RCB vs DC: ಐಪಿಎಲ್ 2025ರ ಭಾಗವಾಗಿ ಇಂದು ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಋತುವಿನಲ್ಲಿ ಅಕ್ಷರ್ ಪಾಟೇಲ್ ನೇತೃತ್ವದ ಡೆಲ್ಲಿ ತಂಡ ಆಡಿದ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಮುಂದುವರೆದಿದೆ. ಆರ್‌ಸಿಬಿ ಕೂಡ ಉತ್ತಮ ಪ್ರದರ್ಶನ ತೋರುತ್ತಿದ್ದು ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಒಂದು ಪಂದ್ಯದಲ್ಲಿ ಮಾತ್ರ ಸೋಲನ್ನು ಕಂಡಿದೆ.
𝐇𝐢𝐭 𝐨𝐫 𝐦𝐢𝐬𝐬?
— Royal Challengers Bengaluru (@RCBTweets) April 9, 2025
We put RCB's finest on the spot for some unfiltered takes. 😎
Watch them take their stance at Johnnie Walker Refreshing Mixer Non-Alcoholic presents RCB Unbox.#PlayBold #ನಮ್ಮRCB #IPL2025 pic.twitter.com/2cQHyggvVb
ಸದ್ಯ, ಅಂಕಪಟ್ಟಿಯಲ್ಲಿ ಡೆಲ್ಲಿ ತಂಡ 6 ಪಾಯಿಂಟ್ಸ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಕೂಡ 6 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಏತನ್ಮಧ್ಯೆ, ಇಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿಶ್ವದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರೆ ವಿರಾಟ್ ಟಿ20 ಸ್ವರೂಪದಲ್ಲಿ 100 ಅರ್ಧಶತಕ ಪೂರ್ಣಗೊಳಿಸಲಿದ್ದಾರೆ. ಹೀಗಾಗಿ, ಅವರು ಶಾರ್ಟ್-ಫಾರ್ಮ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ.
Chase master's finesse at ನಮ್ಮ Chinnaswamy! 👑🙇🏼♂#OnThisDay in 2013 🆚 SRH, Virat Kohli unleashed pure magic, a match-winning knock with a jaw-dropping strike rate of 1️⃣9️⃣7️⃣, making the chase a breeze! 😮💨#PlayBold #ನಮ್ಮRCB pic.twitter.com/OwpLWbt92g
— Royal Challengers Bengaluru (@RCBTweets) April 9, 2025
ಇನ್ನಿಂಗ್ಸ್ ವಿಚಾರದಲ್ಲಿ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಟಿ20ಯಲ್ಲಿ 100 ಅರ್ಧಶತಕಗಳನ್ನು ಪೂರೈಸಿದ ಏಕೈಕ ಆಟಗಾರ ಡೇವಿಡ್ ವಾರ್ನರ್ ಆಗಿದ್ದಾರೆ. ಮುಂಬೈ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 13,000 ರನ್‌ಗಳ ಗಡಿ ತಲುಪಿದ್ದ ವಿರಾಟ್, ಇಂದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರೆ ಇತಿಹಾಸ ರಚಿಸಲಿದ್ದಾರೆ.
𝑪𝒍𝒂𝒔𝒔𝒊𝒄 𝑪𝒐𝒎𝒎𝒆𝒏𝒕𝒂𝒓𝒚 𝒇𝒕. 𝑹𝒐𝒎𝒂𝒓𝒊𝒐 𝑺𝒉𝒆𝒑𝒉𝒆𝒓𝒅 🎙
— Royal Challengers Bengaluru (@RCBTweets) April 9, 2025
“That was travelling, but he’s held onto it like a magnet.” 🧲🫴#PlayBold #ನಮ್ಮRCB #IPL2025 pic.twitter.com/4Z6e55Esaq
ವಿರಾಟ್ ಟಿ20 ದಾಖಲೆ: ವಿರಾಟ್ ಕೊಹ್ಲಿ ಈ ವರೆಗೂ ಟಿ20 ಕ್ರಿಕೆಟ್‌ನಲ್ಲಿ 386 ಇನ್ನಿಂಗ್ಸ್‌ಗಳನ್ನು ಆಡಿ 9 ಶತಕ ಮತ್ತು 99 ಅರ್ಧಶತಕಗಳ ಸಹಾಯದಿಂದ 13050 ರನ್ ಗಳಿಸಿದ್ದಾರೆ. ಟಿ20 ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಐದನೇ ಸ್ಥಾನದಲ್ಲಿದ್ದಾರೆ.
ಸಂಭಾವ್ಯ ತಂಡಗಳು - ಆರ್‌ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್, ರಸಿಖ್ ಸಲಾಂ/ಸುಯಶ್ ಶರ್ಮಾ.
ದೆಹಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಟ್ರಿಸ್ಟಾನ್ ಸ್ಟಬ್ಸ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ಮೋಹಿತ್ ಶರ್ಮಾ/ಟಿ ನಟರಾಜನ್, ಮುಖೇಶ್ ಕುಮಾರ್.
ಇದನ್ನೂ ಓದಿ: ಕನ್ನಡಿಗನ ಕಮಾಲ್: ರಾಜಸ್ಥಾನ ಮಣಿಸಿ ಅಗ್ರಸ್ಥಾನಕ್ಕೇರಿದ ಗುಜರಾತ್ ಟೈಟಾನ್ಸ್!