ETV Bharat / sports

ಭಾರತ - ಅಫ್ಘಾನಿಸ್ತಾನ್​ ಪಂದ್ಯ: ವಿರಾಟ್​ ಕೊಹ್ಲಿ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್​ ಯಾದವ್​ - Unique Record Equals

author img

By ETV Bharat Karnataka Team

Published : Jun 21, 2024, 1:19 PM IST

ನಿನ್ನೆ ನಡೆದ ಪಂದ್ಯ ಸೂರ್ಯಕುಮಾರ್​ ಅವರಿಗೆ 64ನೇ ಟಿ20 ಅಂತಾರಾಷ್ಟ್ರೀಯ ಮ್ಯಾಚ್​ ಆಗಿದ್ದು, ಈ ಪಂದ್ಯ ಸೇರಿದಂತೆ ಅವರು 15 ಬಾರಿ ಪ್ಲೇ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪ್ಲೇ ಆಫ್ ದಿ ಮ್ಯಾಚ್ ಪ್ರಶಸ್ತಿಗಳನ್ನು ಗೆದ್ದ ವಿರಾಟ್ ಕೊಹ್ಲಿಯನ್ನು ಸರಿಗಟ್ಟಿದ್ದಾರೆ.

INDIA VS AFGHANISTAN  SURYAKUMAR YADAV  VIRAT KOHLI  T20 World cup 2024
ವಿರಾಟ್​ ಕೊಹ್ಲಿ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್​ ಯಾದವ್​ (IANS)

ಬ್ರಿಡ್ಜ್‌ಟೌನ್ (ಬಾರ್ಬಡೋಸ್): ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಸೂಪರ್-8 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 47 ರನ್‌ಗಳಿಂದ ಸೋಲಿಸಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಸೂಪರ್-8ರ ಗುಂಪು-1ರಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತದ ಪರ ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು.

ನಿನ್ನೆ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್​ ಹೊರತು ಪಡಿಸಿ ಉಳಿದ ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಹೆಣಗಾಡುತ್ತಿದ್ದರು. ಈ ವೇಳೆ, ಸೂರ್ಯ ಕುಮಾರ್​ ತಮ್ಮದೇ ಶೈಲಿಯಲ್ಲಿ ಆಟವಾಡುವ ಮೂಲಕ ಅಫ್ಘಾನಿಸ್ತಾನದ ಬೌಲರ್‌ಗಳ ಮೇಲೆ ತೀವ್ರ ದಾಳಿ ನಡೆಸಿದರು.

ಸೂರ್ಯಕುಮಾರ್ 28 ಎಸೆತಗಳಲ್ಲಿ 53 ರನ್ ಸಿಡಿಸುವ ಮೂಲಕ ಭರ್ಜರಿ ಇನ್ನಿಂಗ್ಸ್ ಆಡಿದರು. ಉಪನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಸೂರ್ಯ ಅವರ 60 ರನ್‌ಗಳ ಜೊತೆಯಾಟವು ಭಾರತ ತಂಡವು ಅತ್ಯಧಿಕ ಸ್ಕೋರ್​ ಗಳಿಸಲು ಸಹಾಯವಾಯಿತು. ನಿಗದಿತ 20 ಓವರ್​ಗಳಲ್ಲಿ ಭಾರತ ತಂಡ 8 ವಿಕೆಟ್​ ನಷ್ಟಕ್ಕೆ 181 ರನ್​ಗಳನ್ನು ಗಳಿಸಿತು. ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ 134 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಭಾರತವು 47 ರನ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.

ಭಾರತದ ವಿಜಯದ ನಂತರ ಸೂರ್ಯಕುಮಾರ್​ ಯಾದವ್​ ಅವರು 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದರು. ಈ ಪ್ರಶಸ್ತಿ ಪಡೆಯುವ ಮೂಲಕ ಸೂರ್ಯ ಅವರು 15 ನೇ ಬಾರಿಗೆ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದ ಕೊಹ್ಲಿಯ ಸಂಖ್ಯೆಯನ್ನು ಸೂರ್ಯಕುಮಾರ್​ ಯಾದವ್​ ಸರಿಗಟ್ಟಿದರು. ಅಷ್ಟೇ ಅಲ್ಲ ಈ ಪ್ರಶಸ್ತಿಯೊಂದಿಗೆ ಸೂರ್ಯ ಅವರು ನಡೆಯುತ್ತಿರುವ T20 ವಿಶ್ವಕಪ್ 2024 ರಲ್ಲಿ ಭಾರತಕ್ಕಾಗಿ ಪ್ಲೇಯರ್ ಆಫ್ ದಿ ಮ್ಯಾಚ್ ಗೆದ್ದ ಮೊದಲ ಬ್ಯಾಟರ್ ಎನಿಸಿಕೊಂಡರು.

ಪಂದ್ಯದ ನಂತರದ ಮಾತನಾಡಿದ ಅವರು, ಬಹಳಷ್ಟು ಕಠಿಣ ಪರಿಶ್ರಮವಿದೆ ಎಂದು ನಾನು ಭಾವಿಸುತ್ತೇನೆ. ಅದರಲ್ಲಿ ಬಹಳಷ್ಟು ಪ್ರಕ್ರಿಯೆಗಳು ಮತ್ತು ದಿನಚರಿಗಳಿವೆ. ನಾನು ಏನು ಮಾಡಬೇಕೆಂದು ನನ್ನ ಮನಸ್ಸಿನಲ್ಲಿ ಸ್ಪಷ್ಟವಾಗಿರುತ್ತದೆ. ನಮ್ಮ ಆಟದ ಯೋಜನೆಯನ್ನು ನಾವು ತಿಳಿದುಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಆಡಬೇಕು ಎಂದು ನಾನು ಭಾವಿಸುತ್ತೇನೆ. ಹಾರ್ದಿಕ್ ಬ್ಯಾಟಿಂಗ್‌ಗೆ ಬಂದಾಗ, ನಾನು ನಿಧಾನವಾಗಿ ಆಡುತ್ತೇನೆ. 180ಕ್ಕೆ ಸ್ಕೋರ್‌ ಏರಿಸೋಣಾ ಮತ್ತು ಸಂತೋಷದಿಂದ ಬ್ಯಾಟ್ ಮಾಡೋಣ ಎಂದು ಹೇಳಿದ್ದು ನನಗೆ ಇನ್ನೂ ನೆನಪಿದೆ ಅಂತಾ ಸೂರ್ಯ ಹೇಳಿದರು.

ಜೂನ್ 22 ರಂದು ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಸೂಪರ್ ಎಂಟು ಹಂತದ ಎರಡನೇ ಪಂದ್ಯವನ್ನು ಭಾರತ ತನ್ನ ನೆರೆಯ ಬಾಂಗ್ಲಾದೇಶವನ್ನು ಎದುರಿಸಲಿದೆ.

ಓದಿ: ಕಮಿನ್ಸ್ ಹ್ಯಾಟ್ರಿಕ್​, ವಾರ್ನರ್​ ಅಬ್ಬರ: ಬಾಂಗ್ಲಾದೇಶಕ್ಕೆ ಸೋಲುಣಿಸಿದ ಕಾಂಗರೂ ಪಡೆ - Australia Defeats Bangladesh

ETV Bharat Logo

Copyright © 2024 Ushodaya Enterprises Pvt. Ltd., All Rights Reserved.