ಐಪಿಎಲ್ 18ನೇ ಆವೃತ್ತಿಯಲ್ಲಿ ಈಗಾಗಲೇ 31 ಪಂದ್ಯಗಳು ಮುಕ್ತಾಯಗೊಂಡಿದ್ದು ಇಂದು 32ನೇ ಪಂದ್ಯಕ್ಕೆ ವೇದಿಕೆ ಸಿದ್ದವಾಗಿದೆ. ಸದ್ಯ ಮುಕ್ತಾಯಗೊಂಡಿರುವ ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ತಂಡಗಳು ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕ್ರಮವಾಗಿ ನಾಲ್ಕು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ.
ಉಳಿದಂತೆ, ಈ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವೂ ಉತ್ತಮ ಪ್ರದರ್ಶನ ನೀಡುತ್ತಿದ್ದು 5ನೇ ಸ್ಥಾನದಲ್ಲಿದೆ. ಈ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನಪ್ ಸಮತೋಲಿತವಾಗಿದ್ದು ಇದೀಗ ಮತ್ತೊಬ್ಬ ಸ್ಪೀಡ್ಸ್ಟಾರ್ ತಂಡದ ಕ್ಯಾಂಪ್ ಸೇರಿಕೊಂಡಿದ್ದಾರೆ.
ಕಳೆದ ಆವೃತ್ತಿಯಲ್ಲಿ 4 ಪಂದ್ಯಗಳನ್ನು ಆಡಿದ್ದ ಸೆನ್ಸೇಷನಲ್ ಸ್ಟಾರ್ 7 ವಿಕೆಟ್ಗಳನ್ನು ಉರುಳಿಸಿದ್ದರು. ಅದರಲ್ಲೂ ಆರ್ಸಿಬಿ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಈ ಬೌಲರ್ 156.7kmph ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಈಗಾಗಲೇ ಈ ಬೌಲರ್ ಯಾರು ಎಂದು ನಿಮಗೆ ಅರ್ಥವಾಗಿರಬಹುದು. ಹೌದು, ಈ ಬೌಲರ್ ಬೇರೆ ಯಾರೂ ಅಲ್ಲ ಅವರೇ ಭಾರತದ ಯುವ ಸೆನ್ಸೇಷನಲ್ ವೇಗಿ ಮಯಾಂಕ್ ಯಾದವ್.
ವೇಗದ ಬೌಲಿಂಗ್ ಮೂಲಕವೇ ಕಳೆದ ಆವೃತ್ತಿಯಲ್ಲಿ ಎಲ್ಲರ ಗಮನ ಸೆಳೆದಿದ್ದ ಮಯಾಂಕ್, ಗಾಯದಿಂದಾಗಿ ದೀರ್ಘಕಾಲದವರೆಗೆ ಎನ್‌ಸಿಎಗೆ ಸೀಮಿತವಾಗಿದ್ದರು. ಸದ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಬಿಸಿಸಿಐನಿಂದ ಬೌಲಿಂಗ್ ಮಾಡಲು ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಲಕ್ನೋ ಸೂಪರ್ ಜೈಂಟ್ಸ್ ಕ್ಯಾಂಪಗೂ ಸೇರಿ ಅಭ್ಯಾಸ ಪ್ರಾರಂಭಿಸಿದ್ದಾರೆ.
⚡ 𝐌𝐀𝐘𝐀𝐍𝐊 ⚡ 𝐘𝐀𝐃𝐀𝐕 ⚡ 𝐈𝐒 ⚡ 𝐁𝐀𝐂𝐊 ⚡ pic.twitter.com/c0G5p3svMA
— Lucknow Super Giants (@LucknowIPL) April 16, 2025
ಈ ಬಗ್ಗೆ ಎಲ್‌ಎಸ್‌ಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮಾಹಿತಿ ನೀಡಿದ್ದು, "ಮಯಾಂಕ್ ಚೇತರಿಸಿಕೊಂಡಿದ್ದಾರೆ. ಎನ್‌ಸಿಎಯಲ್ಲಿ ಅವರು ಬೌಲಿಂಗ್ ಮಾಡುತ್ತಿರುವ ಕೆಲವು ವೀಡಿಯೊಗಳನ್ನು ನಾನು ನೋಡಿದ್ದು ಸಂಪೂರ್ಣ ಫಿಟ್ ಆಗಿದ್ದಾರೆ" ಎಂದಿದ್ದಾರೆ.
ಯಾವಾಗ ಕಣಕ್ಕೆ?: ಈ ತಿಂಗಳ 19ರಂದು ಜೈಪುರದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಲಕ್ನೋ ಪ್ರದರ್ಶನ: ಈ ಆವೃತ್ತಿಯ ಐಪಿಎಲ್ನಲ್ಲಿ ಲಕ್ನೋ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗಾಗಲೇ 7 ಪಂದ್ಯಗಳನ್ನು ಆಡಿರುವ ಲಕ್ನೋ 4ರಲ್ಲಿ ಗೆದ್ದು ಮೂರರಲ್ಲಿ ಸೋಲನ್ನು ಕಂಡಿದೆ. ಸದ್ಯ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ. ಲಕ್ನೋ ತನ್ನ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವೂ ಶನಿವಾರ ನಡೆಯಲಿದೆ.
ಇದನ್ನೂ ಓದಿ: ₹4.2 ಕೋಟಿ ಢಮಾರ್..! ಈತನನ್ನು ಆರ್ಸಿಬಿ ತಂಡದಿಂದ ಕೈ ಬಿಟ್ಟಿದ್ದೇ ಒಳ್ಳೆಯದಾಯಿತು!