IPL 2025 Virat kohli World Record: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಿನ್ನೆ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆಿದಿದ್ದಾರೆ. ಏಕಾನ ಮೈದಾನದಲ್ಲಿ ನಡೆದಿದ್ದ ರೋಚಕ ಪಂದ್ಯದಲ್ಲಿ ಬೆಂಗಳೂರು ತಂಡ 42 ರನ್ಗಳಿಂದ ಸೋಲನ್ನು ಕಂಡಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 231 ರನ್ ಬಾರಿಸಿತು. ಈ ಗುರಿಯನ್ನು ಬೆನ್ನುಹತ್ತಿದ ಬೆಂಗಳೂರು ಪಡೆ 189 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಟೂರ್ನಿಯಲ್ಲಿ ಬೆಂಗಳೂರು ತಂಡ ಸೋಲನ್ನು ದಾಖಲಿಸಿತು. ಅಲ್ಲದೇ ತವರಿನಿಂದ ಹೊರ ನಡೆದ ಸಂಪೂರ್ಣ ಪಂದ್ಯದಲ್ಲಿ ಆರ್ಸಿಬಿಗೆ ಇದು ಮೊದಲ ಸೋಲಾಗಿದೆ. ಇದಕ್ಕೂ ಮುನ್ನ ಆಡಿರುವ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
Main character.
— Royal Challengers Bengaluru (@RCBTweets) May 23, 2025
Big match energy.
Every. Single. Time. 🎬💯#PlayBold #ನಮ್ಮRCB #IPL2025 #RCBvSRH pic.twitter.com/S3ifhwYSSU
ಏತನ್ಮಧ್ಯೆ, ಇದೇ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ. ನಿನ್ನೆ ಫಿಲ್ ಸಾಲ್ಟ್ ಜೊತೆ ಆರಂಭಿಕರಾಗಿ ಬ್ಯಾಟಿಂಗ್ಗೆ ಬಂದ ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿದರು. ಆದರೆ ಹರ್ಷ್ ದುಬೆ ಎಸೆತದಲ್ಲಿ ಕ್ಯಾಚ್ಔಟಾಗಿ ಪೆವಿಲಿಯನ್ ಸೇರಿದರು. ಆದರೆ ಇದೇ ಪಂದ್ಯದಲ್ಲಿ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ.
VIRAT KOHLI COMPLETED 800 FOURS FOR RCB 👑
— Johns. (@CricCrazyJohns) May 23, 2025
- The Greatest ever...!!!! pic.twitter.com/w4TdEGvjid
ವಿಶ್ವದಾಖಲೆ ಬರೆದ ಕೊಹ್ಲಿ: ಟಿ20 ಕ್ರಿಕೆಟ್‌ನಲ್ಲಿ ಒಂದೇ ತಂಡದ ಪರ 800 ಬೌಂಡರಿಗಳನ್ನು ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಐಪಿಎಲ್ ಮೊದಲ ಆವೃತ್ತಿ 2008 ರಿಂದಲೂ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. 18ನೇ ಆವೃತ್ತಿಯಲ್ಲಿ ಆರ್‌ಸಿಬಿ ಪರ 800 ಬೌಂಡರಿಗಳನ್ನು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
He’s a 𝒇𝒐𝒖𝒓𝒄𝒆 to reckon with. ⚔️🔥#PlayBold #ನಮ್ಮRCB #IPL2025 #RCBvSRH pic.twitter.com/hFeU6rF2C6
— Royal Challengers Bengaluru (@RCBTweets) May 23, 2025
ತಂಡ ಒಂದರ ಪರ ಅತಿ ಹೆಚ್ಚು ಬೌಂಡರಿ ಬಾರಿಸಿದ ಆಟಗಾರರು
- ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – 801 ಬೌಂಡರಿ
- ಜೇಮ್ಸ್ ವಿನ್ಸ್ (ಹ್ಯಾಂಪ್‌ಶೈರ್) – 694 ಬೌಂಡರಿಗಳು
- ಅಲೆಕ್ಸ್ ಹೇಲ್ಸ್ (ನಾಟಿಂಗ್‌ಹ್ಯಾಮ್‌ಶೈರ್) – 563 ಬೌಂಡರಿಗಳು
- ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್) – 550 ಬೌಂಡರಿಗಳು
- ಲ್ಯೂಕ್ ರೈಟ್ (ಸಸೆಕ್ಸ್) – 529 ಬೌಂಡರಿಗಳು
ಐಪಿಎಲ್ನಲ್ಲಿ ತಂಡದ ಒಂದರ ಪರ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನು ವಿರಾಟ್ ನಿರ್ಮಿಸಿದ್ದರು. ಈವರೆಗೂ ಕೊಹ್ಲಿ ಆರ್‌ಸಿಬಿ ಪರ 264 ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ: SRH ವಿರುದ್ಧ RCB ಸೋಲಿಗೆ ಇದೇ ಪ್ರಮುಖ ಕಾರಣ; ಫ್ಯಾನ್ಸ್ಗೆ ಶುರುವಾಯ್ತು ಆತಂಕ!