IPL Umpire Salary: ವಿಶ್ವದಲ್ಲಿ ಬಿಗ್ಬ್ಯಾಷ್ ಸೇರಿದಂತೆ ಹಲವಾರು ಕ್ರಿಕೆಟ್ ಲೀಗ್ಗಳು ನಡೆಯುತ್ತವೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL) ಇರುವ ಕ್ರೇಜ್ ಬೇರೆ ಯಾವುದೇ ಲೀಗ್ಗಳಿಗೆ ಇಲ್ಲ. ಹಾಗಾಗಿ ಐಪಿಎಲ್‌ನಲ್ಲಿ ಆಡಬೇಕು ಎಂದು ದೇಶ - ವಿದೇಶಿ ಆಟಗಾರರು ಬಯಸುತ್ತಾರೆ. ಇದರಿಂದ ಆಟಗಾರರು ಖ್ಯಾತಿ ಪಡೆಯುವುದರ ಜೊತೆಗೆ ಕೈತುಂಬ ಸಂಬಳವನ್ನು ಪಡೆಯುತ್ತಾರೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ ನಿಮಗೆ ಗೊತ್ತಾ ಆಟಗಾರರು ಮಾತ್ರವಲ್ಲದೇ ಅಂಪೈರ್ಗಳೂ ಕೂಡಾ ಐಪಿಎಲ್‌ನಲ್ಲಿ ಕೈತುಂಬ ಸಂಪಾದನೆ ಮಾಡುತ್ತಾರೆ. ಹಾಗಾದರೆ ಅಂಪೈರ್‌ಗಳು ಒಂದು ಪಂದ್ಯಕ್ಕೆ ಪಡೆಯುವ ಸಂಬಳ ಎಷ್ಟು? ಅವರಿಗೆ ಏನೆಲ್ಲ ಸೌಲಭ್ಯಗಳು ಸಿಗುತ್ತವೆ ಎಂದು ಇದೀಗ ತಿಳಿಯೋಣ.

ಐಪಿಎಲ್ ಅಂಪೈರ್‌ಗಳು ಪಡೆಯುವ ಸಂಬಳ ಎಷ್ಟು?; ಐಪಿಎಲ್‌ನಲ್ಲಿ ಅಂಪೈರಿಂಗ್ ಮಾಡುವುದು ಸಾಮಾನ್ಯ ವಿಷಯವಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಿಗಿಂತಲೂ ಇಲ್ಲಿ ಒತ್ತಡ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಅಂಪೈರ್‌ಗಳ ತೀರ್ಪಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ತಂಡಗಳ ಫಲಿತಾಂಶವೇ ತಲೆಕೆಳಗಾಗುತ್ತವೆ. ಈ ಹಿನ್ನೆಲೆ ಐಪಿಎಲ್‌ನಲ್ಲಿ ಅಂಪೈರಿಂಗ್ ಮಾಡುವುದು ಸವಾಲಿನ ಕೆಸಲವೇ ಸರಿ. ಅಂತಹ ಒತ್ತಡದಲ್ಲೂ ಕೆಲಸ ಮಾಡುವ ಅಂಪೈರ್‌ಗಳು ಕೈ ತುಂಬ ಹಣವನ್ನು ಪಡೆಯುತ್ತಾರೆ. ದೇಶಿಯ ಲೀಗ್ಗಳಿಗೆ ಹೋಲಿಕೆ ಮಾಡಿದರೇ ಐಪಿಎಲ್ನಲ್ಲೆ ಅಂಪೈರ್‌ಗಳು ಅತೀ ಹೆಚ್ಚು ಸಂಬಳ ಪಡೆಯುತ್ತಾರೆ.

ಡೊಮೆಸ್ಟಿಕ್ ಲೀಗ್ ಅಂಪೈರ್ ಸಂಬಳ: ಐಪಿಎಲ್ಗೆ ಹೋಲಿಸಿದರೇ, ರಣಜಿ, ವಿಜಯ್ ಹಜಾರೆಯಂತಹ ಡೊಮೆಸ್ಟಿಕ್ ಟೂರ್ನಿಗಳಲ್ಲಿ ಅಂಪೈರ್‌ಗಳ ಕಡಿಮೆ ಸಂಬಳ ಪಡೆಯುತ್ತಾರೆ. ವಾಸ್ತವಾಗಿ ದೇಶಿಯ ಕ್ರಿಕೆಟ್ನಿಂದ ಬಿಸಿಸಿಐಗೆ ಬರುವ ಆದಾಯವೂ ಕಡಿಮೆಯಿರುವ ಕಾರಣ ಇದು ಅಂಪೈರ್‌ಗಳ ಸಂಬಳದ ಮೇಲೂ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಒಬ್ಬ ಗ್ರೇಡ್ ಎ ಅಂಪೈರ್ ದಿನಕ್ಕೆ ₹40,000 ಪಡೆದರೇ ಗ್ರೇಡ್ ಬಿ ಅಂಪೈರ್ ₹30,000 ಪಡೆಯುತ್ತಾರೆ. ಒಟ್ಟಾರೆ ನಾಲ್ಕು ದಿನಗಳ ಪಂದ್ಯಕ್ಕೆ ಅಂಪೈರ್‌ಗಳು ₹1.2 ಲಕ್ಷ ದಿಂದ ₹1.6 ಲಕ್ಷದ ವರೆಗೆ ಸಂಪಾದನೆ ಮಾಡುತ್ತಾರೆ.

ಐಪಿಎಲ್ ಸಂಬಳ: ಆದರೆ, ಐಪಿಎಲ್‌ನಲ್ಲಿ ಅಂಪೈರಿಂಗ್ ಮಾಡಿದರೆ ಹೆಚ್ಚಿನ ಸಂಬಳ ಸಿಗುತ್ತದೆ. ಆನ್ ಫೀಲ್ಡ್ ಅಂಪೈರ್‌ಗಳು ಪ್ರತಿ ಪಂದ್ಯಕ್ಕೆ ₹3 ಲಕ್ಷ ಪಡೆದರೇ ಮೂರನೇ ಮತ್ತು ನಾಲ್ಕನೇ ಅಂಪೈರ್ ₹2 ಲಕ್ಷ ಪಡೆಯುತ್ತಾರೆ. ಅದರಲ್ಲೂ ಪ್ಲೇ ಆಫ್ ಮತ್ತು ಫೈನಲ್ಗಳಲ್ಲಿ ಅಂಪೈರಿಂಗ್ಗೆ ಬೋನಸ್ ಕೂಡ ದೊರೆಯುತ್ತದೆ. ಐಪಿಎಲ್ ಎಲೈಟ್ ಅಂಪೈರ್ಗಳಾಗಿದ್ದರೆ ₹ 8.2 ಲಕ್ಷ ಬೋನಸ್ ಸಿಗುತ್ತದೆ. ದೇಶೀಯ ಕ್ರಿಕೆಟ್‌ನಲ್ಲಿ ಇಡೀ ವರ್ಷ ಆಡಿದರೂ, ಒಂದೂವರೆ ತಿಂಗಳ ಕಾಲ ನಡೆಯುವ ಐಪಿಎಲ್‌ನಲ್ಲಿ ಅಂಪೈರ್‌ಗಳು ಗಳಿಸುವ ಮೊತ್ತವನ್ನು ಗಳಿಸಲು ಸಾಧ್ಯವಿಲ್ಲ. ಆದರೆ, ಐಪಿಎಲ್‌ನಲ್ಲಿ ಕೇವಲ ನಾಲ್ಕು ಗಂಟೆಯ ಪಂದ್ಯದಲ್ಲಿ ಕೈ ತುಂಬ ಹಣ ಪಡೆಯುತ್ತಾರೆ.
ಇದನ್ನೂ ಓದಿ: ಶುಕ್ರವಾರದಿಂದ ಐಪಿಎಲ್ ಪುನರಾರಂಭ! ಪ್ಲೇಆಫ್ ಸನಿಹದಲ್ಲಿದ್ದ RCBಗೆ ಬಿಗ್ ಶಾಕ್