ETV Bharat / sports

ನಂಬಿಕೆ ಮುಖ್ಯ..! ಕೊಹ್ಲಿಗೆ ಆ ದಿನ ಕಳುಹಿಸಿದ್ದ ಮೆಸೇಜ್​ ಬಗ್ಗೆ ಧೋನಿ ಹೀಗೇಳಿದ್ದೇಕೆ? - MS DHONI

ವಿರಾಟ್​ ಕೊಹ್ಲಿ ಜೊತೆಗಿನ ತಮ್ಮ ಫ್ರೆಂಡ್​ಶಿಪ್​ ಬಗ್ಗೆ ಎಮ್​ ಎಸ್​ ಧೋನಿ ಮನಬಿಚ್ಚಿ ಮಾತನಾಡಿದ್ದಾರೆ.

Virat Kohli  Ms Dhoni on Virat Kholi  ಐಪಿಎಲ್​ IPL 2025
Virat kohli and MS Dhoni (ANI)
author img

By ETV Bharat Sports Team

Published : March 24, 2025 at 3:50 PM IST

2 Min Read

Ms Dhoni: ಮೂರು ವರ್ಷಗಳ ಹಿಂದೆ, ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಕಳೆದುಕೊಂಡ ಬಳಿಕ ಭಾರೀ ಟೀಕೆಗೆ ಗುರಿಯಾಗಿದ್ದರು. ಕಳಪೆ ಫಾರ್ಮ್​ನಿಂದಾಗಿ ಟಿ20 ನಾಯಕತ್ವವನ್ನು ತೊರೆದ ಕೊಹ್ಲಿ ಬಳಿಕ ಏಕದಿನ ಮತ್ತು ಟೆಸ್ಟ್ ನಾಯಕತ್ವದಿಂದಲೂ ಕೆಳಗಿಳಿದಿದ್ದರು. ಇಂತಹ ಕಷ್ಟದ ಸಮಯದಲ್ಲಿ ಎಂಎಸ್ ಧೋನಿ ಮಾತ್ರ ನನಗೆ ಮೆಸೆಜ್​ ಮಾಡಿ ಬೆಂಬಲಿಸಿದ್ದರು ಎಂದು ವಿರಾಟ್ ಹಲವಾರು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.

ಆದರೆ, ಅಂದು ಧೋನಿ ಮಾಡಿದ್ದ ಮೆಸೆಜ್​ ಏನು ಎಂಬುದರ ಬಗ್ಗೆ ಕೊಹ್ಲಿ ಬಹಿರಂಗಪಡಿಸಿರಲಿಲ್ಲ. ಆದರೆ ಇದಕ್ಕೆ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಧೋನಿಗೆ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಮೇಲೆ ಅಂದು ನೀವು ಅವರಿಗೆ ಕಳುಹಿಸಿದ್ದ ಸಂದೇಶ ಏನು ಎಂದು ಧೋನಿಯನ್ನು ಕೇಳಿದಾಗ ಅದನ್ನು ತಿರಸ್ಕರಿಸಿದ ಧೋನಿ ತಮ್ಮ ನಡುವಿನ ಸ್ನೇಹ ಸಂಬಂಧದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

"ನಾನು ನಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಮಾತ್ರ ಮಾತನಾಡುತ್ತೇನೆ." ಆ ದಿನ ಕಳುಹಿಸಿದ ಸಂದೇಶದ ಬಗ್ಗೆ ಅಲ್ಲ. ಅದನ್ನು ಖಾಸಗಿಯಾಗಿ ಇಡಬೇಕು ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಕೆಲ ಆಟಗಾರರು ನನ್ನ ಬಳಿ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ.

"ನನಗೆ ಏನೇ ಹೇಳಿದರೂ ಅದು ಮೂರನೇ ವ್ಯಕ್ತಿಗೆ ತಿಳಿಯುವುದಿಲ್ಲ ಎಂದು ಅವರಿಗೆ ಚೆನ್ನಾಗಿ ಗೊತ್ತು. ಇಲ್ಲಿ ನಂಬಿಕೆ ಬಹಳ ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ, ಯಾರಾದರೂ ನಮ್ಮೊಂದಿಗೆ ಆಟವಾಡದಿದ್ದರೂ ಅಥವಾ ಎಂದಿಗೂ ಆಟವಾಡಲು ಅವಕಾಶ ಸಿಗದಿದ್ದರೂ ಸಹ, ಭವಿಷ್ಯದಲ್ಲಿ ಅವರಿಗೆ ಸ್ವಲ್ಪ ಸಹಾಯ ಬೇಕಾಗಬಹುದು. ಅದು ಕ್ರಿಕೆಟ್ ಬಗ್ಗೆಯಾಗಲಿ ಅಥವಾ ಜೀವನದ ಬಗ್ಗೆಯಾಗಲಿ. "ಅದಕ್ಕಾಗಿಯೇ ನಾವು ಮಾತನಾಡಿದ ವಿಷಯಗಳನ್ನು ಖಾಸಗಿಯಾಗಿ ಇಡಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಧೋನಿ ತಿಳಿಸಿದರು.

"ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಆರಂಭದಿಂದಲೂ ನನ್ನೊಂದಿಗೆ ಆಡಿದ್ದಾರೆ. ಅವರು ಕೇವಲ 40 ಅಥವಾ 50 ರನ್ ಗಳಿಸುವುದರಿಂದ ತೃಪ್ತರಾಗುವ ವ್ಯಕ್ತಿಯಲ್ಲ. ಶತಕ ಬಾರಿಸಿ ಕೊನೆಯವರೆಗೂ ಕ್ರೀಸ್‌ನಲ್ಲಿ ಇದ್ದು ಪಂದ್ಯ ಗೆಲ್ಲಿಸಬೇಕೆಂದು ಬಯಸುವ ಕ್ರಿಕೆಟಿಗ. ಬ್ಯಾಟಿಂಗ್‌ನಲ್ಲಿ ಬಹಳ ಬೇಗನೆ ಫಾರ್ಮ್​ ಕಂಡುಕೊಳ್ಳುತ್ತಾರೆ. ಫಿಟ್‌ನೆಸ್​ ಕೂಡ ಅದ್ಭುತವಾಗಿದೆ. ವಿರಾಟ್​ ಯಾವಾಗಲೂ ಹೀಗೆಯೇ ಇರಬೇಕೆಂದು ನಾನು ಬಯಸುತ್ತಾನೆ.

ಹಲವಾರು ಬಾರಿ ನನ್ನ ಬಳಿ ವಿರಾಟ್​, "ನಾನು ವಿಭಿನ್ನವಾಗಿ ಮಾಡಬೇಕಾದ ಬೇರೆ ಏನಾದರೂ ಇದೆಯೇ?" ಎಂದು ಸಲಹೆ ಕೇಳುತ್ತಾರೆ. ನಾವು ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತೇವೆ. ನಾನು ಯಾವಾಗಲೂ ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ನೀಡುತ್ತೇನೆ. ಅದರಿಂದ ನಮ್ಮ ನಡುವಿನ ಬಾಂಧವ್ಯ ಗಟ್ಟಿಯಾಗಿದೆ. ಯಾವುದೇ ಪಂದ್ಯದ ಸಮಯದಲ್ಲಿ ನಮಗೆ ಮಾತನಾಡಲು ಹೆಚ್ಚುವರಿ ಸಮಯ ಸಿಗುತ್ತದೆ ಎಂದು ಧೋನಿ ಹೇಳಿದ್ದಾರೆ.

ಇದನ್ನೂ ಓದಿ: 'CSK ಶಾಶ್ವತವಾಗಿ ನಿಷೇಧಿಸಬೇಕು' ಫ್ಯಾನ್ಸ್​ಗಳಿಂದ ದೊಡ್ಡ ಆರೋಪ​: ಏನಾಯ್ತು?​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.