2025 at 12:27 PM IST

Updated : April 18, 2025 at 12:41 PM IST

2 Min Read

KL Rahul Birthday Special: ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟರ್​ ಕನ್ನಡಿಗ ಕೆಎಲ್​ ರಾಹುಲ್​ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2014ಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ರಾಹುಲ್​ ಅಂದಿನಿಂದಲೂ ಸಕ್ರಿಯರಾಗಿದ್ದಾರೆ.

ಸದ್ಯ ಭಾರತ ತಂಡದ ಭರವಸೆಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಟೆಸ್ಟ್​, ಏಕದಿನ ಪಂದ್ಯಗಳನ್ನು ಆಡುತ್ತಿರುವ ರಾಹುಲ್​ ಟಿ-20 ರಾಷ್ಟ್ರೀಯ ತಂಡಕ್ಕೂ ಕಮ್​ಬ್ಯಾಕ್​ ಮಾಡಲು ಸಜ್ಜಾಗಿದ್ದಾರೆ. ರಾಹುಲ್​ ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದು, ತಮ್ಮ ಕನ್ಸಿಸ್​ಟೆನ್ಸಿ ಪರ್ಫಾಮೆನ್ಸ್​ ಮೂಲಕವೇ ಕ್ರಿಕೆಟ್​ನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಅವರ ಹೆಸರಲ್ಲಿರುವ ಟಾಪ್​ 8 ದಾಖಲೆಗಳು ಹೀಗಿವೆ.

ಕೆಎಲ್​ ರಾಹುಲ್ ಹೆಸರಲ್ಲಿರುವ ಟಾಪ್​​ ದಾಖಲೆಗಳು

ಸತತ ಏಳು ಅರ್ಧಶತಕ: ಟೆಸ್ಟ್​ ಕ್ರಿಕೆಟ್​ನಲ್ಲಿ ಸತತ ಏಳು ಅರ್ಧಶತಕ ಸಿಡಿಸಿರುವ ಏಕೈಕ ಭಾರತೀಯ ಬ್ಯಾಟರ್​ ಎಂಬ ದಾಖಲೆ ಕೆಎಲ್​ ರಾಹುಲ್​ ಹೆಸರಲ್ಲಿದೆ. 2017 ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್​ ಪಂದ್ಯಗಳಲ್ಲಿ ಸತತ 7 ಅರ್ಧಶತಕ ಸಿಡಿಸಿದ್ದರು. ಇಂದಿಗೂ ಈ ದಾಖಲೆ ಮುರಿಯಲು ಯಾವುದೇ ಭಾರತೀಯ ಬ್ಯಾಟರ್​ಗೂ ಸಾಧ್ಯವಾಗಿಲ್ಲ.

ಅತಿ ಹೆಚ್ಚು ಕ್ಯಾಚ್​: ಇಂಗ್ಲೆಂಡ್​ ವಿರುದ್ಧ 2018ರಲ್ಲಿ ನಡೆದಿದ್ದ ಟೆಸ್ಟ್​ ಸರಣಿ ಒಂದರಲ್ಲೇ ಕೆಎಲ್​ ರಾಹುಲ್​ 14 ಕ್ಯಾಚ್​ಗಳನ್ನು ಪಡೆದಿದ್ದರು. ಟೆಸ್ಟ್​ನಲ್ಲಿ ಈ ದಾಖಲೆ ಬರೆದ ಮೊದಲ ಭಾರತೀಯ ಆಗಿದ್ದು, ಒಟ್ಟಾರೆ ವಿಶ್ವದ ಎರಡನೇ ಪ್ಲೇಯರ್​ ಎನಿಸಿಕೊಂಡಿದ್ದಾರೆ.

ವಿಕೆಟ್​ ಕೀಪರ್​ ಆಗಿ ಹೆಚ್ಚು ರನ್​: 2023-24ರ ಏಕದಿನ ವಿಶ್ವಕಪ್​ನಲ್ಲಿ ವಿಕೆಟ್​ ಕೀಪರ್​ ಆಗಿ ಹೆಚ್ಚು ದಾಖಲೆ ಬರೆದ ವಿಶ್ವದ 10ನೇ ಆಟಗಾರ ಎನಿಸಿಕೊಂಡಿದ್ದಾರೆ. ವಿಶ್ವಕಪ್​ನಲ್ಲಿ ರಾಹುಲ್​ 452 ರನ್​ ಕಲೆಹಾಕಿದ್ದರು.

ಚೊಚ್ಚಲ ಪಂದ್ಯದಲ್ಲಿ ಶತಕ: ಅಂತಾರಾಷ್ಟ್ರೀಯ ಪದಾರ್ಪಣೆಯ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟರ್​​ ಆಗಿದ್ದಾರೆ. ವಿಶ್ವದ 10ನೇ ಆಟಗಾರ ಎನಿಸಿಕೊಂಡಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಹೆಚ್ಚು ರನ್​: ವೆಸ್ಟ್​ ಇಂಡೀಸ್​ ವಿರುದ್ದ 2016ರಲ್ಲಿ ನಡೆದಿದ್ದ ಟಿ-20 ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿದ್ದ ರಾಹುಲ್​ ಶತಕ ಸಮೇತ ಅತಿ ಹೆಚ್ಚು ರನ್​ ಭಾರಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ರಾಹುಲ್ 4ನೇ ಕ್ರಮಾಂಕದಲ್ಲಿ 110 ರನ್ ಬಾರಿಸಿರುವ ಪ್ಲೇಯರ್ ಎನಿಸಿಕೊಂಡಿದ್ದಾರೆ.

ಟಿ20ಯಲ್ಲಿ ಹೆಚ್ಚು ಶತಕ: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೆಚ್ಚು ಶತಕ ಸಿಡಿಸಿರುವ ಆಟಗಾರನಾಗಿ ಕೆಎಲ್​ ರಾಹುಲ್​ 10ನೇ ಆಟಗಾರ ಎನಿಸಿಕೊಂಡಿದ್ದಾರೆ. ಇವರು ಟಿ-20ಯಲ್ಲಿ ಎರಡು ಶತಕಗಳನ್ನು ಹೊಂದಿದ್ದಾರೆ.

ಅತಿ ಹೆಚ್ಚು ಅರ್ಧಶತಕ: ಅಂತಾರಾಷ್ಟ್ರೀಯ ಟಿ - 20 ಕ್ರಿಕೆಟ್​ನಲ್ಲಿ ಹೆಚ್ಚು ಶತಕ ಸಿಡಿಸಿರುವ ಆಟಗಾರನಾಗಿ ವಿಶ್ವದ ಒಂಬತ್ತನೇ ಪ್ಲೇಯರ್​ ಆಗಿದ್ದಾರೆ. ರಾಹುಲ್​ ಈವರೆಗೂ ಒಟ್ಟು 24 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ವೇಗದ 2000 ರನ್​: ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಅತ್ಯಂತ ವೇಗವಾಗಿ 2000 ರನ್​ ಕಲೆಹಾಕಿದ ವಿಶ್ವದ 6ನೇ ಆಟಗಾರ ಎನಿಸಿಕೊಂಡಿದ್ದಾರೆ. ಇವರು ಒಟ್ಟು 58 ಇನ್ನಿಂಗ್ಸ್​ಗಳಲ್ಲಿ 2000ರನ್​ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಇಂದು RCB vs PBKS ಕದನ: ಯಾವ ತಂಡ ಬಲಿಷ್ಠ? ಸೋಲು - ಗೆಲುವಿನ ಸಂಪೂರ್ಣ ವಿವರ

Last Updated : April 18, 2025 at 12:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.