Virat kohli Runs Against Every Team In IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್ ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈವರೆಗೂ ಆಡಿರುವ 6 ಪಂದ್ಯಗಳಲ್ಲಿ 62ರ ಸರಾಸರಿಯಲ್ಲಿ 248 ರನ್ ಬಾರಿಸಿದ್ದಾರೆ. ಈ ಋತುವಿನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
ಐಪಿಎಲ್‌ನ ಮೊದಲ ಆವೃತ್ತಿಯಿಂದಲೂ ಆರ್ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ 8000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಹಾಗಾದ್ರೆ, ವಿರಾಟ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಯಾವ ತಂಡದ ವಿರುದ್ಧ ಎಷ್ಟು ರನ್ ಗಳಿಸಿದ್ದಾರೆ? ಒಟ್ಟಾರೆ, ಯಾವ ತಂಡ ವಿರುದ್ಧ ಅತಿ ಹೆಚ್ಚು ರನ್ ಕಲೆಹಾಕಿದ್ದಾರೆ ಎಂಬುದನ್ನು ನೋಡೋಣ.
ಚೆನ್ನೈ ಸೂಪರ್ ಕಿಂಗ್ಸ್ (CSK): ವಿರಾಟ್ ಕೊಹ್ಲಿ CSK ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಚೆನ್ನೈ ವಿರುದ್ಧ 1,084 ರನ್ ಗಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ (DC): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊಹ್ಲಿ 1,057 ರನ್ ಗಳಿಸಿದ್ದು, ಐಪಿಎಲ್ನಲ್ಲಿ ತಂಡವೊಂದರ ವಿರುದ್ಧ ಗಳಿಸಿರುವ ಎರಡನೇ ಅತೀ ಹೆಚ್ಚು ರನ್ ಇದಾಗಿದೆ.
ಪಂಜಾಬ್ ಕಿಂಗ್ಸ್ (PBKS): ಪಂಜಾಬ್ ವಿರುದ್ಧವೂ ವಿರಾಟ್ ಉತ್ತಮ ದಾಖಲೆ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಈ ತಂಡದ ವಿರುದ್ಧ 1,030 ರನ್ ಗಳಿಸಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ (KKR): ಈ ತಂಡದ ವಿರುದ್ದ ಕಿಂಗ್ ಕೊಹ್ಲಿ 1,021 ರನ್ ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ (MI): ಐಪಿಎಲ್‌ನ ಅತ್ಯಂತ ಯಶಸ್ವಿ ಮತ್ತು ಬಲಿಷ್ಠ ಬೌಲಿಂಗ್ ಮತ್ತು ಬ್ಯಾಟಿಂಗ್ ಪಡೆ ಹೊಂದಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಕೊಹ್ಲಿ 855 ರನ್ ಗಳಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ (RR): ರಾಜಸ್ಥಾನ ವಿರುದ್ಧ 764 ರನ್ ಗಳಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ರಾಜಸ್ಥಾನ ವಿರುದ್ಧ ಕೆಲವು ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದಾರೆ.
ಗುಜರಾತ್ ಟೈಟಾನ್ಸ್ (GT): 2022ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ವಿರುದ್ಧ ಕೊಹ್ಲಿ 351 ರನ್ ಗಳಿಸಿದ್ದಾರೆ.
ಡೆಕ್ಕನ್ ಚಾರ್ಜರ್ಸ್ (DC): ಡೆಕ್ಕನ್ ಚಾರ್ಜರ್ಸ್. ಸದ್ಯ ಈ ತಂಡ ಇಲ್ಲ. ಆದರೆ ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಕೊಹ್ಲಿ ಈ ತಂಡದ ವಿರುದ್ಧ 306 ರನ್‌ಗಳನ್ನು ಗಳಿಸಿದ್ದರು.
ಗುಜರಾತ್ ಲಯನ್ಸ್ (GL): ಗುಜರಾತ್ ಲಯನ್ಸ್ ತಂಡ 2016 ಮತ್ತು 2017ರ ಎರಡು ಋತುಗಳಲ್ಲಿ ಐಎಲ್ನ ಭಾಗವಾಗಿತ್ತು. ಕೊಹ್ಲಿ ಈ ತಂಡದ ವಿರುದ್ಧ 283 ರನ್ ಗಳಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ (LSG): ಲಕ್ನೋ ಸೂಪರ್ ಜೈಂಟ್ಸ್ ಕೂಡ ಇತ್ತೀಚೆಗೆ ಐಪಿಎಲ್‌ಗೆ ಸೇರ್ಪಡೆಯಾಗಿರುವ ತಂಡವಾಗಿದೆ. ಈ ತಂಡದ ವಿರುದ್ಧ ಕೊಹ್ಲಿ 139 ರನ್ ಗಳಿಸಿದ್ದಾರೆ.
ಪುಣೆ ವಾರಿಯರ್ಸ್ ಇಂಡಿಯಾ (PW): ಪುಣೆ ವಾರಿಯರ್ಸ್ 2011 ಮತ್ತು 2014ರಲ್ಲಿ ಐಪಿಎಲ್ನಲ್ಲಿದ್ದ ಈ ತಂಡದ ವಿರುದ್ಧ ವಿರಾಟ್ 128 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಈವರೆಗೂ ಎಷ್ಟು ಸೂಪರ್ ಓವರ್ ಪಂದ್ಯಗಳು ನಡೆದಿವೆ?; RCB ಎಷ್ಟು ಬಾರಿ ಗೆದ್ದಿದೆ?