ಐಪಿಎಲ್ನಲ್ಲಿ ಐದು ಟ್ರೋಫಿಗಳನ್ನು ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಋತುವಿನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿದ್ದ ಸಿಎಸ್‌ಕೆ ಬಳಿಕ ಆಡಿರುವ ಐದು ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಶುಕ್ರವಾರ ಚೆಪಾಕ್‌ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಹೀನಾಯವಾಗಿ ಸೋಲನ್ನು ಕಂಡಿದೆ. ಈ ಪಂದ್ಯದಲ್ಲಿ ಕೆಕೆಆರ್ ದಾಳಿಗೆ ಸಿಲುಕಿದ ಚೆನ್ನೈ 103 ರನ್ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡ ಸುನಿಲ್ ನರೈನೆ ಬ್ಯಾಟಿಂಗ್ ಸಹಾಯದಿಂದ 10.1 ಓವರ್ನಲ್ಲೆ ಗೆಲುವಿನ ದಡ ಸೇರಿಕೊಂಡಿತು. ಕೆಕೆಆರ್ ವಿರುದ್ಧ ಚೆನ್ನೈ ಸೋಲನು ಭವಿಸುತ್ತಿದ್ದಂತೆ ಸಿಎಸ್‌ಕೆ ಖಾತೆಗ ಅತ್ಯಂತ ಕೆಟ್ಟ ದಾಖಲೆಗಳು ಸೇರ್ಪಡೆಯಾಗಿವೆ.
🚨 CSK LOSE 3 CONSECUTIVE MATCHES AT THE CHEPAUK FOR THE FIRST TIME IN HISTORY. 🚨 pic.twitter.com/3qq48TOYOD
— Mufaddal Vohra (@mufaddal_vohra) April 11, 2025
ಸಿಎಸ್‌ಕೆ ಖಾತೆಗೆ ಕೆಟ್ಟ ದಾಖಲೆ: ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ತಂಡ ಸತತ ಐದು ಪಂದ್ಯಗಳಲ್ಲಿ ಸೋತಿರುವುದು ಇದೆ ಮೊದಲು. ಅಲ್ಲದೆ ತವರು ಮೈದಾನ ಚೆಪಾಕ್‌ನಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತಿದ್ದು ಕೂಡ ಇದೆ ಮೊದಲಾಗಿದೆ.
Clinical with the ball, fiery with the bat 🫡 🔥
— IndianPremierLeague (@IPL) April 11, 2025
A superb all-round performance earns Sunil Narine the Player of the Match award 🔝
Scorecard ▶ https://t.co/gPLIYGimQn#TATAIPL | #CSKvKKR pic.twitter.com/ofafkXbOUO
ನಿನ್ನೆ ಕೆಕೆಆರ್ ತಂಡ ಇನ್ನೂ 59 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದು ಕೊಂಡಿದೆ. ಇದು ಐಪಿಎಲ್ನಲ್ಲಿ ಚೆನ್ನೈ ತಂಡದ ಅತ್ಯಂತ ಹೀನಾಯ ಸೋಲಾಗಿದೆ. ಇಷ್ಟು ಹೀನಯಾವಾಗಿ ಸೋತಿದ್ದು ಚೆನ್ನೈ ಇದೆ ಮೊದಲಾಗಿದೆ.
Game set and done in a thumping style ✅@KKRiders with a 𝙆𝙣𝙞𝙜𝙝𝙩 to remember as they secure a comprehensive 8️⃣-wicket victory 💜
— IndianPremierLeague (@IPL) April 11, 2025
Scorecard ▶ https://t.co/gPLIYGiUFV#TATAIPL | #CSKvKKR pic.twitter.com/dADGcgITPW
ಏತನ್ಮಧ್ಯೆ, ಚೆನ್ನೈ ತಂಡವು ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಉಳಿದ ಎಂಟು ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇವುಗಳಲ್ಲಿ ಒಂದೇ ಒಂದು ಪಂದ್ಯ ಸೋತರು ಪ್ಲೇಆಫ್ ಹಾದಿ ಕಠಿಣವಾಗಲಿದೆ. ಆಗ ಇತರೆ ತಂಡಗಳ ಫಲಿತಾಂಶ ಆಧರಿಸಬೇಕಾಗುತ್ತದೆ.
ಇದನ್ನೂ ಓದಿ: ಐಪಿಎಲ್ ನಿಂದ ಹೊರಬಿದ್ದ ಬೆನ್ನಲ್ಲೆ ಗಾಯಕ್ವಾಡ್, ಧೋನಿ ಕುರಿತು ನೀಡಿರುವ ಹೇಳಿಕೆ ವೈರಲ್!