ಐಪಿಎಲ್ನ 31ನೇ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಪಂಜಾಬ್ ಕಿಂಗ್ಸ್ (PBKS): ಈ ಋತುವಿನಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಐದು ಪಂದ್ಯಗಳನ್ನು ಆಡಿದೆ. ಈ ಪೈಕಿ 4 ಮೂರರಲ್ಲಿ ಗೆದ್ದು 2ರಲ್ಲಿ ಸೋಲುಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದಿದ್ದ ಕೊನೆಯ ಪಂದ್ಯದಲ್ಲಿ ಪಂಜಾಬ್ 8 ವಿಕೆಟ್ಗಳಿಂದ ಸೋಲು ಕಂಡಿತ್ತು. ಸದ್ಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
Records tumbled the last time these two sides clashed last season, and now, Mullanpur is ready for another epic showdown! 🔥🏏
— Star Sports (@StarSportsIndia) April 15, 2025
Who’s your pick to WIN this blockbuster contest? 👀#IPLonJioStar 👉 #PBKSvKKR | TUE, 15th APR, 6:30 PM LIVE on Star Sports 1, Star Sports 1 Hindi &… pic.twitter.com/vy2cAZWLCK
ಕೋಲ್ಕತ್ತಾ ನೈಟ್ ರೈಡರ್ಸ್ (KKR): ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ಈವರೆಗೂ ಆಡಿದ 6 ಪಂದ್ಯಗಳ ಪೈಕಿ 3ರಲ್ಲಿ ಗೆದ್ದು 3ರಲ್ಲಿ ಸೋಲು ಅನುಭವಿಸಿದೆ. ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 8 ವಿಕೆಟ್ಗಳಿಂದ ಮಣಿಸಿತ್ತು. ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಸೋಲು-ಗೆಲುವು: ಇತ್ತಂಡಗಳು ಈವರೆಗೂ 33 ಪಂದ್ಯಗಳಲ್ಲಿ ಎದುರುಬದುರಾಗಿವೆ. ಕೆಕೆಆರ್ 21 ಬಾರಿ ಗೆದ್ದಿದೆ. ಪಂಜಾಬ್ 12 ಪಂದ್ಯಗಳನ್ನು ಜಯಿಸಿದೆ.
Explosive batting 🤝 PBKS
— Star Sports (@StarSportsIndia) April 15, 2025
Disciplined bowling 🤝 KKR
As Kolkata takes on Punjab for the first time in Mullanpur, who do you think will triumph? 🤔#IPLonJioStar 👉 #PBKSvKKR | TUE, 15th APR, 6:30 PM LIVE on Star Sports 1, Star Sports 1 Hindi & JioHotstar! pic.twitter.com/kYTOqR35fG
ಗರಿಷ್ಠ-ಕನಿಷ್ಠ ಸ್ಕೋರ್: ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್ 261 ರನ್ ಬಾರಿಸಿದ್ದು ಈವರೆಗಿನ ಹೈಸ್ಕೋರ್. 109 ಕನಿಷ್ಠ ಸ್ಕೋರ್. ಕೆಕೆಆರ್ ವಿರುದ್ಧ ಪಂಜಾಬ್ ಕಿಂಗ್ಸ್ 262 ರನ್ ಬಾರಿಸಿದ್ದ ಹೈಸ್ಕೋರ್ ಆಗಿದ್ದರೆ, 119 ಕಡಿಮೆ ಸ್ಕೋರ್ ಆಗಿದೆ.
When RUNS, SIXES & RECORDS rained at the Eden Gardens! 🥶
— Star Sports (@StarSportsIndia) April 15, 2025
Is yet another record-breaking showdown on the cards tonight? 🤔
💡 Fun fact: Shreyas Iyer was on the receiving end when his current team, #PBKS, chased down the record 262-run target!#IPLonJioStar 👉 #PBKSvKKR | TUE,… pic.twitter.com/c5NamxwJZ2
ಸಂಭಾವ್ಯ ತಂಡಗಳು-ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಮಾರ್ಕೊ ಜಾನ್ಸೆನ್, ಅರ್ಷ್‌ದೀಪ್ ಸಿಂಗ್, ಯಜ್ವೇಂದ್ರ ಚಾಹಲ್, ಬಾರ್ಟ್ಲೆಟ್.
ಕೋಲ್ಕತ್ತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಮೊಯಿನ್ ಅಲಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.
ಪಂದ್ಯ ಪ್ರಾರಂಭ: ರಾತ್ರಿ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್
ಇದನ್ನೂ ಓದಿ: IPLನಲ್ಲಿ RCB ಸೇರಿ 9 ತಂಡಗಳಿಗೆ ಆಡಿರುವ ಏಕೈಕ ಪ್ಲೇಯರ್ ಇವರೇ!