IND vs ENG Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ (ENG vs IND) ಪಂದ್ಯ ಇಂದು (ಜೂನ್ 20) ರಿಂದ ಪ್ರಾರಂಭವಾಗಲಿದೆ. ಈ ಮಹತ್ವದ ಸರಣಿಗಾಗಿ ಇಂಗ್ಲೆಂಡ್ ಈಗಾಗಲೇ ತನ್ನ ಅಂತಿಮ ಪ್ಲೇಯಿಂಗ್ ಇಲೆವೆನ್ ತಂಡವನ್ನು ಪ್ರಕಟಿಸಿದೆ. ಆದ್ರೆ ಭಾರತ ಅಂತಿಮ ತಂಡದಲ್ಲಿ ಯಾರೆಲ್ಲ ಆಡಲಿದ್ದಾರೆ ಅಂತಿಮ ತಂಡದ ಸಂಯೋಜನೆ ಹೇಗಿರುತ್ತದೆ? ಯಾವ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡುತ್ತಾರೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
ಇದೇ ವಿಚಾರವಾಗಿ ಕೆಲವು ಮಾಜಿ ಕ್ರಿಕೆಟರ್ಗಳು ಮೊದಲ ಟೆಸ್ಟ್‌ಗೆ ತಮ್ಮ ಅಂತಿಮ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಇದೀಗ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ತಮ್ಮ ಅಂತಿಮ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದ್ದಾರೆ.
𝙎𝙚𝙚𝙠𝙝𝙣𝙚 𝙣𝙖𝙝𝙞, 𝙨𝙞𝙠𝙝𝙖𝙣𝙚 𝙖𝙖𝙮𝙚 𝙝𝙖𝙞𝙣! 💪
— Star Sports (@StarSportsIndia) June 11, 2025
The new era of #TeamIndia, under the leadership of #ShubmanGill, is all set to challenge the old English guard on their home turf. 🇮🇳#ENGvIND | 1st Test starts FRI, 20th JUNE, 2:30 PM, streaming on JioHotstar!… pic.twitter.com/DaCUgY85Z7
ಅಶ್ವಿನ್ ಆಯ್ಕೆ ಮಾಡಿದ ಟೀಮ್ ಇಂಡಿಯಾದ ಅಂತಿಮ ತಂಡದಲ್ಲಿ ಆರು ಬ್ಯಾಟ್ಸ್‌ಮನ್‌ಗಳು, ಮೂವರು ವೇಗದ ಬೌಲರ್ಗಳು ಮತ್ತು ಇಬ್ಬರು ಆಲ್‌ರೌಂಡರ್‌ಗಳಿದ್ದಾರೆ. ಆದ್ರೆ ಅಶ್ವಿನ್ ತಾವು ಆಯ್ಕೆ ಮಾಡಿದ ತಂಡದಿಂದ ಕುಲದೀಪ್ ಯಾದವ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕೈಬಿಟ್ಟಿದ್ದಾರೆ. ಇದಷ್ಟೇ ಅಲ್ಲದೇ ಸರಣಿಯಲ್ಲಿ ಯಾರು ಹೆಚ್ಚು ವಿಕೆಟ್ ಪಡೆಯುತ್ತಾರೆ ಮತ್ತು ಯಾರು ಹೆಚ್ಚಿನ ರನ್ ಗಳಿಸುತ್ತಾರೆ ಎಂದು ಅಶ್ವಿನ್ ಭವಿಷ್ಯ ನುಡಿದಿದ್ದಾರೆ.
𝐓𝐡𝐞 𝐃𝐚𝐰𝐧 𝐨𝐟 𝐚 𝐍𝐞𝐰 𝐄𝐫𝐚 🌅@ShubmanGill begins his journey as Team India’s captain in this Test series against England.
— Star Sports (@StarSportsIndia) June 20, 2025
Will he make history and end India’s 18-year wait for a Test series win in England? ✍#ENGvIND | 1st Test starts FRI, JUN 20, 2:30 PM… pic.twitter.com/bHx111jvj1
ಹೆಚ್ಚು ವಿಕೆಟ್ ಮತ್ತು ರನ್ ಗಳಿಸುವ ಆಟಗಾರರು: ಈ ಸರಣಿಯಲ್ಲಿ ಇಂಗ್ಲೆಂಡ್‌ನ ವೇಗಿ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಐದು ಪಂದ್ಯಗಳನ್ನು ಆಡಿದರೇ ಅತಿ ಹೆಚ್ಚು ವಿಕೆಟ್ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಜತೆಗೆ ಶೋಯೆಬ್ ಬಶೀರ್ ಅವರು ಕೂಡ ಈ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ನಂಬಿದ್ದಾರೆ. ಇದಲ್ಲದೇ ಬ್ಯಾಟಿಂಗ್ನಲ್ಲಿ ಇಂಗ್ಲೆಂಡ್ ಪರ ಜೋ ರೂಟ್ ಅತಿ ಹೆಚ್ಚು ರನ್ ಗಳಿಸುವ ಆಟಗಾರನಾಗಲಿದ್ದಾರೆ ಎಂದು ಅಶ್ವಿನ್ ನುಡಿದಿದ್ದಾರೆ.
The ultimate battle of skill, nerve and grit begins TODAY! 🔥
— Star Sports (@StarSportsIndia) June 20, 2025
This is where the chatter ends and the action begins! Witness a new era of Test cricket under the leadership of @ShubmanGill! 🤩#ENGvIND | 1st Test starts FRI, JUN 20, 2:30 PM Streaming on JioHotstar pic.twitter.com/oG3OOeDbVY
ಬುಮ್ರಾ ಎಲ್ಲಾ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲವಾದ್ದರಿಂದ ಸಿರಾಜ್ ಭಾರತ ಪರ ಹೆಚ್ಚಿನ ವಿಕೆಟ್ ಪಡೆಯುತ್ತಾರೆ ಎಂದು ಹೇಳಿದರು. ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ಪ್ರಮುಖ ಸ್ಕೋರರ್ ಆಗಲಿದ್ದಾರೆ ಎಂದು ವಿವರಿಸಿದರು.
ಮೊದಲ ಟೆಸ್ಟ್‌ಗೆ ಅಶ್ವಿನ್ ಆಯ್ಕೆ ಮಾಡಿದ ಭಾರತ ತಂಡ: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭಮನ್ ಗಿಲ್, ಕರುಣ್ ನಾಯರ್, ರಿಷಬ್ ಪಂತ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ
ಇದನ್ನೂ ಓದಿ: ಭಾರತ vs ಇಂಗ್ಲೆಂಡ್ ಟೆಸ್ಟ್!: ಕೊಹ್ಲಿ ಸ್ಥಾನಕ್ಕೆ ಯುವ ಆಟಗಾರ ಕಣಕ್ಕೆ; ಗುಟ್ಟು ಬಹಿರಂಗ