ETV Bharat / sports

'ಕೂಡಲೇ ಎಚ್ಚೆತ್ತುಕೊಳ್ಳಿ, ಇಲ್ಲದಿದ್ರೆ': ಭಾರತದ ಯುವ ಕ್ರಿಕೆಟಿಗನಿಗೆ ಪಾಕ್ ಮಾಜಿ ಕ್ರಿಕೆಟಿಗನ ಕಿವಿಮಾತು - IPL 2025

ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಟೀಂ ಇಂಡಿಯಾದ ಯುವ ಆಟಗಾರನಿಗೆ ಎಚ್ಚರಿಕೆ ನೀಡಿದ್ದಾರೆ.

YASHASVI JAISWAL  BASIT ALI  ಐಪಿಎಲ್​ 2025  RAJASTHAN ROYALS  IPL 2025
ಯಶಸ್ವಿ ಜೈಸ್ವಾಲ್ (IANS)
author img

By ETV Bharat Sports Team

Published : April 10, 2025 at 8:49 PM IST

Updated : April 10, 2025 at 9:10 PM IST

1 Min Read

ಎರಡು ವರ್ಷಗಳ ಹಿಂದೆ ತನ್ನ ಅದ್ಭುತ ಪ್ರದರ್ಶನದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದ ಟೀಮ್ ಇಂಡಿಯಾದ ಯುವ ತಾರೆ ಯಶಸ್ವಿ ಜೈಸ್ವಾಲ್ ಪ್ರಸ್ತುತ ಫಾರ್ಮ್‌ನಲ್ಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ರನ್ ಗಳಿಸಲು ಅವರು ಕಷ್ಟಪಡುತ್ತಿದ್ದಾರೆ.

ಪ್ರಸ್ತುತ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಯುವ ಬ್ಯಾಟರ್ ಹೆಚ್ಚು ಪ್ರಭಾವ ಬೀರುತ್ತಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 67 ರನ್‌ಗಳನ್ನು ಹೊರತುಪಡಿಸಿ, ಉಳಿದ ಪಂದ್ಯಗಳಲ್ಲಿ ಅವರ ಬ್ಯಾಟ್​ನಿಂದ ದೊಡ್ಡ ಸ್ಕೋರ್‌ ಹರಿದು ಬಂದಿಲ್ಲ. ಈ ಸಂದರ್ಭದಲ್ಲಿ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಪ್ರತಿಕ್ರಿಯಿಸಿ, ಜೈಸ್ವಾಲ್‌ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

"ಯಶಸ್ವಿ ಜೈಸ್ವಾಲ್ ಕ್ರಿಕೆಟ್ ಮೇಲೆ ಸರಿಯಾಗಿ ಗಮನಹರಿಸುತ್ತಿಲ್ಲ. ಇದು ಹೀಗೇ ಮುಂದುವರಿದರೆ, ಭವಿಷ್ಯದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ. ಪೃಥ್ವಿ ಶಾ ಇದಕ್ಕೆ ಉತ್ತಮ ಉದಾಹರಣೆ. ಜೈಸ್ವಾಲ್ ಕ್ರಿಕೆಟ್ ಕೈ ತಪ್ಪುವ ಮುನ್ನ ಅದನ್ನು ಪ್ರೀತಿಸಿ. "ನಿಮ್ಮ ಫಾರ್ಮ್ ಅನ್ನು ಮರಳಿ ಪಡೆಯಿರಿ" ಎಂದು ಬಸಿತ್ ಅಲಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎಚ್ಚರಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20ಗಳಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯ ಬಗ್ಗೆಯೂ ಬಸಿತ್ ಅಲಿ ಮಾತನಾಡಿದರು.

"ಭಾರತ 2024ರ ಟಿ20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ಸ್ವರೂಪದಿಂದ ನಿವೃತ್ತಿ ಘೋಷಿಸಿದರು. ಇದು ಒಳ್ಳೆಯ ನಿರ್ಧಾರ. ಭಾರತದಲ್ಲಿ ಪ್ರತಿಭಾನ್ವಿತ ಯುವ ಕ್ರೀಡಾಪಟುಗಳಿಗೆ ಕೊರತೆಯಿಲ್ಲ. ಟೀಮ್ ಇಂಡಿಯಾವನ್ನು ಕಾಲಕಾಲಕ್ಕೆ ಬದಲಾಯಿಸಲಾಗುತ್ತದೆ. ಆದರೆ ಕೊಹ್ಲಿ ಟಿ20ಗಳಿಗೆ ಇಷ್ಟು ಬೇಗ ವಿದಾಯ ಹೇಳುತ್ತಾರೆಂದು ನಾನು ಭಾವಿಸಿರಲಿಲ್ಲ" ಎಂದು ಅವರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಶಾಕಿಂಗ್​ ನ್ಯೂಸ್​: ಐಪಿಎಲ್​ನಿಂದ ₹18 ಕೋಟಿ ಬೆಲೆಯ ಸ್ಟಾರ್​ ಆಟಗಾರ ಔಟ್​!: ಏನಾಯ್ತು?

Last Updated : April 10, 2025 at 9:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.