Ind vs Eng 1st Test Bumrah Record: ಆಂಡರ್ಸನ್ ಮತ್ತು ತೆಂಡೂಲ್ಕರ್ ಟ್ರೋಫಿಯ ಭಾಗವಾಗಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 465 ರನ್‌ಗಳಿಗೆ ಆಲೌಟ್ ಆಗಿದೆ. ಎರಡನೇ ಸೆಷನ್ 327/5 ರೊಂದಿಗೆ ಆರಂಭಿಸಿದ ಆಂಗ್ಲ ಪಡೆ ಇನ್ನೂ 138 ರನ್ ಸೇರಿಸಿ ಆಲೌಟ್ ಆಯ್ತು.
ಹ್ಯಾರಿ ಬ್ರೂಕ್ (99; 112 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್) ಒಂದು ರನ್ ಅಂತರದಲ್ಲಿ ಶತಕ ವಂಚಿತರಾದರು. ಜೇಮೀ ಸ್ಮಿತ್ (40; 52 ಎಸೆತಗಳಲ್ಲಿ 3 ಬೌಂಡರಿಗಳು) ಮತ್ತು ಕ್ರಿಸ್ ವೋಕ್ಸ್ (38; 55 ಎಸೆತಗಳಲ್ಲಿ 3 ಬೌಂಡರಿಗಳು, 2 ಸಿಕ್ಸರ್‌ಗಳು) ಅದ್ಭುತ ಪ್ರದರ್ಶನ ನೀಡಿದರು. ಬೆನ್ ಸ್ಟೋಕ್ಸ್ (20), ಬ್ರೈಡನ್ ಕಾರ್ಸ್ (22) ಮತ್ತು ಜೋಶ್ ಟಾಂಗ್ (11) ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಮೂರನೇ ದಿನದ ಆಟ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಎರಡನೇ ದಿನದ ಶತಕದ ವೀರ ಓಲೀ ಪೋಪ್ (106; 137 ಎಸೆತಗಳಲ್ಲಿ 14 ಬೌಂಡರಿ) ಪೆವಿಲಿಯನ್ ತಲುಪಿದರು. ಎರಡನೇ ದಿನ ಬೆನ್ ಡಕೆಟ್ (62) ಅರ್ಧಶತಕ ಗಳಿಸಿದ್ದು ತಿಳಿದಿದೆ.
ಭಾರತದ ಬೌಲರ್‌ಗಳಲ್ಲಿ ಬುಮ್ರಾ (5/83), ಪ್ರಸಿದ್ಧ್ ಕೃಷ್ಣ (3) ಮತ್ತು ಸಿರಾಜ್ (2) ತಲಾ 2 ವಿಕೆಟ್ ಪಡೆದರು. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 471 ರನ್ ಗಳಿಗೆ ಆಲೌಟ್ ಆಗಿತ್ತು. ಇದೀಗ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 6 ರನ್‌ಗಳ ಮುನ್ನಡೆ ಸಾಧಿಸಿದೆ.
ದಾಖಲೆ ಬರೆದ ಬುಮ್ರಾ: ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕುವಲ್ಲಿ ಬುಮ್ರಾ ಪ್ರಮುಖ ಪಾತ್ರವಹಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ಗಳನ್ನು ಬುಮ್ರಾ ಪಡೆದರು. ಇದರೊಂದಿಗೆ ವಿದೇಶಿ ನೆಲದಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ಬಾರಿ ಐದು ವಿಕೆಟ್ ಪಡೆದ ಬೌಲರ್ ಆಗಿ ಕಪಿಲ್ ದೇವ್ ದಾಖಲೆ ಸರಿಗಟ್ಟಿದರು. ಬುಮ್ರಾ ಒಟ್ಟು 34 ಟೆಸ್ಟ್ ಪಂದ್ಯಗಳಲ್ಲಿ 12 ಬಾರಿ ಐದು ವಿಕೆಟ್ ಪಡೆದಿದ್ದಾರೆ. ಕಪೀಲ್ ದೇವ್ ಕೂಡ ಇದೆ ಸಾಧನೆ ಮಾಡಿದ್ದಾರೆ. ಉಳಿದಂತೆ ಈ ಪಟ್ಟಿಯ ನಂತರ ಸ್ಥಾನದಲ್ಲಿ ಇಶಾಂತ್ ಶರ್ಮಾ (9), ಜಾಹೀರ್ ಖಾನ್ (8), ಇರ್ಫಾನ್ ಪಠಾಣ್ (7) ಇದ್ದಾರೆ.
ವಿದೇಶಿ ನೆಲದಲ್ಲಿ ಟೆಸ್ಟ್ನಲ್ಲಿ ಭಾರತ ಪರ ಅತಿ ಹೆಚ್ಚು ಐದು ವಿಕೆಟ್ ಪಡೆದ ಬೌಲರ್ಗಳು
- 12 ಜಸ್ಪ್ರೀತ್ ಬುಮ್ರಾ (34 ಟೆಸ್ಟ್ ಪಂದ್ಯಗಳು) *
- 12 ಕಪಿಲ್ ದೇವ್ (66)
- 9 ಇಶಾಂತ್ ಶರ್ಮಾ (63)
- 8 ಜಹೀರ್ ಖಾನ್ (54)
- 7 ಇರ್ಫಾನ್ ಪಠಾಣ್ (15)