IPL 20th Over Maiden: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಬೌಲರ್ಗಳಿಗಿಂತ ಬ್ಯಾಟರ್ಗಳ ಅಬ್ಬರವೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ಗಳನ್ನು ನಿರ್ಮಿಸಿ ಪಂದ್ಯಗಳನ್ನು ನಡೆಸಲಾಗುತ್ತಿದೆ ಎಂಬ ಕೂಗುಗಳು ಕೇಳಿ ಬರುತ್ತಿವೆ. ಇದರಿಂದ ವಿಶ್ವದ ಶ್ರೇಷ್ಠ ಬೌಲರ್ಗಳು ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಅದರಲ್ಲೂ ಐಪಿಎಲ್‌ನಲ್ಲಿ ಮೇಡನ್ ಓವರ್ ಮಾಡುವುದು ಕೂಡ ಅಪರೂಪವಾಗಿದೆ. ಆದರೆ, ನಿಮಗೆ ಗೊತ್ತಾ ಈ ಹಿಂದೆ ಕೆಲ ಬೌಲರ್ಗಳು ಕೊನೆಯ ಓವರ್ನಲ್ಲಿ ಮೇಡನ್ ಮಾಡಿದ್ದಾರೆ.
ಸಾಮಾನ್ಯವಾಗಿ ಕೊನೆಯ ಓವರ್ನಲ್ಲಿ ಬೌಲರ್ಗಳ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವುದನ್ನು ತಡೆಯುವುದು ಅತ್ಯಂತ ಕಷ್ಟಕರವಾದ ಕೆಲಸ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಬೌಲರ್‌ಗೆ 20ನೇ ಓವರ್ ಬೌಲಿಂಗ್ ಮಾಡುವುದು ಸುಲಭದ ಮಾತಲ್ಲ. ಆದರೆ, ನಾಲ್ವರು ಬೌಲರ್ಗಳು 20ನೇ ಓವರ್ನಲ್ಲೂ ಮೇಡನ್ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ನಾಲ್ವರು ಬೌಲರ್ ಯಾರು ಎಂದು ಇದೀಗ ತಿಳಿದುಕೊಳ್ಳೋಣ.
1) ಇರ್ಫಾನ್ ಪಠಾಣ್: ಐಪಿಎಲ್ ಇತಿಹಾಸದಲ್ಲಿ, 20ನೇ ಓವರ್ ಮೇಡನ್ ಮಾಡಿದ ಮೊದಲ ಬೌಲರ್ ಆಗಿದ್ದಾರೆ. 2008 ರಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಪಠಾಣ್ ಈ ಸಾಧನೆ ಮಾಡಿದ್ದರು. ಆ ಸಮಯದಲ್ಲಿ ಪಠಾಣ್ ಪಂಜಾಬ್ ತಂಡದ ಭಾಗವಾಗಿದ್ದರು. ಪಠಾಣ್ ಐಪಿಎಲ್‌ನಲ್ಲಿ 103 ಪಂದ್ಯಗಳನ್ನು ಆಡಿದ್ದು, 80 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

2) ಲಸಿತ್ ಮಾಲಿಂಗ: ಶ್ರೀಲಂಕಾದ ಸ್ಟಾರ್ ವೇಗದ ಬೌಲರ್ ಲಸಿತ್ ಮಾಲಿಂಗ ಅವರನ್ನು ಐಪಿಎಲ್‌ನ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಮುಂಬೈ ತಂಡದ ಪರ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಮಾಲಿಂಗ 122 ಐಪಿಎಲ್ ಪಂದ್ಯಗಳನ್ನು ಆಡಿ 170 ವಿಕೆಟ್‌ಗಳನ್ನು ಪಡೆದಿದ್ದಾರೆ. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಮಾಲಿಂಗ 20ನೇ ಓವರ್ ಮೇಡನ್ ಬೌಲಿಂಗ್ ಮಾಡಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.

3) ಜಯದೇವ್ ಉನದ್ಕತ್: ಜಯದೇವ್ ಉನದ್ಕತ್ 2017ರಲ್ಲಿ ಪುಣೆ ತಂಡವನ್ನು ಪ್ರತಿನಿಧಿಸುವಾಗ ಹೈದರಾಬಾದ್ ವಿರುದ್ಧ 20ನೇ ಓವರ್ ಮೇಡನ್ ಬೌಲಿಂಗ್ ಮಾಡಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಮೇಡನ್ ಜೊತೆಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

4) ಉಮ್ರಾನ್ ಮಲಿಕ್: 2022ರಲ್ಲಿ ಹೈದರಾಬಾದ್ ತಂಡ ಪ್ರತಿನಿಧಿಸಿದ್ದ ಉಮ್ರಾನ್ ಇನ್ನಿಂಗ್ನ ಕೊನೆಯ ಓವರ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದರು. ಅಲ್ಲದೇ ಒಂದೇ ಒಂದು ರನ್ ನೀಡಿರಲಿಲ್ಲ. ಈ ಸಾಧನೆಗಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯು ಸಿಕ್ಕಿತ್ತು.
ಇದನ್ನೂ ಓದಿ: ಪ್ಲೇ ಆಫ್ ತಲುಪಿದ ಖುಷಿಯಲ್ಲಿರುವ ಆರ್ಸಿಬಿಗೆ ಮತ್ತೊಂದು ಲಾಟರಿ!