17 Runs In 1 ball: ವಿಶ್ವದ ಯಾವುದೇ ಬ್ಯಾಟರ್ ಆಗಲಿ ಒಂದು ಎಸೆತದಲ್ಲಿ 4 ಅಥವಾ 6 ರನ್ ಗಳಿಸಬಹುದಷ್ಟೇ. ಅದಕ್ಕಿಂತ ಹೆಚ್ಚು ರನ್ ಗಳಿಸುವುದೆಂದು ಸುಲಭದ ಮಾತಲ್ಲ. ಆದರೆ ಭಾರತೀಯ ಬ್ಯಾಟರ್ ವೀರೇಂದ್ರ ಸೆಹ್ವಾಗ್ 1 ಎಸೆತದಲ್ಲಿ 4, 6 ಅಲ್ಲ ಬರೋಬ್ಬರಿ 17 ರನ್ ಚಚ್ಚಿದ್ದಾರೆ. ಅದೂ ಕೂಡ ಅಂತಾಷ್ಟ್ರೀಯ ಪಂದ್ಯದಲ್ಲಿ!. 20 ವರ್ಷಗಳ ಹಿಂದೆ ನಿರ್ಮಾಣವಾದ ಈ ದಾಖಲೆ ಇಂದಿಗೂ ಕ್ರಿಕೆಟ್ ಇತಿಹಾಸ ಪುಟದಲ್ಲಿ ಹಾಗೆಯೇ ಉಳಿದುಕೊಂಡಿದೆ.
Highest Score In One Ball: 2004ರ ಮಾರ್ಚ್ 13ರಂದು ಕರಾಚಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಸೆಹ್ವಾಗ್ ಒಂದು ಎಸೆತದಲ್ಲಿ 17 ರನ್ ಬಾರಿಸಿದ್ದರು. ಪಾಕ್‌ನ ರಾಣಾ ನವೇದ್ ಉಲ್ ಹಸನ್ ಬೌಲಿಂಗ್‌ನಲ್ಲಿ ಈ ದಾಖಲೆ ಬರೆದಿದ್ದರು.
Virender Sehwag 17 Runs in 1 One Ball | Cricket World Cup 2015#BANvSL #RSAvInd #SSCricket #Pujara #AskTheExpert #Rahane #NZvsPAK #bbccricket #TeamIndia #ICCAwards #ICC #BCCI #Kohli pic.twitter.com/GNR0Yfhv7X
— Abhi Jain (@AbhiJai50398392) January 27, 2018
ಇದನ್ನೂ ಓದಿ: ಒಂದೇ ಓವರ್ನಲ್ಲಿ 36 ಅಲ್ಲ 77ರನ್ ಬಿಟ್ಟುಕೊಟ್ಟ ಬೌಲರ್: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ದಾಖಲು!
ಇದು ಹೇಗೆ ಸಾಧ್ಯವಾಯಿತು?: ವಾಸ್ತವವಾಗಿ, ಪಂದ್ಯದ 10ನೇ ಓವರ್ನಲ್ಲಿ ರಾಣಾ ನವೇದ್ ಉಲ್ ಹಸನ್ ಬೌಲಿಂಗ್ ಮಾಡಿದ್ದರು. ಇದರಲ್ಲಿ ಮೊದಲ 3 ಎಸೆತಗಳು ನೋ ಬಾಲ್ ಆಗಿದ್ದವು. ಈ ವೇಳೆ ಕ್ರೀಸ್ನಲ್ಲಿದ್ದ ಸೆಹ್ವಾಗ್ ಎರಡು 2 ಬೌಂಡರಿ ಹೊಡೆದಿದ್ದರು. ನಂತರ ಎಸೆದ ಲೀಗಲ್ ಡೆಲಿವರಿಯಲ್ಲಿ ಯಾವುದೇ ರನ್ ಗಳಿಸಲಿಲ್ಲ. ನಂತರ ರಾಣಾ ಮತ್ತೆ ಎರಡು ನೋ ಬಾಲ್ ಹಾಕಿದರು. ಇದರಲ್ಲಿ ಸೆಹ್ವಾಗ್ ಮತ್ತೊಂದು ಬೌಂಡರಿ ಕಲೆ ಹಾಕಿದರು. ಹೀಗೆ ನವೇದ್ ಒಟ್ಟು 5 ನೋ ಬಾಲ್ ಮಾಡಿದ್ದು, 3 ಬೌಂಡರಿಯಿಂದ 12 ರನ್ ಬಂದರೆ ಹೆಚ್ಚುವರಿಯಾಗಿ 5 ರನ್ ಬಂದಿತ್ತು. ಹಾಗಾಗಿ ಸೆಹ್ವಾಗ್ ಒಂದೇ ಎಸೆತದಲ್ಲಿ 17 ರನ್ ಸಿಡಿಸಿದಂತಾಯಿತು!.
ವೀರೂ ಕ್ರಿಕೆಟ್ ದಾಖಲೆ: ವೀರೇಂದ್ರ ಸೆಹ್ವಾಗ್ ಭಾರತದ ಪರ 251 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ 15 ಶತಕ ಮತ್ತು 38 ಅರ್ಧ ಶತಕಗಳೊಂದಿಗೆ 8,273 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ 219 ಆಗಿದೆ. 104 ಟೆಸ್ಟ್ ಪಂದ್ಯಗಳನ್ನೂ ಆಡಿದ್ದಾರೆ. 49.34 ಸರಾಸರಿಯೊಂದಿಗೆ 8,586 ರನ್ ಗಳಿಸಿದ್ದಾರೆ. ಇದರಲ್ಲಿ 23 ಶತಕ ಮತ್ತು 32 ಅರ್ಧ ಶತಕಗಳು ಸೇರಿವೆ. ಅತ್ಯುತ್ತಮ ಸ್ಕೋರ್ 319 ಆಗಿದೆ. 19 ಟಿ20 ಪಂದ್ಯಗಳಲ್ಲಿ 394 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರ ಗರಿಷ್ಠ ಸ್ಕೋರ್ 68 ರನ್.
ಸೆಹ್ವಾಗ್ ಬ್ಯಾಟಿಂಗ್ ಶೈಲಿ ವಿಭಿನ್ನ. ಡ್ಯಾಶಿಂಗ್ ಓಪನರ್ ಆಗಿದ್ದ ಇವರು 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಸೆಹ್ವಾಗ್ ನಿವೃತ್ತಿ ಹೊಂದಿ ಇಂದಿಗೆ 9 ವರ್ಷ ಕಳೆದರೂ ಅವರಂತಹ ಡ್ಯಾಶಿಂಗ್ ಬ್ಯಾಟರ್ ಭಾರತಕ್ಕೆ ಮತ್ತೊಬ್ಬ ಸಿಕ್ಕಿಲ್ಲ.
ಇದನ್ನೂ ಓದಿ: ವಾರೇ ವ್ಹಾ! 21 ಓವರ್ಗಳಲ್ಲಿ ಒಂದೇ ಒಂದು ರನ್ ಬಿಟ್ಟುಕೊಡದೇ ಇತಿಹಾಸ ಸೃಷ್ಟಿಸಿದ್ದ ಭಾರತೀಯ ಬೌಲರ್