ETV Bharat / sports

ಶಾಕಿಂಗ್​ ನ್ಯೂಸ್​: ಐಪಿಎಲ್​ನಿಂದ ಹೊರಬಿದ್ದ ಡೇಂಜರಸ್​​ ಆಲ್​​ರೌಂಡರ್​​ ; ಏನಾಯ್ತು? - IPL 2025

ಸತತ ಗೆಲುವಿನ ಓಟ ಮುಂದುವರೆಸಿರುವ ಗುಜರಾತ್​ ಟೈಟಾನ್ಸ್​ ತಂಡಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ.

Glenn Phillips injury  Gujarat Titans  ಐಪಿಎಲ್​ 2025  Glenn Phillips ruled out
ಸಾಂದರ್ಭಿಕ ಚಿತ್ರ (IANS)
author img

By ETV Bharat Sports Team

Published : April 12, 2025 at 12:46 PM IST

Updated : April 12, 2025 at 1:24 PM IST

1 Min Read

ಐಪಿಎಲ್​ 2025ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಗುಜರಾತ್​ ಟೈಟಾನ್ಸ್​ ತಂಡಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ತಂಡದ ಸ್ಟಾರ್​ ಆಲ್​ರೌಂಡರ್​ ಐಪಿಎಲ್​ನಿಂದ ಹೊರಬಿದ್ದಿದ್ದಾರೆ.

ಪಾಯಿಂಟ್ಸ್​ ಪಟ್ಟಿಯಲ್ಲಿ ಗುಜರಾತ್​​ ಟೈಟನ್ಸ್​​​​​​​​ಗೆ ಅಗ್ರ ಸ್ಥಾನ: ಈ ಋತುವಿನಲ್ಲಿ ಈ ವರೆಗೂ ಆಡಿರುವ ಐದು ಪಂದ್ಯಗಳಲ್ಲಿ ಗುಜರಾತ್​ ಟೈಟಾನ್ಸ್​ ತಂಡ 4 ರಲ್ಲಿ ಗೆಲುವು ಸಾಧಿಸಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು ಕಂಡಿದೆ. ಜೊತೆಗೆ ಪಾಯಿಂಟ್ಸ್​ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದೆ. ಇಂದು ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಕದನಕ್ಕಿಳಿಯಲಿದೆ. ಇದರ ನಡುವೆಯೆ ಗುಜರಾತ್​ ತಂಡಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ತಂಡದ ಸ್ಟಾರ್​ ಆಲ್​ರೌಂಡರ್​ ಆಗಿರುವ ಗ್ಲೆನ್​ ಫೀಲಿಪ್ಸ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

ಫಿಲಿಪ್ಸ್​ ನಿರ್ಗಮನದ ಬಗ್ಗೆ ಫ್ರಾಂಚೈಸಿಯಿಂದ ಇಲ್ಲ ಯಾವುದೇ ಸ್ಪಷ್ಟನೆ: ತಂಡದಿಂದ ಫಿಲಿಪ್ಸ್​ ಹಠಾತ್ ನಿರ್ಗಮನದ ಬಗ್ಗೆ ಫ್ರಾಂಚೈಸಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ಫಿಲಿಪ್ಸ್​ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಏಪ್ರಿಲ್​ 6ರಂದು ಸನ್​ರೈಸರ್ಸ್​ ಹೈದರಾಬಾದ್​ ವಿರುದ್ದದ ಪಂದ್ಯದ ವೇಳೆ ಸಬ್​ಸ್ಟಿಟ್ಯೂಟ್​ ಆಟಗಾರನಾಗಿ ಫೀಲ್ಡಿಂಗ್​ಗೆ ಬಂದಿದ್ದ ಫೀಲಿಪ್ಸ್​ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ಇದೀಗ ನೋವು ತೀವ್ರಗೊಂಡಿರುವ ಕಾರಣ ಮನೆಗೆ ವಾಪಸ್​​ ಆಗಿದ್ದಾರೆ.

ನ್ಯೂಜಿಲೆಂಡ್​ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಲ್​ರೌಂಡರ್​; 28 ವರ್ಷದ ಈ ಆಲ್‌ರೌಂಡರ್ ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ ನ್ಯೂಜಿಲೆಂಡ್‌ನ ಈ ಆಟಗಾರ ಕೆಲ ಅತ್ಯುತ್ತಮ ಕ್ಯಾಚ್‌ಗಳನ್ನು ಪಡೆದು ಎಲ್ಲರಿಗೂ ಆಶ್ವರ್ಯ ಪಡಿಸಿದ್ದರು.

ಐಪಿಎಲ್​​ನ ಈ ಋತುವಿನಲ್ಲಿ ಯಾವುದೇ ಪಂದ್ಯ ಆಡದ ಆಟಗಾರ: ಐಪಿಎಲ್​ನಲ್ಲಿ ಈ ಋತುವಿನಲ್ಲಿ ಫಿಲಿಪ್ಸ್ ಟೈಟಾನ್ಸ್ ತಂಡದ ಪರ ಯಾವುದೇ ಪಂದ್ಯಗಳನ್ನು ಆಡಿಲ್ಲ. ಇದೀಗ ಅವರ ಸ್ಥಾನದಲ್ಲಿ ಬದಲಿ ಆಟಗಾರನನ್ನು ಫ್ರಾಂಚೈಸಿ ಹುಡುಕುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಬಾರಿಯ ಐಪಿಎಲ್​ ಮೆಗಾ ಹರಾಜಿನಲ್ಲಿ ಕಿವೀಸ್​ ಆಲ್​ರೌಂಡರ್​ ಗ್ಲೆನ್​ ಫಿಲಿಪ್ಸ್​ ಅನ್ನು ಗುಜರಾತ್​ ಟೈಟಾನ್ಸ್​ ತಂಡ ₹2 ಕೋಟಿ ಬೆಲೆಗೆ ಖರೀದಿಸಿತ್ತು. ಒಟ್ಟಿನಲ್ಲಿ ಹಠಾತ್​ ನಿರ್ಗಮನ ಹಲವು ಚರ್ಚೆಗಳಿಗೆ ಕಾರಣವಾಗಿದ್ದಂತೂ ಸುಳ್ಳಲ್ಲ.

ಇದನ್ನೂ ಓದಿ: ಐದು ಬಾರಿಯ ಚಾಂಪಿಯನ್​ ಸಿಎಸ್​ಕೆ ಖಾತೆಗೆ ಮೂರು ಅತಿ ಕೆಟ್ಟ ದಾಖಲೆಗಳು ಸೇರ್ಪಡೆ!

Last Updated : April 12, 2025 at 1:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.