DC vs RCB Match: ಐಪಿಎಲ್ನಲ್ಲಿ ಭಾನುವಾರ ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿ ಆದರೇ, ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರು ಬದುರಾಗುತ್ತಿವೆ.
ಈ ಎರಡೂ ತಂಡಗಳು 18ನೇ ಋತುವಿನ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು ಅಂಕಪಟ್ಟಿಯಲ್ಲೂ ಅಗ್ರ ನಾಲ್ಕು ಸ್ಥಾನಗಳಲ್ಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಈವರೆಗೂ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿ 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೇ, ಬೆಂಗಳೂರು ಕೂಡ 6 ಪಂದ್ಯಗಳನ್ನು ಗೆದ್ದುಕೊಂಡು 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
𝐄𝐥𝐞𝐠𝐚𝐧𝐭
— Delhi Capitals (@DelhiCapitals) April 25, 2025
ˈए̮लिगन्ट्
adjective
a.k.a Karun Nair 💙✨ pic.twitter.com/tkDzo3vMeA
ಇದೀಗ ಡೆಲ್ಲಿ ತಂಡವನ್ನು ಅವರದ್ದೆ ತವರಿನಲ್ಲಿ ಮಣಿಸಿಸಲು ಮುಂದಾಗಿದೆ. ಇದರೊಂದಿಗೆ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು ಮಣಿಸಿದ್ದ ಡೆಲ್ಲಿಯನ್ನು ಎರಡನೇ ಪಂದ್ಯದಲ್ಲಿ ಸೋಲಿಸಿ ಸೇಡು ತೀರಿಸಿಕೊಳ್ಳಲು ರಜತ್ ಪಾಟಿದಾರ್ ಸೈನ್ಯ ಸಜ್ಜಾಗಿದೆ. ಜೊತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದ ಮೇಲೂ ಕಣ್ಣಿಟ್ಟಿದೆ. ಇದಕ್ಕಾಗಿ ಬಲಿಷ್ಠ ತಂಡವನ್ನು ಕಣಕ್ಕಿಳಿಸುತ್ತಿದೆ.
DC vs RCB ಹೆಡ್ ಟು ಹೆಡ್ ದಾಖಲೆ: ಉಭಯ ತಂಡಗಳು ಐಪಿಎಲ್ನಲ್ಲಿ ಈವರೆಗೂ 32 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಡೆಲ್ಲಿ ತಂಡ ಪ್ರಾಬಲ್ಯ ಸಾಧಿಸಿದೆ. ಆರ್ಸಿಬಿ ವಿರುದ್ಧ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆರ್ಸಿಬಿ ತಂಡ ಡೆಲ್ಲಿ ವಿರುದ್ಧ 12 ಪಂದ್ಯಗಳನ್ನು ಗೆದ್ದುಕೊಂಡಿದೆ. 1 ಪಂದ್ಯ ರದ್ದುಗೊಂಡಿದೆ.
That playlist always hits different 😂📻 pic.twitter.com/Gfkcr2ZNjQ
— Delhi Capitals (@DelhiCapitals) April 25, 2025
ಹೈಸ್ಕೋರ್-ಕಡಿಮೆ ಸ್ಕೋರ್: ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 215ರನ್ ಕಲೆಹಾಕಿದ್ದು ಈವರೆಗಿನ ಹೈಸ್ಕೋರ್ ಆಗಿದೆ. 137 ಕಡಿಮೆ ಸ್ಕೋರ್ ಆಗಿದೆ. ಡೆಲ್ಲಿ ವಿರುದ್ಧ ಆರ್ಸಿಬಿಯ196 ಹೈಸ್ಕೋರ್ ಆಗಿದ್ದರೆ, 95 ಕನಿಷ್ಠ ಸ್ಕೋರ್ ಆಗಿದೆ.
Dots to dry up runs. Maximum control! 🔐
— Royal Challengers Bengaluru (@RCBTweets) April 26, 2025
That’s how Suyash rolled. 😵💫#PlayBold #ನಮ್ಮRCB #IPL2025 pic.twitter.com/kdGnvhIRUX
ಸ್ಫೋಟಕ ಹಿಟ್ಟರ್ ಸಜ್ಜು: ನಾಳೆಯ ಪಂದ್ಯವನ್ನು ಗೆಲ್ಲಲು ಯೋಜನೆ ರೂಪಿಸಿಕೊಂಡಿರುವ ಆರ್ಸಿಬಿ, ತಂಡದಲ್ಲಿ ಬದಲಾವಣೆ ಮಾಡಲು ಬಯಸಿದರೆ, ರೊಮೆರಿಯಿ ಶೆಫರ್ಡ್ ಸ್ಥಾನಕ್ಕೆ ಜೇಕಬ್ ಬೆಥೆಲ್ ಅವರನ್ನು ಕರೆತರಬಹುದು ಅಥವಾ ಲಿವಿಂಗ್ಸ್ಟೋನ್ಗೆ ಕಣಕ್ಕಿಳಿಸಬಹುದಾಗಿದೆ.
ಸಂಭಾವ್ಯ ತಂಡಗಳು - ಆರ್ಸಿಬಿ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್/ಜೇಕಬ್ ಬೆಥೆಲ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
Steady when needed, storming when called for! 🤝
— Royal Challengers Bengaluru (@RCBTweets) April 26, 2025
Virat and Dev, the perfect match for any situation, and we’re loving every moment of this ride! 🙌#PlayBold #ನಮ್ಮRCB #IPL2025 pic.twitter.com/pVHpdaHqyV
ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ದುಷ್ಮಂತ ಚಮೀರಾ, ಮುಖೇಶ್ ಕುಮಾರ್.
ಪಂದ್ಯ ಪ್ರಾರಂಭ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್
ಇದನ್ನೂ ಓದಿ: ಆರ್ಸಿಬಿಯ ಆ ಪ್ಲಾನ್ ಅನುಸರಿಸಿ ಪ್ಲೇಆಫ್ಗೆ ತಲುಪುತ್ತೇವೆ, ಬೆಂಗಳೂರು ತಂಡವೇ ನಮಗೆ ಸ್ಪೂರ್ತಿ: ನಿತೀಶ್ ರೆಡ್ಡಿ!