ETV Bharat / sports

ಭದ್ರತಾ ಸಿಬ್ಬಂದಿಯನ್ನು ತಡೆದು ವಿಶೇಷಚೇತನ ಮಹಿಳೆಗೆ ಸೆಲ್ಫಿ ನೀಡಿದ ಧೋನಿ - MS DHONI

ಎಂ​.ಎಸ್.ಧೋನಿ ವಿಶೇಷಚೇತನ ಮಹಿಳೆಗೆ ಸೆಲ್ಫಿ ನೀಡಿದ ಗಮನ ಸೆಳೆದಿದ್ದಾರೆ.

Dhoni Selfie viral video  MI vs CSK Match  Dhoni Viral Video
ಎಂ​.ಎಸ್.ಧೋನಿ (Photo: AP)
author img

By ETV Bharat Sports Team

Published : April 18, 2025 at 6:00 PM IST

1 Min Read

ಎಂ​.ಎಸ್.ಧೋನಿ ಸದ್ಯ ಐಪಿಎಲ್​ನಲ್ಲಿ ಬ್ಯುಸಿ ಆಗಿದ್ದಾರೆ. ಋತುರಾಜ್ ಗಾಯಕ್ವಾಡ್​ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಲಕ್ನೋ ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಾಹಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್​ಕೆ ತನ್ನ ಮುಂದಿನ ಪಂದ್ಯ ಆಡಲಿದೆ. ಏತನ್ಮಧ್ಯೆ, ಧೋನಿ ಅವರ ವಿಡಿಯೋವೊಂದು ವೈರಲ್​ ಆಗಿದ್ದು, ಫ್ಯಾನ್ಸ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಧೋನಿ ಮುಂಬೈಗೆ ತೆರಳಲು ಏರ್ಪೋಟ್​ಗೆ ಆಗಮಿಸಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ವಿಶೇಷಚೇತನ ಮಹಿಳೆಯೊಬ್ಬರು ತಮ್ಮ ಫೋನ್ ತೋರಿಸಿ ಸೆಲ್ಫಿ ಕೇಳಿದ್ದಾರೆ. ಈ ವೇಳೆ ಧೋನಿ ಕೂಡಲೇ ಭದ್ರತಾ ಸಿಬ್ಬಂದಿಯನ್ನು ಪಕ್ಕಕ್ಕೆ ಸರಿಸಿ ಆ ಮಹಿಳೆಯ ಬಳಿ ಹೋಗಿ ಸೆಲ್ಫಿ ನೀಡಿದರು.

ಸಿಎಸ್​ಕೆ IPL ಪ್ರದರ್ಶನ ಹೇಗಿದೆ?: ಈ ಋತುವಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಈವರೆಗೂ ಆಡಿರುವ 7 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದ ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಸದ್ಯ ಸಿಎಸ್​ಕೆ ತಂಡದ ಪ್ಲೇ ಆಫ್​ ಹಾದಿಯು ಕಠಿಣವಾಗಿದೆ.

ಪ್ಲೇ ಆಫ್​ಗೆ ತಲುಪಬೇಕೆಂದರೆ ಉಳಿದಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ. ಒಂದು ವೇಳೆ ಸೋತರೆ ಮತ್ತೊಂದು ತಂಡದ ಪಲಿತಾಂಶವನ್ನು ಆಧರಿಸಬೇಕಾಗುತ್ತದೆ. ಸದ್ಯ ಅಂಕಪಟ್ಟಿಯಲ್ಲಿ ಚೆನ್ನೈ 4 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.